ಹದುಳವಿಲ್ಲದ ಬದುಕು ಬಹಳ ಕಂಡಿದ್ದೇನೆ.
ನಗು ನಗುತ್ತ ಹರಿವ ನದಿಯ ಉಸಿರು ಕಟ್ಟಿ ಒಣಗಿತ್ತು,
ನಳನಳಿಸುವ ಎಲೆ ವ್ಯರ್ಥ ಉದುರಿ ಬಿದ್ದು ಒಣಗಿತ್ತು,
ಹುಮ್ಮಸ್ಸಿನ ಮಣಕದ ಕಾಲು ಮುರಿದಿತ್ತು,
ನಿಶ್ಚಲ ಮಧ್ಯಾಹ್ನದ ತೂಕಡಿಕೆಯಲ್ಲಿ ಪ್ರತಿಮೆ ನಿಂತಿತ್ತು,
ಮೇಲೆ ಬಿಳಿ ಅರಳೆ ಮೋಡ ತೇಲಿತ್ತು,
ಅದರಾಚೆ ಬಾನೆತ್ತರದಲ್ಲಿ ರಣಹದ್ದು ವಿಹಾರ ಮಾಡಿತ್ತು
ದಿವ್ಯ ಔದಾಸೀನ್ಯದ ಶಕುನ ತಿಳಿಯಲಿಲ್ಲವಲ್ಲ.
*****
ಮೂಲ: ಯೂಜೀನ್ ಮಾಂಟೇಲ್ / Eugenio Montale