ಚಿತ್ತಾರ ಬೊಂಬೆ ನೀ ಯೆತ್ತಲಾಗ್ ಹೋದೇ?
ಯೆತ್ತಲಾಗಿ ಹೋದಾರೇನು? ಚಿತ್ತ ನಿನ ಮೇನೇ || ೧ ||
ಮೋವದಾ ಬೊಂಬೆ ನೀ, ಮೋ ಸ ಮಾಡಿ ಹೋದೇ
ಮೋಸ ಮಾಡಿ ಹೋದರೇನು? ದೇಸ ನಿನ್ನ ಮೇನೆ || ೨ ||
ಗೊಂಡಿ ಹೂಗಿಂನ ಮಾಲೀ, ಪುಂಡಿರ ತುರಬೀನ ಮೇನೇ
ನೋಡ್ ನನ್ ಕೋಲ್ ಪದನಾ ಚಿನ್ನದ ದುರೂಗದ ಮೇನೇ || ೩ ||
ಅಲ್ ಬಿತ್ ಮೂಗ್ತೀ ಇಲ್ ಬಿತ್ ಮೂಗ್ತೀ
ಬಾವನೋರ ಮೊಕ ನೋಡಿ ಬಾವಿಲ್ ಬಿತ್ತು ಮೂಗ್ತೀ || ೪ ||
ಅಕ್ನಮಂಡೆ ಸೋಗ್ ಮಂಡೆ ನನ್ನ ಮಂಡೆ ಗುಜರ್ ಮಂಡೆ
ಅಕ್ನ ಬಿಟ್ ಹೋಗೋ ಬಾವಾ ನನ ತಕ ಹೋಗೋ || ೫ ||
ಪುಂಡಗಾರ ಹಣ್ಣೇ
ಉದುರಂಗೀ ಹೂಂಗೇ ಉದರೇ ನನ್ನಂಗಳಕೇ || ೬ ||
ಚದುರರು ಚೂಡುವರು ಬರುಹೊತ್ತು ಮಲ್ಲುಗಿ ಹೊಂಗೇ
ಉದುರೇ ನನ್ನ ಸಾಲೀ ಸೆರಗೀಗೆ || ೭ ||
*****
ಹೇಳಿದವರು: ತಿಮ್ಮು ಮಾರಿ ನಾಯ್ಕ, ತಾರಿಬಾಗಿಲ, ಹೆಗಡೆ ಊರು
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.