ಉಗಿ ಶಕ್ತಿಯಿಂದ ರೈಲು ಯಂತ್ರದ ಚಾಲನೆ, ಪೆಟ್ರೋಲ್ ಸ್ಪೋಟನ ಶಕ್ತಿಯಿಂದ ವಾಹನಗಳ ಯಂತ್ರಗಳ ಚಾಲನೆಯಾಗುವುದನ್ನೂ ಕಂಡಿದ್ದೇವೆ. ಆದರೆ ಶಬ್ದದಿಂದ ಶಕ್ತಿಯಾಗಿ ಅದು ಯಂತ್ರಗಳಿಗೆ ಕಾರಣವಾಗುತ್ತದೆಂಬುವುದು ವಿಶೇಷ. ಈ ಸಂಶೋಧನೆಯನ್ನು ಟೆಮ್‌ಲುಕಾಸ್ ಅವರು ಮಾಡಿದ್ದಾರೆ.
ಮೈಕ್ರೋ ಸೋನಿಕ್ಸ್ ಎಂಬ ಕಂಪನಿಯು ತಯಾರಿಸಿದ ರಿಸೊನೆಂಟ್ ‘ಮೈಕ್ರೋ ಸೋನಿಕ್ ಸಿಂಥೆಸಿಸ್’ ಎಂಬ ಉಪಕರಣದಿಂದ ಶಬ್ದಕ್ಕೆ ಶಕ್ತಿ ಇದೆ ಎಂದು ಕಂಡು ಹಿಡಿಯಲಾಗಿದೆ. ಶಬ್ದಕ್ಕೆ ಅಲ್ಪ ಪ್ರಮಾಣದ ಶಕ್ತಿ ಇದ್ದರೂ ಅದನ್ನು ಶಂಖುವಿನಾಕಾರದ ನಳಿಕೆಯ ಮೂಲಕ ಶಾಕ್ ರೀತಿಯಾಗಿ ಹರಸಿದರೆ ಅಪಾರವಾದ ಶಕ್ತಿಯನ್ನು ಹೊಂದುತ್ತದೆ. ಇದನ್ನು ವಿಶೇಷವಾಗಿ ರೆಪ್ರಿಜರೇಟರ್‌ನ ಪಂಪುಗಳಿಗೆ ಬಳಸಲಾಗುವುದು.
*****