ಏನೂ ಮಾಡದೆ

ಏನೂ ಮಾಡದೆ ಏನೂ ತಡೆಯದೆ
ನಾ ನೋಡುತ ಇದ್ದೇನೆ
ಹೋದವರಾರೂ ಬಂದೇ ಇಲ್ಲ
ಬಂದವರಿಗೊಂದೂ ಗೊತ್ತೇ ಇಲ್ಲ

ನಾ ನೋಡುತ ಇದ್ದೇನೆ
ಏನೂ ಮಾಡದೆ ಇದ್ದೇನೆ

ವಾಹನ ಹೊರಟಿವೆ ಎಲ್ಲಿಗೊ ಸ್ವಾಮಿ
ಹಾರುವ ಹಕ್ಕಿ ಆಡುವ ಕೀಟ
ಹರಿಯುವ ನದಿ ಹರಿಯುತ್ತಲೆ ಇದೆ
ಗಾಳಿಗೆ ಎಲೆಗಳು ಉದುರುತ್ತಲೆ ಇವೆ

ನಾ ನೋಡುತ ಇದ್ದೇನೆ
ಏನೂ ಮಾಡದೆ ಇದ್ದೇನೆ

ಮಳೆ ಸುರಿಯುತಿದೆ
ಮೋಡವು ಮುಗಿಯುತಿದೆ
ಏಳುತ್ತಲೆ ಇವೆ ನೀರ ಗುಳ್ಳೆಗಳು
ಏಳುತ್ತಲೆ ಅವು ಸಾಯುತ್ತಲು ಇವೆ

ನಾ ನೋಡುತ ಇದ್ದೇನೆ
ಏನೂ ಮಾಡದೆ ಇದ್ದೇನೆ.

ಕಂತುವ ಸೂರ್‍ಯನು ಬೀಳುವ ತಾರೆ
ಸುತ್ತಲು ಹರಡುವ ಭಾರೀ ಕತ್ತಲು

ನಾ ನೋಡುತ ಇದ್ದೇನೆ
ಏನೂ ಮಾಡದೆ ಇದ್ದೇನೆ

ಒಂದರ ಹಿಂದೊಂದು ಕನಸುಗಳೆದ್ದು
ನಿಲ್ಲದ ತಿರುಗಣೆ ಮಡುವಲಿ ಬಿದ್ದು
ನೆನಪುಗಳೆಲ್ಲಾ ಕಲಸಾಗುತ್ತಿವೆ
ಸ್ಮೃತಿ ವಿಸ್ಮೃತಿಗಳು ಒಟ್ಟಾಗುತ್ತಿವೆ

ನಾ ನೋಡುತ ಇದ್ದೇನೆ
ಏನೂ ಮಾಡದೆ ಇದ್ದೇನೆ

ಪದಕಾರರು ಪದಗಳ ನುಡಿಸಿ
ಭಾಷೆಗೆ ವಚನದ ದೀಕ್ಷೆಯ ಕೊಡಿಸಿ
ಋಷಿ ಮುನಿಗಳು ಮಂತ್ರವ ಪಠಿಸಿ
ದೇಹದ ಬಂಧನದಿಂದಾತ್ಮವ ಬಿಡಿಸಿ

ನಾ ನೋಡುತ ಇದ್ದೇನೆ
ಏನೂ ಮಾಡದೆ ಇದ್ದೇನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀರುಂಡೆಯ ಮೇಳ
Next post ಉಮರನ ಒಸಗೆ – ೨೪

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…