ತನ್ನೆಲೆಯ ಕಳೆದೇನು ವನವೋ? ಜೀವನವೋ?

ಏನಿದೇನಿದಕಟಾ ನಾವಿರ್ಪಲ್ಲೆ ಇರುತಿದ್ದೆಮ್ಮ ಬೇಕುಗಳೆಲ್ಲ ವನು ಕೊಂದಾಯ್ತು ನೀರನ್ನಗಳನು ತಿಂದಾಯ್ತು ಇನ್ನುಳಿದಿಹುದೊಂದೆ ಗಾಳಿಯದರಂತರುಷ್ಣತೆ ಯನೇರಿಸಿರಲದಕು ಅಭಾವ ಬಂದಾಯ್ತು ಇನ್ನೇನಿದ್ದೊಡಂ ಇರುನೆಲೆಯ ಕೃಷಿಯೊಂದ ಬದುಕಿಗಾಧಾರ - ವಿಜ್ಞಾನೇಶ್ವರಾ *****

ಮಲಗಿದ್ದೆ

ಸರ್ಕಾರಿ ಕಛೇರಿ ಕ್ಲರ್‍ಕ್ ಶೀಲಾಳಿಗೆ ಬಾಸ್ ಕೇಳಿದ "ಯಾಕೆ ಇವತ್ತೂ ಲೇಟು.." "ಸಾರ್ ಬೆಳಿಗ್ಗೆ ಏಳುವುದು ಲೇಟಾಯಿತು.." "ಏನು ಮನೆಯಲ್ಲೂ ನಿದ್ದೆ ಮಾಡ್ತೀರಾ?" ಎಂದು ಕೇಳಿದ ಬಾಸ್. *****

ಸಂಕ್ರಾಂತಿ

ಹುಟ್ಟು ಸಾವುಗಳ, ನೋವು ನಲಿವುಗಳ ಬದುಕಿದು ಬರೀ ಭ್ರಾಂತಿ ಆಸೆನಿರಾಸೆಗಳ ನಡುವೆ ತೂಗಿದೆ ಸಂತಸದ ಸಂಕ್ರಾಂತಿ ಮಾಗಿಯ ಪೊರೆಯದು ಕಳಚುತ್ತಾ ತೆರಳಿದೆ ಕಾಣಲು ಹೊಸ ವರುಷ ಸಿಹಿ ಸಿಹಿ ಮಾತಿನ ತೋರಣ ಕಟ್ಟಿದೆ ಸಂಕ್ರಾಂತಿಯ...
ವಚನ ವಿಚಾರ – ನೀನು ನಾನು

ವಚನ ವಿಚಾರ – ನೀನು ನಾನು

ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆ ಅಯ್ಯಾ ಎನ್ನೊಳಗೆ ಇನಿತಿರ್ದು ಮೈ ದೋರದ ಭೇದವ ನಿಮ್ಮಲ್ಲಿ ಕಂಡೆ ಕಾಣಾ ಚೆನ್ನಮಲ್ಲಿಕಾರ್ಜುನಾ [ಇನಿತಿರ್ದು-ಇಷ್ಟು ಇದ್ದು, ಹೀಗೆ ಇದ್ದು] ಅಕ್ಕಮಹಾದೇವಿಯ ವಚನ. ನಾನು ಯಾರು...

ಕೊನೆಯಾಶೆ

ಹೊಸದಿನದ ಹೊಸತುತ್ತೂರಿಯ ದನಿ- ಯು ಹೃದಯವನು ಸೇರೆ, ಕುದಿರಕ್ತ ತಳಮಳಿಸಲಾ ನವಜವ್ವನೋತ್ಸಾ- ಹದಲಿ ಪಂಜರದೊಳಿಹ ಗಿಳಿಯ ಹೊ- ರಗೆಳೆದು ತೂರಿ ತೇಲಲು ಬಿಟ್ಟು, "ಸೌಖ್ಯದಾಕಾಶದಲಿ ಮುಗಿಲು- ಹಣ್ಣುಗಳ ಸವಿದು ಶಾಂತಿಸರಕಿ- ಳಿದು ತಿಳಿನೀರನೀಂಟಿ ಸತಿ...

ಅಲ್ಲಮನೆಂದರೆ

ಮನಸ್ಸಿನಾಳಕೆ ಇಳಿದ ನಿಮ್ಮ ಘನ ವೇದ್ಯ, ಪಾಪ ಪುಣ್ಯ ಸುಖ ದುಃಖ ಎಲ್ಲವ ದಾಟಿ ಮರಣವನು ಜನನವಾಗಿಸಿ, ಕಾಲ ಸರಿದ ಮಹಿಮೆ ಅವನ ನಿಜ ಒಲವು. ಎಲ್ಲ ವಿಷಯಗಳ ಅರಿದೆನೆಂಬ ಅಹಂ ಭಾವ ನಿಜದ...

ಭಾರತಾಂಬೆಯ ಮಕ್ಕಳು

ಭಾರತಾಂಬೆಯ ಮಕ್ಕಳು ನಾವು ಹೆಮ್ಮೆಯ ಭಾರತೀಯರು ನಾವು ಸುಂದರ ವನಗಳ ಪುಷ್ಪಗಳು ನಾವು | ಮಾತೆಯ ಪಾದಕೆ ಅರ್ಪಿತವು || ಭಾ || ಭಾವೈಕ್ಯದಲಿ ಒಂದಾಗುವೆವು ಒಂದೇ ಮತ ಎನ್ನುವೆವು ನಮ್ಮದು ಒಂದೇ ಮತ...

ಕಾರ್‍ಗಿಲ್ ಹಾಡು

ಕಾರ್‍ಗಿಲ್ ನಾಡಿನ ಈ ಹಾಡು ಬಾನಂಗಳದ ಬೆಂಕಿ ಚೆಂಡು ಎತ್ತರೆತ್ತರ ಮರಗಿಡಗಳ ಕಾಡಿನಲಿ ಕಣಿವೆ ಕೊತ್ತಲಗಳಲಿ ಹರಿವ ನೀರಿನಲಿ ಗುಂಡಿನ ಮೊರೆತದ ಹಾಡು ಮೈ ಕೊರೆವ ಛಳಿಯಲಿ ಬೆಂಬಿಡದೇ ಪತ್ತೆ ಹಚ್ಚಿಹರು ಶತ್ರುಗಳ ಜಾಡು...
ವಾಗ್ದೇವಿ – ೫೫

ವಾಗ್ದೇವಿ – ೫೫

ಶೃಂಗಾರಿಯೂ ತಿಪ್ಪಾಶಾಸ್ತ್ರಿಯೂ ತನ್ನ ಕುತ್ಸಿತ ವಚನಗಳನ್ನು ಸಹಿಸಕೂಡದೆ, ಕುಪಿತರಾಗಿ ಹೊರಟು ಹೋದದ್ದನ್ನು ಕುರಿತು ವಾಗ್ದೇ ವಿಯು. ಚಿಂತಾಕ್ರಾಂತಳಾಗಿ. ಅವರನ್ನು ಹುಡುಕಿತರುವುದಕ್ಕೋಸ್ಟರ ಸೂರ್ಯನಾರಾಯಣನ ಸಮೇತ ಅದೇ ಶಾಂತಿಪುರಕ್ಕೆ ಬಂದಳು. ಪ್ರಾಣಸಖ ನಾದ ಭೀಮಾಜಿಯು ಇರುವ ಊರಲ್ಲಿ...

ಸಮಾಧಿ

ರಜತ ರಶ್ಮಿ ಪ್ರಸ್ಫುರಿತಕಿರಣೆ ಯಾರಿವಳು ತಾರಕೆಯು ದಿಗಂಬರೇ ದೃಷ್ಟಿ ಕ್ಷಿತಿಜದಲಿ ತೇಲಿ ಬಹಳು ಗುಡಿಗಟ್ಟಿಗೊಂಡ ಸೋಮಾವಸರೆ ತಿಳಿ ನೀಲಿಯ ಬಾನಂಚಿನ ಕರೆಗೆ ಪ್ರಭಂಜನವೇ ಅಡಿಕಿಲವಾಗೆ ಇಗೊ ಜಡಜಲಧಿಯ ಪಸರವ ಮುಸುಕಿದೆ ಶಮ ಮೂರ್ಚೆಯ ಹಾ...