ನಿನ್ನ ರಾಣಿಗೆ ನೀನೆ ಮೇಣೆಯು

ನಿನ್ನ ರಾಣಿಗೆ ನೀನೆ ಮೇಣೆಯು
ಅವಳೆ ನಿನ್ನಾ ಮೇನಕೆ
ಅವಳ ಅಪ್ಪುಗೆ ನಿನ್ನ ಮುಪ್ಪನು
ರೂಪ ಗೊಳಿಪಾ ರಾಧಿಕೆ ||೧||

ಅವಳ ಉಡಿಯಲಿ ತೂಗು ತೊಟ್ಟಿಲು
ನೂರು ಚುಂಬನ ಚಿಮುಕಿಸು
ನೀನೆ ಮಗುವೈ ಅವಳೆ ತಾಯೈ
ತಾಯ ಗಿಮಿಗಿಮಿ ತಿರುಗಿಸು ||೨||

ಅವಳ ಹೆಳಲಿನ ತೋಳ ಕೊಳ್ಳದಿ
ಬಳ್ಳಿಯಾಗೈ ಬೆಂತರಾ
ಅವಳ ಕಂಠದ ಕೊಳ ಕೊಳ್ಳದಲಿ
ಸಿಳ್ಳು ಹಾಕೈ ನಂತರಾ ||೩||

ಅವಳೆ ನಿನ್ನಾ ಮೌನ ಒಡೆದಳೆ
ಕೊಳಲು ಕುಲಿಲುಲು ಕೊಟ್ಟಳೆ
ಪುಟ್ಟ ದಟ್ಟಿಯ ಕಾಲು ಕುಣಿಯಿಸಿ
ಅವಳೆ ಗಂಡಾ ಎಂದಳೆ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಗುವಿನ ಪ್ರಶ್ನೆ
Next post ಜಾಸ್ತಿ ಬಾಡಿಗೆ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…