ಸೊಸೆಗೆ ಅತ್ತೆಯೆಂದರೆಕೋ ಕಾಣೆ
ಅರ್ಧ ಸತ್ಯ!
ಅತ್ತೆಗೆ ಸೊಸೆಯೆಂದರೆಕೋ ಕಾಣೆ
ಮಾತು ಮಾತಿಗೂ ತರ್ಕ||
ಅತ್ತೆ ಸೊಸೆಯ ಸಂವಾದವಂತೂ
ಒಮ್ಮೊಮ್ಮೆ ಆಧಾರ ಸಹಿತ
ಮತ್ತೊಮ್ಮೆ ಆಧಾರ ರಹಿತ|
ಅತ್ತೆ ಸೊಸೆಯರ ಮಾತಿನ ಚಕಮಕಿ
ಚಾರ್ತುಯತೆಯಂತೂ ಅದ್ಭುತ ಅಮೋಘ||
ಅತ್ತೆಯಾಗುವ ಮೊದಲು
ಸೊಸೆ ಎನ್ನುವುದನೇ ಮರೆತು|
ಅತ್ತೆಯಾದೊಡನೆ ಏಕಿಂತ
ಮಲತಾಯಿ ಧೋರಣೆ||
ಮುದ್ದು ಮಗಳಾಗಿ ಬೆಳೆದು
ಮನೆಯ ಸೊಸೆಯಾಗಿ ಬಂದೊಡನೆ
ಏಕಿಂತ ಭಿನ್ನತೆಯೋ ಕಾಣೆ|
ಮುಂದೆ ನೀನು ಅತ್ತೆಯಾಗೆ
ಅನುಭವ ಕಲಿಯಬೇಕಾಗಿದೆ ಅಪಾರ
ಅದನರಿತು ಅಮ್ಮನೆಂದು ಭಾವಿಸಿದರೆ
ನಿನ್ನ ಬದುಕು ಹಗುರ, ಬಾಳು ಬಂಗಾರ||
ಅತ್ತೆ ಎನ್ನುವಾ ಪದದಲಿದೆ
ಅಮ್ಮಾ ಎಂದು ಕರೆವ ಮೊದಲಕ್ಷರ
ನಂತರ ಬರುವುದೇ ಅತ್ತೆ ಎಂಬಾ ಸ್ವರ|
ಹಾಗೆಯೇ ಸೊಸೆಯೆನ್ನುವ ಪದದಲಿದೆ
ಸುವರ್ಣ, ಸುಕೋಮಲೆ, ಸುಮಂಗಲೆ|
ಇಬ್ಬರೂ ಹೊಂದಿ ಬಾಳಿದರೆ ಮನೆಯು
ನಂದನವನ, ಮಗನಬಾಳು ಸುಂದರ
ಗಂಡ ಮನೆ ಮಕ್ಕಳ ಸುಖಿಸಂಸಾರ||
*****