ಕಾರ್‍ಗಿಲ್ ನಾಡಿನ ಈ ಹಾಡು
ಬಾನಂಗಳದ ಬೆಂಕಿ ಚೆಂಡು
ಎತ್ತರೆತ್ತರ ಮರಗಿಡಗಳ ಕಾಡಿನಲಿ
ಕಣಿವೆ ಕೊತ್ತಲಗಳಲಿ ಹರಿವ ನೀರಿನಲಿ
ಗುಂಡಿನ ಮೊರೆತದ ಹಾಡು
ಮೈ ಕೊರೆವ ಛಳಿಯಲಿ
ಬೆಂಬಿಡದೇ ಪತ್ತೆ ಹಚ್ಚಿಹರು ಶತ್ರುಗಳ ಜಾಡು
ನಮ್ಮ ಯೋಧರು ಬೀಡು ಬಿಟ್ಟಿಹರಡವಿಯಲಿ
ನುಗ್ಗಿಹರು ದಂಡು ದಂಡು ರೊಚ್ಚಿನಲಿ
ಶತೃಗಳ ಮೆಟ್ಟುತ ಶೌರ್‍ಯದಲಿ
ಕಣಿವೆಗಳ ಸೀಳುತ ಘರ್ಜಿಸಿದವು ಸಿಂಹಗಳು
ಮೊಳಗಿದವು ರಣಕಹಳೆ
ಬಾಂಬುಗಳ ದಾಳಿಯಿಡತಲಿ
ಆಗಸದೆತ್ತರ ಸಿಡಿದವು ಶೆಲ್ಲುಗಳು
ಗುಂಡಿಗೆ ಎದೆಯೊಡ್ಡಿದವು ಕಾರ್‍ಗಿಲ್ ಕೆನ್ನಾಲಿಗೆಯಲಿ
ಕಂಪು ಸೂಸುವ ಮೊದಲೇ ತಾಯ್ನೆಲವನಪ್ಪಿದವು
ಮೈಚಾಚಿ ಮುನ್ನುಗಿದ್ದ ಮೊಗ್ಗು ಅರಳಲಿಲ್ಲ
ಬುಗಿಲೆದ್ದ ಉರಿವ ಬೆಂಕಿಯ ಚಂಡಿನಲಿ
ಯೋಧರ ರಕುತದೋಕುಳಿಯಲಿ ಹಾರಿತು
ತ್ರಿವರ್ಣ ಧ್ವಜ ಕಾರ್‍ಗಿಲ್ ಗುಡ್ಡದ ಮೇಲೆ
ಉಳಿಯಿತು ಭಾರತಾಂಬೆಯ ಮಾನ
ಕ್ಷಣ ಕ್ಷಣಕ್ಕೂ ಕಾರ್‍ಗಿಲ್
ವಿಜಯವು ನಮ್ಮದಾಯಿತು
ಕಾರ್‍ಗಿಲ್ ಕಲಿಗಳಿಗೆ
ಇರಲಿ ನಮ್ಮ ನಮನ
ಇರಲಿ ನಮ್ಮ ಸ್ಮರಣೆ
*****
೬-೯-೨೦೦೯ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ
೧-೮-೨೦೦೯ರ ನಮ್ಮ ನಾಡು ಪತ್ರಿಕೆಯ ಚಿಣ್ಣರ ನಾಡು ವಿಭಾಗದಲ್ಲಿ ಪ್ರಕಟ