Home / ಲೇಖನ / ಇತರೆ / ವಿಶ್ವದ ಬೃಹತ್ ವಿಮಾನ ನಿಲ್ದಾಣ : ಕೌಲಲಂಪುರ

ವಿಶ್ವದ ಬೃಹತ್ ವಿಮಾನ ನಿಲ್ದಾಣ : ಕೌಲಲಂಪುರ

ಮಲೇಷಿಯಾದ ರಾಜಧಾನಿ ಕೌಲಲಂಪುರದಲ್ಲಿ ವಿಶ್ವದ ಅತಿದೊಡ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡಿದೆ. ಈ ಸುದ್ದಿ ಜಗತ್ತಿನನಾದ್ಯಂತ ಹರಡಿತು. ಇದೇ ಕೌಲಲಂಪುರದಲ್ಲಿ ೧೯೯೭ ರಲ್ಲಿ ಜಗತ್ತಿನ ಅತ್ಯಂತ ಎತ್ತರವಾದ ಕಟ್ಟಡವನ್ನು ನಿರ್ಮಿಸಿದ ಖ್ಯಾತಿ ಹೊಂದಿತ್ತು. ಹತ್ತುಸಾವಿರ ಹೆಕ್ಟೇರ್ (೨೪,೭೦೦ ಎಕರೆ ಪ್ರದೇಶ) ಸ್ಥಳದ ವ್ಯಾಪ್ತಿಯಲ್ಲಿ ಈ ವಿಮಾನ ನಿಲ್ದಾಣ ರಚಿತವಾಗಿದೆ.

ಮಲೇಷಿಯಾ ಆಗ್ನೇಯ ಏಷ್ಯಾದ ಪುಟ್ಟ ದೇಶ. ಇದರ ಜನಸಂಖ್ಯೆ ೧೮,೪೧೦,೦೦೦ ವಿಸ್ತೀರ್ಣ ೧೨೭,೩೧೬ ಚದರ ಕಿ.ಮೀಟರ್‍ಗಳು. ಆದರೂ ಈ ದೇಶಕ್ಕೆ ಜಗತ್ತಿನ ಬಹೃತ್ ನಿಲ್ದಾಣದ ಹಂಬಲ. ಕೌಲಲಂಪುರಿಗೆ ೭೦ ಕಿ.ಮೀ. ದೂರದಲ್ಲಿ ರೂಪುಗೊಂಡಿರುವ ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಲ್ಲಿಂದ ಬಸ್ಸಿನಲ್ಲಿ ತಲುಪಲು ಬೇಕಾದ ಸಮಯ ಎರಡು ಗಂಟೆಗಳು. ಈ ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರ ಆರಂಭವಾಗಿದೆ ಇಂಥಹದ್ದೇ ಬೃಹತ್ ನಿಲ್ದಾಣ ಹಾಂಕಾಕಾಂಗ್‌ನಲ್ಲಿ ಇದೆ.

ಬರಲಿರುವ ದಿನಗಳಲ್ಲಿ ವಿಮಾನಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಭಾರಿ ಸಂಖ್ಯೆಯಲ್ಲಿ ಹೆಚ್ಚಲಿದೆ. ಎಲ್ಲರಿಗೂ ವಿಮಾನಯಾನ ಕಲ್ಪಿಸುವುದು ನಿಲ್ದಾಣಾಧಿಕಾರಿಗಳ ಕರ್ತವ್ಯ. ಈಗಿನ ವಿಮಾನಗಳಿಗಿಂತ ಅತ್ಯಂತ ವೇಗವಾಗಿ ಹಾರಾಟ ನಡೆಸಬಲ್ಲ ಮತ್ತು ದೊಡ್ಡದಾದ ವಿಮಾನಗಳು ಬರಲಿವೆ. ಅವುಗಳಿಗೆ ತಕ್ಕಂತಹ ಉದ್ದನೆಯ ‘ರನ್‌ವೇ’ ಗಳು ಮತ್ತು ಟರ್ಮಿನಲ್‌ಗಳ ಅಗತ್ಯವಾಗಲಿದೆ. ಈ ಎಲ್ಲ ಭವಿಷ್ಯತ್ತಿನ ಬೇಡಿಕೆಯನ್ನು ಪರಿಗಣಿಸಿಯೇ ಕೌಲಂಪೂರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಚಿತವಾಗಿದೆ.

ಕೌಲಲಂಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾಧನೆ.

* ವಿಶ್ವದ ಅತ್ಯಂತ ಎತ್ತರವಾದ ವಾಯು ನಿಯಂತ್ರಣ ಗೋಪುರ (೧೩೦ ಮೀಟರ್ ೪೨೯ ಅಡಿಗಳ ಎತ್ತರ)

* ವಿಶ್ವದ ಅತ್ಯಂತ ದೊಡ್ಡದಾದ ವಿಮಾನ ನಿಲ್ದಾಣದ ಆರಾಮಶಾಲೆ (ಲಾಂಜ್) ೨,೭೦೦ ಚದರ (ಮೀಟರ್‌ಗಳು – ೩೦,೦೦೦ ಚದರ ಅಡಿಗಳು)

* ವಿಶ್ವದ ಅತ್ಯಂತ ಉದ್ದವಾದ ಸರಕು ಸಾಗಣೆ – ಬೆಲ್ಟ್ ಪದ್ಧತಿ ೩೩ ಕೀ. ಮೀಟರ್‌ಗಳು.

* ವಿಶ್ವದಲ್ಲಿಯೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಕಂಪ್ಯೂಟರೀಕೃತ ಗೊಂಡಿರುವ ನಿರ್ವಹಣಾ ವ್ಯವಸ್ಥೆಯನ್ನು ಒಳಗೊಂಡಿರುವ ವಿಮಾನ ನಿಲ್ದಾಣ ಇದಾಗಿದೆ. ಇಲ್ಲಿ ಪ್ರಯಾಣಿಕರ ಟಿಕೇಟ್ ಪರೀಕ್ಷೆಯಿಂದಾಗಿ ಅವರ ಸರಕುಗಳ ನಿರ್ವಹಣೆಯ ವರೆಗಿನ ಎಲ್ಲ ಕೆಲಸಗಳು ಕಂಪ್ಯೂಟರ್‍ನಿಂದಲೇ ಜರಗುತ್ತವೆ.

* ಸಾಫ್ಟ್‌ವೇರ್‌ ಮತ್ತು ಕಂಪ್ಯೂಟರ್‌ಗಳಿಗಾಗಿ ೬೫೦ ದಶಲಕ್ಷ ರಿಂಗಿಟ್ (೧೬೬ ದಶಲಕ್ಷ ಡಾಲರ್ ವೆಚ್ಚಮಾಡಲಾಗಿದೆ. ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ನಿರ್ಮಾಣವಾದ ಕೇವಲ ೪ ವರ್ಷಗಳಲ್ಲಿಯೇ ತಯಾರಾದ ನಿಲ್ದಾಣವೆಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

* ವಿಶ್ವದ ಅತ್ಯಂತ ಅತ್ಯಾಧುನಿಕ ರೇಡರ್ ವ್ಯವಸ್ಥೆಯನ್ನೊಳಗೊಂಡಿದೆ.

* ವಿಶ್ವದ ಅತ್ಯಂತ ಕಾಲಂಲೆಸ್ ಹ್ಯಾಂಗರ್ ಹೊಂದಿದೆ.

* ಸ್ಪೋಟಗಳನ್ನು ನಿಷ್ಟ್ರಿಯಗೊಳಿಸುವ ಆವರಣ ಇರುವ ವಿಶ್ವದ ಎರಡನೆ ನಿಲ್ದಾಣವಾಗಿದೆ. ಮ್ಯುನಿಚ್ ಈ ವ್ಯವಸ್ಥೆ ಇರುವ ಮೊದಲ ವಿಮಾನ ನಿಲ್ದಾಣ (ವೆಚ್ಚ ೩೨ ದಶಲಕ್ಷ ರಿಂಗಿಟ್) ಇದಾಗಿದೆ.

* ಮಲೇಷಿಯಾದಲ್ಲಿ ಈ ವರೆಗೆ ಈ ವಿಮಾನ ನಿಲ್ದಾಣಕ್ಕೆ ದುಡಿದಷ್ಟು ಕೆಲಸಗಾರರು ಯಾವುದೇ ಒಂದು ಯೋಜನೆಗಾಗಿ ಕಾರ್ಯನಿರ್ವಹಿಸರಲಿಲ್ಲ. ೫೦ ವಿವಿಧ ರಾಷ್ಟ್ರಗಳ ೨೫ ಸಾವಿರ ಕೆಲಸಗಾರರು ಪ್ರತಿದಿನವೂ ಕೆಲಸಮಾಡಿದ್ದಾರೆ.

* ಇಡೀ ವಿಶ್ವದಲ್ಲಿಯೇ ಅತ್ಯಾಧುನಿಕ ಅಗ್ನಿ ಶಾಮಕ ಘಟಕ ಈ ವಿಮಾನ ನಿಲ್ದಾಣದಲ್ಲಿ ಸ್ಥಾಪನೆಯಾಗಿದೆ.

* ೧೦೬ ವಿಮಾನಗಳು ಏಕಕಾಲದಲ್ಲಿ ಇಲ್ಲಿ ನಿಲುಗಡೆಯಾಗಬಹುದು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...