ನೂರು ನೋವ ಅಳಿಸಿ ಹಾಡು ನಲಿವ ನೀಡಿ ತಣಿಸಿ ಮನವ ಹಾಡು ಹಾಡಿದೆ || ಪ್ರೀತಿ ಎಂಬ ಹೂವ ಕಟ್ಟಿ ಮಾಲೆ ಹಾಕಿ ಮಣಿಸಿ ಮಾತು ನಿನ್ನ ಕರೆದಿದೆ || ಬಯಕೆ ತಂಪು ಕಂಪನೊಸೆದು ಹಸಿರು ಬಾಳ ಸಸಿಯ ನೆಟ್ಟು ಚೆಲುವನರಸಿದೆ || ಜನುಮ ಜನುಮ ಬಂಧ ಚೆಂದ ಅಂದ ಆನಂದ ತ...

ಇಲ್ಲಿದ್ದವರೆ ನೀವು ಹಿಂದೆ ಒಮ್ಮೆ ಈಗ ಅಲ್ಲಿದ್ದೀರಿ ದೂರ, ಅಷ್ಟೆ ಎಲ್ಲೋ ಮೇಲಿದ್ದರೂ, ಇಲ್ಲದ ಗಾಂಬೀರ್‍ಯ, ಹೊತ್ತು ದಿಕ್ಕಿಂದ ದಿಕ್ಕಿಗೆ ಒಂದೇ ಸಮನೆ ನೀವು ಠಳಾಯಿಸುತ್ತಿದ್ದರೂ ನಿಮ್ಮ ಗುರುತಿದೆ ನಮಗೆ ಖಿಚಿತವಾಗಿ ಹೇಳಬೇಕೆ ಪೂರ್ವಕಥೆಯನೆಲ್ಲ ಉ...

ಬಿಟ್ಟರಾಯ್ತೆ ದಾಡಿ ತಲೇಲಿರೋದು ರಾಡಿ ಕವಿಯಂತೆ ಕವಿ ಬೀದಿ ಸುತ್ತೋ ರೌಡಿ ಎಂಥ ಕವಿ! ಎಂಥ ಕವಿ! ಹಿಂಡಿರವನ ಕಿವಿ! ಪದ್ಯವಂತೆ ಪದ್ಯ ಬರಿಯೋದು ಬರೀ ಗದ್ಯ ಮತ್ತಿನ್ನೇನು ಮಾಡ್ತಾನಪೋ ತಲೆಗೇರಿದರೆ ಮದ್ಯ ಎಂಥ ಪದ್ಯ! ಎಂಥ ಪದ್ಯ! ನಾಚಿಕೆನಾದ್ರೂ ಇದ್ಯ...

ಅಧ್ಯಾಯ ಐದು ಕುಸಿತ ತಡೆದ ಮಹಾತ್ಮ ಪಿಕ್ಚರ್‍ಸ್ ಕನ್ನಡ ಚಿತ್ರರಂಗವೇನೋ ಪ್ರಾರಂಭವಾಯಿತು. ಪ್ರಯೋಗಗಳೂ ನಡೆದವು. ಆದರೆ ವೇಗವನ್ನು ಗಳಿಸಿಕೊಳ್ಳಲಿಲ್ಲ. ಇತರ ಭಾಷೆಗಳಲ್ಲಿ- ಮುಖ್ಯವಾಗಿ ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗ- ಕಂಡುಬಂದ ಚಿತ್ರ ನ...

ಮಂಜು :- “ನನ್ನ ಹೆಂಡ್ತಿಗೆ ಮನೇಲಿ ಸಕ್ಕರೆ ಇದೆಯಲ್ಲಾ ಟೀಗೆ ಸಕ್ಕರೆ ಜಾಸ್ತಿ ಹಾಕು ಎಂದಿದ್ದೆ ತಪ್ಪಾಯ್ತು…” ರಾಘು :- “ಯಾಕೋ…” ಮಂಜು :- “ಮನೆಲೀ ಉಪ್ಪು ಜಾಸ್ತಿ ಇದೆಯೆಂದು ಸಾರಿಗೆ…....

ದೂರ ದೂರ ದೂರ ಗುಡ್ಡ ಹಾರಿ ಹಾರಿ ಬರುತ್ತಿವೆ ಹಸಿರು ಹೊಗರು ಹಣ್ಣು ಹೂವು ತೂರಿ ತೂರಿ ತರುತಿವೆ ||೧|| ಅಗೊ ಅಲ್ಲಿ ತಗೊ ಇಲ್ಲಿ ನುಗ್ಗಿ ನುಗ್ಗಿ ಬಂದವು ದಿಗಿಲು ದಾಟಿ ಭುಗಿಲು ದಾಟಿ ಹಿಗ್ಗಿ ಹಿಗ್ಗಿ ನಿಂದವು ||೨|| ಯಾರು ಏನು ಎಂಬ ಚಿಂತೆ ಓಡಿ ಓ...

ಮದುವೆಗೆ ಕಾತುರವಾಗಿದ್ದ ಆ ಹುಡುಗಿಗೆ ದೂರದ ಸಂಬಂಧಿ ಯೊಬ್ಬರು, “ನೋಡು! ಇದು ಹುಡುಗನ ಮೊಬೈಲ್ ನಂಬರ್, ಮಾತನಾಡಿ ನೋಡು, ನಿನಗೆ ಸರಿಯಾಗಬಹುದು”, ಎಂದರು. ಹುಡುಗ ಹುಡಿಗಿ ದಿನವು ಗಂಟಗಟ್ಟಲೆ ಮಾತನಾಡಿ ಮೆಚ್ಚಿಕೊಂಡು ಮೊಬೈಲ್ ರೊಮಾನ್...

ಹಸಿವಿನ ಆಯ್ಕೆ ರೊಟ್ಟಿ. ಆದರೆ ರೊಟ್ಟಿ ಸೃಷ್ಟಿಯಾಗುವುದು ಆಯ್ಕೆಯಿಂದಲ್ಲ ಅನಿವಾರ್ಯತೆಯಿಂದ. ಅದಕ್ಕೆ ಆಯ್ಕೆ ಇದ್ದರೆ ರೊಟ್ಟಿಯಾಗುತ್ತಿರಲಿಲ್ಲ. ಹಸಿವಂತೂ ಆಗುತ್ತಿರಲೇ ಇಲ್ಲ. *****...

ಏಕೆ ದೂಷಿಸುವೆ ಎನ್ನ? ಎರಡನೆಯದು ಹೆಣ್ಣಾಗಿರುವುದಕೆ| ಹೆಣ್ಣು ಗಂಡು ಬೇಧ ಬಾರದೆನಗೆ ತಾಯಿಯಾಗೆನ್ನ ಪ್ರೀತಿಸುಧೆಯ ಹರಿಸುವೆ ಸದಾ ಹೀಗೆ|| ನಮ್ಮಿಬ್ಬರ ಹಡೆದವಳು ಹೆಣ್ಣಲ್ಲವೇನು? ಹಸಿದು ಅಳುವಾಗ ಕಣ್ಣಕಂಬನಿವರೆಸಿ ಹಾಲುಣಿಸಿ ಹಸಿವ ತಣಿಸಿ ಪ್ರೀತಿಯ...

1...6970717273...111

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...