ಸುಳ್ಳ ನರಿಯು ಕಳ್ಳ ವೇಷ ಹಾಕ ಬಯಸಿತು ಮೋಸ ಮಾಡಿ ಹೊಸ ಬೇಟೆ ಹಿಡಿಯ ಹೊರಟಿತು ಬಿಳಿಯ ಕೋಟ ನ್ನೊಂದು ತಾನು ಧರಿಸಿ ಬಂದಿತು ಸ್ಟೆತಾ ಸ್ಕೋಪು ಕೈಲಿ ಹಿಡಿದು ನಲಿಯತೊಡಗಿತು ನಾನು ವೈದ್ಯನಾದೆ ಎಂದು ಹೇಳಿ ಕೊಂಡಿತು ಒಂಟಿ ಕುದುರೆ ಗಂಟಲಲ್ಲಿ ನೋವು ಎಂದ...

ಮುಸ್ಸ೦ಜೆಯ ಹೊತ್ತಿನಲಿ ಗೂಡು ಸೇರುವ ತವಕದಲಿ ಗುಂಪಾಗಿ ಹಾರುವ ಹಕ್ಕಿಗಳು, ಮಧ್ಯಾಹ್ನ ನೆರಳಾಗಿದ್ದ ಮರಗಳ ಬರಬರುತ್ತ ಕಡುಕಪ್ಪು ನೆರಳು ಗಡುಸಾಗಿ ನಿಶ್ಚಲವಾಗಿ ನೆಲ ಮುಗಿಲು ಒಂದಾಗಿ ಕ್ಷಿತಿಜದಲಿ ಸಂಧಿಸುವ ರೇಖೆಯಲಿ ಒಂದಾದ ಆಕಾಶ ಭೂಮಿಗಳ ಸುಂದರ ಸ...

ಬೋಧಿವೃಕ್ಷದ ಕೆಳಗೆ ಕುಳಿತ ಬೋಧಿಸತ್ವ ಕೇಳುತಾನೆ ತತ್ವಪದಗಳ ಹಾಡುತಾಳೆ ಹರಿಣಿ ಅತಿಶ್ರುತಿ ಮಾಡದಿರು ವಾದ್ಯದ ತಂತಿಗಳ ಅತಿಶ್ರುತಿ ಮಾಡಿದರವು ತುಂಡರಿಸಿ ಬೀಳುವುವು ಆಮೇಲವು ನುಡಿಯವೇನೂ ಓ ಬೋಧಿಸತ್ವ ಸಡಿಲಾಗಿಸದಿರು ವಾದ್ಯದ ತಂತಿಗಳ ಸಡಿಲಾಗಿಸಿದರ...

ಮೊತ್ತಮೊದಲು ವಿಶ್ವ ಜಲಮಯವಾಗಿತ್ತೆಂದು ಪುರಾಣ ಪುಣ್ಯ ಜನಪದ ಕತೆಗಳು ಸಾರುತ್ತಿವೆ. ಈಗಲೂ ಭೂಮಿ ಇರುವುದು ಮೂರನೆಯ ಒಂದು ಭಾಗ ಮಾತ್ರ. ಉಳಿದಿದ್ದೆಲ್ಲ ನೀರು, ಬೆಟ್ಟಗುಡ್ಡ, ಕಾಡುಮೇಡು, ಮಾತ್ರ. ಇತ್ತೀಚೆಗೆ ಕೇಂದ್ರೀಯ ಜಲ ಆಯೋಗದ ವರದಿಯ ಪ್ರಕಾರ ಭ...

ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು ದಾರ ಏಕೆ ದೂರ ಬೇಕೆ ಮಾತನಾಡುವಾಗ ಬೇಲಿ ಬೇಡ ನೋಟ ಇರಲಿ ಮನಸು ಕೂಡುವಾಗ ಹಂಚಿಕೊಂಡ ರಕ್ತವೊಂದೆ ರಕ್ತ ಹರಿವುದೇಕೆ? ಹಾಲೂಡಿದ ನೆಲವದೊಂದೆ ಇಲ್ಲಿ ಕದನವೇಕೆ?...

ರಕ್ತಗಂಪಿನ ಎಸಳುಗಳು ಈ ಕವಿತೆಯ ಸಾಲುಗಳು ಭೂತದ ಕೊಂಡಿ ಕಳಚದೇ ವರ್ತಮಾನದ ಕಾವಲಿಯಲಿ ಬೇಯಲಾರವು ಭವಿಷ್ಯ ಕಾಣಲಾರವು ಹೊಂಗನಸಿನ ಬಯಕೆಯೇ ಇಲ್ಲ ಇವುಗಳಿಗೆ ಕುಳಿತಿವೆ ಕತ್ತಲಿನೊಳಗೆ ಎಳೆದು ತರ ಬೇಕು ಬೆಳಕಿಗೆ ತೆರೆದುಕೊಳ್ಳಲಿರುವ ಹೊಸ ಬದುಕಿಗೆ ***...

ಪ್ರಭುತ್ವಕ್ಕೆ ಧರ್ಮಗುರುವಿನ ಬೆಂಬಲವಿದೆ ಧರ್ಮಗುರುವಿನಲ್ಲಿ ಪ್ರಭುತ್ವಕ್ಕೆ ನಂಬುಗೆಯಿದೆ ಇಬ್ಬರನೂ ಖಂಡಿಸಿದ ಕವಿಗೆ ಕಠಿಣ ಶಿಕ್ಷೆ ಕಾದಿದೆ. ***** ಗುಜರಾತ್‌ಗೆ ಕವಿ ಸ್ಪಂದನ...

ತಮ್ಮ ಆಫೀಸಿನಲ್ಲಿ ಎಲ್ಲರೂ ಸೇರಿ ಶುಕ್ರವಾರ ಲಕ್ಷ್ಮಿ ಪೂಜೆ ಮಾಡಬೇಕೆಂದು ಆಚರಣೆಗೆ ತಂದವನು ಶಂಕರಯ್ಯ. ಆ ದಿನ ಲಕ್ಷ್ಮಿ ಪೂಜೆ, ಪ್ರಸಾದ ವಿನಿಯೋಗ ಇದೆಲ್ಲ ತನ್ನಿಂದಲೇ ಆಗಬೇಕು, ಲಕ್ಷ್ಮಿಯ ಮೇಲೆ ಅಂತಹ ಭಕ್ತಿ. ಬೇಸರಪಟ್ಟ ನಂಜಪ್ಪ, “ಎಂಥ ಮ...

ಈ ನಾಡಿನ ಹಕ್ಕಿ ಚತುಷ್ಪಾದ ನಿರೀಕ್ಷೆಯಲ್ಲಿವೆ ಹಸಿರಾದ ದಿನಗಳ ಹಿಟ್ಲರ್ ಮರಿ ಹಿಟ್ಲರ್‌ಗಳೆಂದಳಿವರಂದು ನಳ ನಳಿಸಿ ಕಂಗೊಳಿಸುವುದು ಬನ ನಾಡು ನುಡಿಗಳ ನಡುವಣ ಬರ್‍ಲಿನ್‌ಗೋಡೆ ಬೀಳ್ವದೋ ಬರುವುದಂದುಸಿರು ನೀಳವಾಗಿ ಉಗ್ರರ ಅಟ್ಟಹಾಸದ ಕರಾಳ ದಿನಗಳಳಿದ...

1...89101112...15

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...