ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ
ಸಾಂಬ ಕೇಳು ನಮ ವಿಟರಾರು
ತುಂಬಿದಂಥ ಕುಚ ಕುಂಭದಿ ಅಮೃತ ನಂಬಿಕೊಂಡಂತೋರು
ಅಂಬರದೊಳಗಿರುವ ಜಾತಿಗಳಿಗೆ ಇಂಬುಗೊಟ್ಟವರು
ಜಂಬದ ವಿಟವಿದೂಷಕನಾಗಲು ಪೀಠಮದ೯ನಿಕರೇಬುವರು
ಕುಂಭಿನಿಯೊಳು ಈ ವಿಷಯ ಕರಡಂಬಕತನದಲ್ಲಿ ಮೆರೆಯುವರು
ರಂಭೆರು ಲೋಕದಿ ಕಂಭನಡಿಸಿ ಅವಲಂಬನದೊಳು ಮರಿಗೊಂಬುವರು
||ಇಳವು||
ಮುಂಭಾಗವ ರೋಹಿಣಿ ಚಂದ್ರನ ಬೀರಿ ಬೆಂಬಲದಿ ಅಶ್ವಿನಿಯ ತಾರಿ
ಹಿಂಭಾಗ ಮುಖಾ ಭುಜರಸ ವಿದೂಷಕ ಸಾರಿ
ಹಿಂಭಾಗದರೋ ಸುಖದೋರಿ
||ಏರು||
ತುಂಬಿಲ ರಂಧ್ರದಿ ತವಕ ತೂರ್ಯ ಅದ
-ರುಂಬುವ ಪಾನದ ಪಾಕ ಮದುರ
ತುಂಬಿದಂಥ ಕುಚ ಕುಂಭದಿ ಅಮೃತನಂಬಿಕೊಂಡು ಪುರುಷನ ತೋರು || ೧ ||
ನಾಗಲೀಕ ನಾರಾಯಣ ಲಕ್ಷ್ಮಿಸಹವಾಸದಲಿ ಸರಸದ ಘೋರಾ
ಬ್ಯಾಗ ಬ್ರಹ್ಮ ಸರಸ್ವತಿ ಸಂಯೋಗದಿ ಮೇರು ಕಿರಣದಿಂದ್ರಿಯ ಮೋರಾ
ಜಾಗಲಾಗ ಪಾರಾಗ ರುದ್ರಗ ಹೋಗಿ ಕಾಳಿ ತಾಳಿದ ವಿವರಾ
ಸಾಗುತಿಹುದು ಸುರಿದಾಂಕುರ ಮೂಗಿನ
ಮೇಘ ಹೊಳೆಯುವ ರೇಖವು ಮೂರಾ
||ಇಳವು||
ಭೋಗಕ್ಕೆ ಹಸ್ತಿನಿಯ ಜೋಡು
ರಾಗಂಗ ರೋಮದ ಕೋಡು
ಮ್ಯಾಗ ಬಂದು ಬೀಳುವದು ನೋಡು
ನೀಗುವದಲ್ಲೆ ಮನ್ಮಥನ ಬೀಡು
||ಏರು||
ಸೂಸುತಿಹುದು ಯವ್ವನದಿ ಮನಸಿಜನ ಬೀದಿಯೊಳಗೆ
ಕಾಮಶಾಸ್ತ್ರಕರತುಂಬಿದಂಥ ಕುಚಕುಂಭದಿ
ಅಮೃತ ನಂಬಿಕೊಂಡ ಪುರುಷನ ತೋರು
ಹಟದಿ ಶಿವೆ ಬೆಸಗೊಳ್ಳಲು ಶಿವ ತಾ ತಿಳಿಸಿದ ಸಾರು
ಪಟಹ ಬರದು ಚಿತ್ರದಲಿ ರೂಪಿಸಲು
ನಿಟಗೊಳಿಸಿತು ಹೃದಯದ ಬೇರು
ಮಟನೋಟವು ಕಮಟಕರ ಭೂಟಕ ಪದ್ಮಿನಿಯ ಮೈಬೆವರು
ಚಟುಲ ಕಟಾಕ್ಷದಿ ಪರಶಿವ ಪೇಳಲು
ಧಟಿತವಾದ ಶರೀರದ ಕವಲು
ಕುಟಿಲ ಕೋಹರತಿಮಾರಗ ಹೊಳೆಯಲು
ಘಟನೆ ನಿಮಗ ತಿಳಿಸಿದ ಸಾರು
||ಏರು||
ಶಂಕಿನಿಗ ಸಪ್ತಋಷಿ ಬೆದರಿ
ಜಟ ಹರಕೊಂಡರು ಪಲುವದರಿ
||ಇಳವು||
ನಿಟಿಲನೇತ್ರ ಶಿಶುನಾಳಧೀಶಗ ಅಷ್ಟ ಜನರು
ಸ್ತ್ರೀ ಪುರುಷರು ತುಂಬಿದಂಥ ಕುಚಕುಂಭದಿ
ಅಮೃತ ನಂಬಿಕೊಂಡ ಪುರುಷನ ತೋರು || ೩ ||
*****