ಬೆಟ್ಟವನ್ನೇರುತ್ತೇರುತ್ತ ಕೆಳಗಿನ ದಾರಿಯನ್ನು
ನೋಡಿ, `ಅದು ಯಾವ ದಾರಿ?’ ಎಂದು
ಗೆಳೆಯನನ್ನು ಕೇಳುತ್ತೇನೆ;
`ನಾವು (ನಡೆದು) ಬಂದ ದಾರಿ ಅದೇ ಅಲ್ಲವೇ?’
ನಗುತ್ತಾ ಉತ್ತರಿಸುತ್ತಾನೆ.
ಹೌದು, ನಾವೆಲ್ಲರೂ ಅಪರಾಧ ಮತ್ತು ಒಳ್ಳೆಯತನಗಳಲ್ಲಿ
ಮುನ್ನಡೆ ಸಾಧಿಸಿದವರು.
ಬಂದ ದಾರಿಯ ಋಣ ತೀರಿಸುವ ಕೆಲಸ ನಮ್ಮದಲ್ಲ;
ತುದಿ ತಲುಪುವ ಅಗತ್ಯವೂ ಇಲ್ಲ.
*****