ರಜತ ರಶ್ಮಿ ಪ್ರಸ್ಫುರಿತಕಿರಣೆ ಯಾರಿವಳು ತಾರಕೆಯು ದಿಗಂಬರೇ
ದೃಷ್ಟಿ ಕ್ಷಿತಿಜದಲಿ ತೇಲಿ ಬಹಳು ಗುಡಿಗಟ್ಟಿಗೊಂಡ ಸೋಮಾವಸರೆ
ತಿಳಿ ನೀಲಿಯ ಬಾನಂಚಿನ ಕರೆಗೆ ಪ್ರಭಂಜನವೇ ಅಡಿಕಿಲವಾಗೆ
ಇಗೊ ಜಡಜಲಧಿಯ ಪಸರವ ಮುಸುಕಿದೆ ಶಮ ಮೂರ್ಚೆಯ ಹಾ
ಮನವೋ ಅಸ್ಮಿತೆಯನ್ನು ಮುಟ್ಟಿತ್ತಸ್ಪಂದ ಸಮಾಧಿಯಲಿ
ಹೃದಯ ಮೌನದಲಿ ಗುಪ್ತವಾಗಿ ಸಾನಂದ ಗರ್ಭವಾಗಿ
ವಿವಿಧೇಂದ್ರಿಯ ಪ್ರಸ್ಫುರಣ ನಾಟ್ಯದಾವರಣ ಹರಿದು ಹೋಗಿ
ಮೂಕ ಮೈಯೊಳಾವುದೊ ಒಲೆ ಹೊತ್ತಿತು ಝಗ್ಗೆನೆ ಪ್ರಭೆಯಾ
ಸರ್ಗಸುಸಜ್ಜೇ ಓ ತಾರಗೆಯೇ ನಿರ್ಮಲೆ, ಸ್ವಚ್ಛಂದೇ
ಅಜ್ಞಾತಾನಂದಾಬ್ಧಿಯೊಳೆದ್ದಾ ಪರಿವೇಷಿತ ಚಂದ್ರೇ
ಪುರೋಭಾವಿಯಾದಾತ್ಮ ಪರಿಣತಿಯದಿದೊ ಝಂಝೋಚ್ಛ್ವಾಸ
ಏಕಮೇವ ಆನಂದ ಸಾಗರದ ಆತ್ಮಲೀನವಾಸ.
*****