ಅಲಿ ಸೂತ್ತರದಾಟಾ ಐಸುದದಿ
ಅಲಾವಿ ಬಲುದಾಟಾ ||ಪ||
ಕಲಿಯೊಳಗ ಹೆಚ್ಚಾದಿತು ಕರ್ಮವು
ಕೊಲಿಯುಕ್ಕಿ ಬರಬರಿತು ಭೂಮಿಗೆ
ದುಷ್ಕಾಳದ ಮಾಟ ಐಸುರದಿ
ಅಲಾವಿ ಬಲುದಾಟಾ ||ಅ.ಪ.||
ನೊಂದಿತು ಬಹುಮಂದಿ
ಗಂಜಿ ಕುಡಿ ಕುಡಿದು ಹೋದರು ಕುಂದಿ
ಮಂದಿ ಕೆಡಸಿ ಹನ್ನೊಂದು ಜಿಲ್ಹೆಯೊಳು
ಹೆಂಡರು ಮಕ್ಕಳು ಮಾರಿಕೊಂಡು ಒಳೆ
ದಂಡಿನ ಪಡಿಪಾಟಾ ಐಸುರದಿ
ಅಲಾವಿ ಬಲುದಾಟ ||೧||
ಮಲ್ಲಾಡ ಹಳವದೊಳಗೆ
ಕೂಳಿಲ್ಲದೆ ತಿಂದಾರೋ ಕೊಬ್ಬಟ್ಟ
ತಾಳಿ ಹರಿದು ಬಡಕೊಂಡು ಗಳಿಸಿದವ
ತಾಳಿಬಳ್ಳಿ ಪಡಿಜೋಳಕ ಸಾಲದೆ
ಕೂಳಿನ ಮೊಬ್ಬಾಟ ಐಸುರದಿ
ಅಲಾವಿ ಬಲುದಾಟ ||೨||
ಬಹಳ ತಿಳಿಯದರವು
ರಮಲ ರಟ ಕಾಲಜ್ಞಾನದ ಕುರುಹು
ಮೂಲ ತಿಳಿದು ಉಸುರಿದನು ರಿವಾಯತ
ಭೂಮಿಪ ಶಿಶುನಾಳಧೀಶನು ತಾನು
ಹೇಳಿದ ಘಟ್ಟಿಮುಟ್ಟಾ ಐಸುರದಿ
ಅಲಾವಿ ಬಲುದಾಟ ||೩||
*****