ಏಕೆ ದೂಷಿಸುವೆ ಎನ್ನ?
ಎರಡನೆಯದು ಹೆಣ್ಣಾಗಿರುವುದಕೆ|
ಹೆಣ್ಣು ಗಂಡು ಬೇಧ ಬಾರದೆನಗೆ
ತಾಯಿಯಾಗೆನ್ನ ಪ್ರೀತಿಸುಧೆಯ
ಹರಿಸುವೆ ಸದಾ ಹೀಗೆ||
ನಮ್ಮಿಬ್ಬರ ಹಡೆದವಳು ಹೆಣ್ಣಲ್ಲವೇನು?
ಹಸಿದು ಅಳುವಾಗ ಕಣ್ಣಕಂಬನಿವರೆಸಿ
ಹಾಲುಣಿಸಿ ಹಸಿವ ತಣಿಸಿ
ಪ್ರೀತಿಯುಣಿಸಿದವಳು ಹೆಣ್ಣಲ್ಲವೇನು||
ಅಕ್ಕರೆಯ ಮಾತ ಕಲಿಸಿ
ಅಕ್ಷರವ ಕಲಿಸಿದ ಮೊದಲಗುರುವಾಕೆ|
ಹಗಲಿರುಳು ಜೀವ ಕಾಯ್ದು
ಕಣ್ಣಲಿ ಕಣ್ಣನಿಟ್ಟು
ಜೀವಮಾನವ ಮುಡಿಪಿಟ್ಟಾಕೆ ಹೆಣ್ಣಲ್ಲವೇ||
ಅಪ್ಪನಿಲ್ಲದಾದಗ
ಅಮ್ಮನೇ ಒಳಹೊರಗೆ ದುಡಿದು
ಹೊಟ್ಟೆ ತುಂಬಲಿಲ್ಲವೇ ನಮಗೆ|
ಅಕ್ಕ, ತಾಯಿಯ ಅನುಸರಿಸಿ
ಅಮ್ಮನಿಲ್ಲದಾದಾಗ ಅವಳ
ನೆನಪಿನ ಬುತ್ತಿಯ ಬಿಡಿಸಿ
ಸಮಾಧಾನ ತೋರಿದವಳೇ ಹೆಣ್ಣು||
ದುರ್ಗೆ ಪಾರ್ವತಿ ಹೆಣ್ಣು|
ನೂರಾರು ನದಿಗಳೆಲ್ಲವೂ ಹೆಣ್ಣು
ನಮ್ಮೆಲ್ಲರ ಹೊರುವ ಭೂತಾಯಿ ಹೆಣ್ಣು
ಪ್ರೀತಿಯ ಜೀವವೇ ಹೆಣ್ಣು
ಪ್ರೀತಿಯ ದೈವವು ಹೆಣ್ಣು||
*****