ನಂ ಮುನಿಯಂದು ಜರ್‍ಬು

ಯಿಂದೆ ಲೋಟ್ದಾಗ್ ನೀರ್ ಇಟ್ಕೊಂಡಿ ‘ಚೂ ಮಂತ್ರಾ’ಂದ ಏಸು! ಇಟ್ ನೀರೆಲ್ಲ ಯೆಂಡ್ ಆಗೋಯ್ತು! ಅದು ಕೆಲಸ! ಬೇಸು! ೧ ಮಾತ್ಗೇಳ್ತೀನಿ- ಯಿಂದಿನ್ ಕಾಲ್ದಾಗ್ ಎಂತೆಂತೋರ್ ಇದ್ರಂತ! ಈಗ್ಲು ಔರೆ-ದೊಡ್ ಪಡಕಾನೆ ಇಟ್ಟಾಕ್ಸ್ನೇನೆ ಬಂತ!...

ಸತ್ಯಸಂಕಲ್ಪ

ಜನ್ಮ ಜನ್ಮಾಂತರದ ಸತ್ಯ ಸಂಕಲ್ಪವೇ, ಫಲಹೊಂದು ಕಾಲ ಬಂದಾಗ. ಒಗರಿಳೆದು ಹುಳಿ ಹೋಗಿ, ಸವಿ ಹವಣುಗೋಳುತಿರೆ, ಬಣ್ಣ ಹೊಂಬಣ್ಣ- ಕೇರುತಿರೆ, ಬಳುಕಿ ಗಾಳಿಗೆ, ಬೆಂದು ಬಿಸಿಲಿನಲಿ, ನಾನು ಕಾಯುವೆ; ಹಸಿವ ಎಸರೇರಿ ಕುದಿಬಂದು ಉಕ್ಕಿ...

ನಾವೆಲ್ಲಾ ಒಂದೇ

ಕೆಲವು ಪರಿವಾಳಗಳು ಮಡಿಗೆ ಶ್ರೇಷ್ಠ ಜಾಗವೆಂದು ಗುಡಿ ಗೋಪುರದಲ್ಲಿ ವಾಸವಾಗಿದ್ದವು. ಮತ್ತೆ ಕೆಲವು ಪಾರಿವಾಳಗಳು ಅಲ್ಲೇ ಅನತಿ ದೂರದಲ್ಲಿದ್ದ ಪಾಳು ಕೋಟೆಯಲ್ಲಿ ನೆಲೆಗೊಂಡಿದ್ದವು. ಎರಡು ಗುಂಪೂ ತಪ್ಪದೇ ದಿನವೂ ಗದ್ದೆ, ಹೊಲ, ಬಯಲು, ಹಸಿರಿನಲ್ಲಿ,...

ಮೋಸ ಮೂಲವೆಲ್ಲಿಹುದು? ಮನಸಿನಲ್ಲೊ? ಮರಗೆಣಸಿನಲ್ಲೊ?

ಹಸಿವಿನೊಳಂದು ಗತಿಗೆಟ್ಟು ಮರಗೆಣಸು ಬೇ ಯಿಸುತುಣುತಿದ್ದೆವೆಂದು ವಿಷಾದದೊಳೆನುವರುಂಟು ವಿಷಾದವಿಂದಧಿಕ ಜನ ಮತಿಗೆಟ್ಟು ತಿನ್ವರಲಾ ಮರಗೆ ಣಸನೇಕತರ ಕಲಬೆರಕೆಗೊಳ್ಳುತಿರಲೆಮ್ಮನ್ನದೊಳು ಶಿಶು ಡಬ್ಬದೊಳದುವೆ ಇರುತಿರಲೆಲ್ಲರಾ ಬುದ್ದಿ ಕಲಬೆರಕೆ - ವಿಜ್ಞಾನೇಶ್ವರಾ *****

ಕೋಲಾಟದ ತುಂಡು ಪದಗಳು (ಚಿತ್ತಾರ ಬೊಂಬೆ)

ಚಿತ್ತಾರ ಬೊಂಬೆ ನೀ ಯೆತ್ತಲಾಗ್ ಹೋದೇ? ಯೆತ್ತಲಾಗಿ ಹೋದಾರೇನು? ಚಿತ್ತ ನಿನ ಮೇನೇ || ೧ || ಮೋವದಾ ಬೊಂಬೆ ನೀ, ಮೋ ಸ ಮಾಡಿ ಹೋದೇ ಮೋಸ ಮಾಡಿ ಹೋದರೇನು? ದೇಸ ನಿನ್ನ...
ಮಲ್ಲಿ – ೨

ಮಲ್ಲಿ – ೨

ಪಟೇಲ್ ಪುಟ್ಟಸಿದ್ದಪ್ಪ ನಾಯಕನ ಮನೆಯಲ್ಲಿ ಅಂದು ಅಮಲ್ದಾರ್ರಿಗೆ ಔತಣ. ತಾಲ್ಲೋಕಿನ ದಣಿಯೆಂದು ಅಮಲ್ದಾರ್ರಿಗೆ ಗೌರವವಾದರೆ, ಆಗರ್ಭ ಶ್ರೀಮಂತನೆಂದು ಪಟೇಲನಿಗೆ ಗೌರವ. ಸಾಲದೆ ದಿವಾನ್ ಪೂರ್ಣಯ್ಯನವರನ್ನೂ ತಮ್ಮ ಮನೆಗೆ ಕರೆದುಕೊಂಡು ಬಂದು ಫಲತಾಂಬೂಲ ಒಪ್ಪಿಸಿದ ಮನೆತನ...

ಸದಾ ಸುಖಿ

ಜಾತ್ರೆ ಜಾತ್ರೆ ಜಾತ್ರೆ ಜೀವನದೀ ತಾಣವೇ ಜಾತ್ರೆ ಇಲ್ಲಿ ಬಂದು ನೀನು ನಿನ್ನ ಮರೆತು ಹಿಡಿದಿರುವೆ ನಿನಗಾಗಿ ಸ್ವಾರ್‍ಥ ಪಾತ್ರೆ ಇವರು ನಿನ್ನ ತಾಯಿ ತಂದೆಯರೇ ಇವರು ನಿನ್ನ ಬಾಳುರಂಗಿಸುವರೇ ನಿನ್ನ ಮೂಲದ ಪಾಲಕರ...

ಉಮರನ ಒಸಗೆ – ೨೪

ಬಿದಿಯೆನ್ನ ಕೇಳದೆಯೆ, ಎತ್ತಣಿಂದಲೊ ಬರಿಸಿ, ಮತ್ತೆನ್ನ ಕೇಳದೆತ್ತಲಿಗೊ ಕಳಿಪುವುದೆ? ಹಾ! ಒಂದು ಬಟ್ಟಲನು ತಾರಿಲ್ಲಿ ಮತ್ತೊಂದ ನದರೊಳೀ ದುರುಳತೆಯ ನೆನಪ ಮುಳುಗಿಪೆನು. *****

ಏನೂ ಮಾಡದೆ

ಏನೂ ಮಾಡದೆ ಏನೂ ತಡೆಯದೆ ನಾ ನೋಡುತ ಇದ್ದೇನೆ ಹೋದವರಾರೂ ಬಂದೇ ಇಲ್ಲ ಬಂದವರಿಗೊಂದೂ ಗೊತ್ತೇ ಇಲ್ಲ ನಾ ನೋಡುತ ಇದ್ದೇನೆ ಏನೂ ಮಾಡದೆ ಇದ್ದೇನೆ ವಾಹನ ಹೊರಟಿವೆ ಎಲ್ಲಿಗೊ ಸ್ವಾಮಿ ಹಾರುವ ಹಕ್ಕಿ...

ಜೀರುಂಡೆಯ ಮೇಳ

ಕದ್ದಿಂಗಳಿನಿರುಳು: ಬುವಿ ಬಾನಂತರವೆಲ್ಲವ ಕತ್ತಲು ತುಂಬಿರಲು, ದೆಸೆಯಳಿಯದೆ ನಿಲಲು ತಮಕಿವು ಸೇತುವೊ ಎನೆ ದಟ್ಟೈಸಿರೆ ತಾರೆಗಳು, ಭೂತ ಭವಿಷ್ಯವನು ಮುಸುಕಿನೊಳವಿತಿಟ್ಟಂತಿಳೆ ಹೊದೆದಿರೆ ಮೌನವನು, ಸೆರೆಬಿದ್ದಿಹ ಕಾಲ ಹುಯಿಲಿಡುವುದೊ ಎನೆ ಜಿರ್ರನೆ ಜೀರುಂಡೆಯ ಮೇಳ! *****