ಡಿಸೆಲ್ ಭಾಗ್ಯ

ದೊಡ್ಡ ಟ್ರಾನ್ಸ್‌ಪೋರ್ಟ್ ಕಂಪನಿಯ ಟ್ರಕ್ ಡ್ರೈವರನೊಬ್ಬ ಮನೆ ಕಟ್ಟಿಸಿದ. ಗೃಹ ಪ್ರವೇಶಕ್ಕೆ ಬಹಳಷ್ಟು ಜನ ಬಂದಿದ್ದರು. ಮಧ್ಯಾಹ್ನ ಬಂದವರಿಗೆಲ್ಲ ಸುಗ್ರಾಸ ಭೋಜನ. ಮತ್ತೆ ರಾತ್ರಿ ತನ್ನ ಖಾಸಾ ಜನರಿಗೆ ಭಾರೀ ಹೊಟೇಲಿನಲ್ಲಿ ಭರ್ಜರಿ ಪಾರ್ಟಿ ಏರ್ಪಡಿಸಿದ್ದ ಡ್ರೈವರ್‍.

ಇಬ್ಬರು ಡ್ರೈವರುಗಳು ಊಟ ಮಾಡಿಕೊಂಡು ದಾರಿಯುದ್ದಕ್ಕೂ ಮಾತಾಡುತ್ತ ಹೊರಟರು.

“ರಾಮುದಾದಾನ ಮನೆ ಬಹಳ ಸುಂದರವಾಗಿದೆ” ಎಂದ ಒಬ್ಬ.

“ಕಿಟಕಿ, ಬಾಗಿಲು ಎಲ್ಲಾ ಸಾಗವಾಣಿಯದಂತೆ” ಮತ್ತೊಬ್ಬನೆಂದ.

“ಗೋಡೆಗಳಿಗೆ, ನೆಲಕ್ಕೆ ಹಾಕಿಸಿದ ಗ್ರಾನೈಟ್ ಕಲ್ಲಿಗೆ ಲಕ್ಷ ರೂಪಾಯಿಗಳಂತೆ.”

“ರಾಮುದಾದಾ ನಮ್ಮ ಗಾಡಿಯಲ್ಲಿ ಕ್ಲೀನರ್‍ ಆಗಿದ್ದ. ಅವನು ಡ್ರೈವರ್‍ ಆಗಿದ್ದೆ ನಾಲ್ಕು ವರ್ಷದ ಹಿಂದೆ.”

“ಅವನು ಕಷ್ಟಪಟ್ಟು ದುಡಿದಿದ್ದಾನೆ.”

“ನಾನೂ ಅವನಂತೆ ಇಪ್ಪತ್ತು ವರ್ಷ ದುಡಿದಿದ್ದೇನೆ. ನಮಗೊಂದು ಸ್ವಂತ ಜಾಗಾ ಮಾಡಿಕೊಳ್ಳಲು ಆಗಿಲ್ಲ. ನಮ್ಮಂತೆ ಗುಡಿಸಲಲ್ಲಿ ಇದ್ದ ರಾಮುದಾದಾ ಈಗ ಭವ್ಯ ಬಂಗಲೆ ಕಟ್ಟಿಸಿದ.”

“ಅದೆಲ್ಲ ಅವನ ಭಾಗ್ಯ!”

“ಅಲ್ಲ; ಅದು ಡಿಸೆಲ್ ಭಾಗ್ಯ!”

“ಅಂದರೆ…..?”

“ನೀನು ರಾಮುದಾದಾನ ಮನೆಯ ಗೋಡೆಗಳನ್ನು ಮೂಸಿ ನೋಡಲಿಲ್ಲವೆ? ಅಲ್ಲಿ ಡಿಸೆಲ್ ವಾಸನೆಯೇ ತುಂಬಿತ್ತು”.

*****
ಹುಡುಕು ಪದ: ಡೀಸೆಲ್, ಡ್ರೈವರ್‍

ಕೀಲಿಕರಣ:
ವ್ಯಾಕರಣ ದೋಷ ತಿದ್ದುಪಡಿ: ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತಿಹಾಸದ ಯಾತ್ರೆ
Next post ಕುಂಬಾರಗ ಪದ ಬರಕೊಟ್ಟೆನು

ಸಣ್ಣ ಕತೆ

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…