ಕರಿಯ ಕಾಮಿ ಟಾಮಿ ಬೆಕ್ಕು
ಹಾಲು ಕುಡಿದು ಓಡಿತು
ಪರಚಿ ಹೋದ ಚಿರತೆ ನಂಜು
ಕಣ್ಣು ಮಂಜು ಮಾಡಿತು ||೧||
ಹಗಲಿನೆದೆಯ ರಾತ್ರಿ ಹುಣ್ಣು
ಹೆಚ್ಚಿ ಕೊಚ್ಚಿ ಹಾಕಿದೆ
ಸಾವು ಸಂತೆ ಹಾವು ಚಿಂತೆ
ಚಿಂದಿ ಚೂರು ಮಾಡಿದ ||೨||
ಸಾಕು ಶಿವನ ಹೋತು ಹರನೆ
ಹಗೆಯ ದೆವ್ವ ಸತ್ತಿತೊ
ಹೊಗೆಯ ಕಾಗಿ ಮಗಿಯ ಗೂಗಿ
ಹಾರಿ ಹಾರಿ ಹೋಯಿತೊ ||೩||
ಇನ್ನು ಮತ್ತೆ ಮರಳಿ ಮರಳಿ
ಅತ್ತು ತಿರುಗಲಾರೆನೊ
ನಿನ್ನ ಮೇಲೆ ನೂರು ಆಣೆ
ಮತ್ತೆ ಸಾಯಲಾರೆನೂ ||೪||
*****
ಬಹಳ ಉತ್ತಮವಾಗಿದೆ