ಸಮಯವೆಲ್ಲ ನನ್ದೇ ಅನ್ನಿಸಿದಾಗ,
ಊಟಕ್ಕೋ ಟೀಗೋ ಯಾರೂ ಕರೆಯಲು ಬಾರದಿದ್ದಾಗ,
ಮೋಡ ಸಡಿಲವಾಗುತ್ತ, ಹರಡುತ್ತ, ಬಣ್ಣ ಕಳೆದುಕೊಳ್ಳುವುದನ್ನು ನೋಡಬಹುದು.
ಮನೆಯ ಮುಂದಿನ ಗೋಡೆಯ ಮೇಲೆ ಬೆಕ್ಕು
ಸಾವಧಾನವಾಗಿ ಗಂಭೀರವಾಗಿ ನಡೆಯುತ್ತಿರುವುದನ್ನು ನೋಡಬಹುದು.
ಈಗ ಪ್ರತಿ ಬೆಳಗ್ಗೆಯೂ ನನಗಾಗಿ ಕಾದಿರುವುದು
ಕೊನೆಯಿಲ್ಲದ ದೀರ್ಘ ರಾತ್ರಿ ಮಾತ್ರ,
ಕರೆಯುವವರಿಲ್ಲ, ನನಗಾಗಿ ಕಾಯುತ್ತಿರುವ ಮೈಯ
ಕುರುಡು ಸವಿಯೊಳಗೆ ಅಡಗಲು ಬಟ್ಟೆ ಕಳಚುವ ಆತುರವಿಲ್ಲ.
ಈಗ ಹಗಲಿಗೆ ಆರಂಭವಿಲ್ಲ.
ನನ್ನ ದನಿಯ ಏರಿಳಿತ ನಾನೇ ಕೇಳಲು
ಬೇಕಾದಷ್ಟು ಪ್ಲಾನು ಮಾಡಬಹುದು.
ಇದ್ದಕ್ಕಿದ್ದ ಹಾಗೆ ಜೈಲು ಚೆನ್ನ ಅನ್ನಿಸುತ್ತದೆ.
*****
ಮೂಲ: ಪೆಟ್ರೀಶಿಯಾ ಕ್ಯಾವೆಲ್ಲಿ / Patrizia Cavalli