ಯಾ ಇಮಾಮ ಹಸನೈನ ಎನ್ನುತಲಿ
ಭೂಮಿ ಸ್ಥಲದಲಿ ಯುವಜಾತ ನೇಮಗೊಂಡು
ವನವಾಸ ಹೊರಟನು ವಿರಾಟನಲ್ಲಿ ಇದ್ದನು ಜೀತಾ ||ಪ||
ಬಗಿಯನರಿಯದೆ ಶಕುನಿ ಸಾರಿದ
ಆಗ ಪಾಂಡು ಪುಣ್ಯಕದಾತಾ
ವಿಗಡ ಕಾಳಿಕಾ ಬಂದು ಕಾಡುತಿರೆ || ಆ. ಪ.||
ಜಗದೊಳಗೆ ದ್ರೌಪದಿ ಸೋತಾ
ಮುಕ್ತಿಕಾಂಬುವ ಮಾರ್ಗದಿ ರೂಪ ಅಳಿದು ನಿಂತಾ
ಸಕಲ ರಾಜ್ಕ ಸೌಭಾಗ್ಯಪದತ್ವ
ಅಖಿಳವಾಗಿ ಎಲ್ಲನು ಸೋತಾ
ಅಖಿಳ ಧರ್ಮದ ಸಾರವ ಹಿಡಿದು
ವಿರಾಟರಾಜನ ಗರಿಗೆ ಬೆದರಿ ತಾ || ೧ ||
ಧಾತ್ರಿಯೊಳು ಹದಿಮೂರು ಸಂವತ್ಸರ
ವೃತ್ತದಿಂದ ತಿರುಗುತ್ತಿರಲು
ಉತ್ತರಕುಮಾರನ ಜಗಳದಿ ಹೋಗಿ
ಅರ್ಜುನನು ಬಿಡಿಸುತ್ತಿರಲು
ಸತ್ಯ ಪಾಂಡು ಪುತ್ರರಿಗೆ ಗೊತ್ತು
ಶಿಶುನಾಳ ರಿವಾಯತ || ೨ ||
*****