ನೋಡಿದ್ಯಾ ಕಪ್ಪಿ ನೋಡಿದ್ಯಾ

ನೋಡಿದ್ಯಾ ಕಪ್ಪಿ ನೋಡಿದ್ಯಾ
ಕೂಡಿ ಜೋಡಿಲೆ ಮೇಲೊಂದಡರಿಕೊಂಡಾಡ್ವದು ||ಪ||

ಗುಳಿ ಗುಳಿ ಧ್ವನಿಯಿಂದ ಸುಳಿದಾಡುವ ಕಪ್ಪಿ
ಇಳಿ ಜನರಿಗೆ ಭಯಪಡಿಸುವ ಕಪ್ಪಿ
ಹೊಳೆಯು ಶರಧಿ ಸಣ್ಣಹಳ್ಳಕೊಳ್ಳದೊಳಗಿರು
ಮಳಿಗಾಲ ತರಸುವ ಮೋಜಿನ ಕಪ್ಪಿ ||೧||

ಶಿವನ ತೊಡಿಯ ಕೆಳಗಿರುವಂಥ ಕಪ್ಪಿ
ಭುವನದಿ ಹಾರ‍್ಯಾಡೋ ಹವಣಿಯಿ ಕಪ್ಪಿ
ತವಕದಿ ಶಿವನೊರವಿಲೆ ಪೋಗಿ ಲಂಕೆಯ
ಪುರದ ಪತಿ ರಾವಣಗ ಸತಿಯಾದ ಕಪ್ಪಿ ||೨||

ಶಿಶುನಾಳಧೀಶ ರಕ್ಷಿಸಿದಂಥ ಕಪ್ಪಿ
ವಸುಧಿಯೋಳ್ ಎಸೆದಂಥಾ ಹಸನಾದ ಕಪ್ಪಿ
ಕುಶಲದಿ ತರ್ಲಘಟ್ಟದ ಕೆರಿ ನೀರೊಳ್
ದೆಶೆವಡಿಯುತ ಜಿಗಿದಾಡುವ ಕಪಿ ||೩||

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಯಕೆ
Next post ಬಾಂಧವ್ಯ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…