ಕಲ್ಲಿನಂತಿದ್ದ ಹಲ್ಲನ್ನು ಕಾಣದ ಕ್ರಿಮಿಗಳು ತಿಂದು ಬೆಳಕಿನ ದಳದಂಥ ಹಲ್ಲು ಹುಳಿತು ಕಪ್ಪಾಗಿ ಹೋಯಿತು. ಕಬ್ಬು ಸಿಗಿದ ಯಂತ್ರ ಕಡಲೆಪುರಿಗೆ ಬೆದರಿ ನಿಂತರೆ ನೋವು, ಕೂತರೆ ನೋವು ಮುಖ ಬಾತು ಮೂತಿ ಕುಂಬಳಕಾಯಾಯಿತು. ಕಂಡ ಸ್ನೇಹಿತರೆಲ್ಲ ಕಷ್ಟಪಟ್ಟು ...

ಬಸವ ನಾಮ ಸ್ಮರಣೆಯೆ ಪುಣ್ಯ ಬಸವನ ನೆನೆಯುವ ಜನುಮವೆ ಧನ್ಯ || ಪ || ಬಸವೇಶ್ಚರ ಬಸವಣ್ಣನೆ ಮಾನ್ಯ ಗುರುಬಸವೇಶನೆ ಶರಣವರೇಣ್ಯ || ಅ.ಪ.|| ಎಲ್ಲ ಧರ್ಮಗಳ ಸಾರವ ಹೀರುತ ವೀರಶೈವವನು ರೂಪಿಸಿದೆ ಜ್ಞಾನ ಭಕ್ತಿ ವೈರಾಗ್ಯ ಕರ್ಮಗಳ ಸಮಗ್ರ ಧರ್ಮವ ತೋರಿಸಿದ...

ಬೀದಿ ಜನಸಂದಣಿಗೆ ಕಾರು ರಿಕ್ಷಾಗಳಿಗೆ ಕೂಗಿ ಹೇಳುತ್ತಾನೆ : “ಎಲೆಲೆ ಇರುವೆಗಳೆ, ವೃಥಾ ನನ್ನ ಕಾಲಡಿಗೆ ಬಿದ್ದು ಅಪ್ಪಚ್ಚಿಯಾಗದಿರಿ-ತೊಲಗಿ” ನಡೆಯುತ್ತಾನೆ ಮಹಾವೀರ ಗೊಮ್ಮಟನಂತೆ ಒಳಗೊಳಗೆ ನಗುತ್ತಾನೆ ದೊಡ್ಡಮಂದಿಯ ಕಾಲಿಗೆರಗುತ್ತಾನ...

ಬಾಳವ್ವ ನಮ್ಮ ಮನೆಯಲ್ಲಿ ಕಸಮುಸುರೆ ಮಾಡುವ ಮೆನೆಗೆಲಸದಾಳು. ಅವಳ ದೊಡ್ಡಸಂಪತ್ತೆಂದರೆ ತುಟಿಯ ಮೇಲೆ ಸುದಾ ನಲಿಯುತ್ತಿರುವ ಅವಳ ನಗೆ. ಹೊಟ್ಟೆ ತುಂಬಿರಲಿ ಅಥವಾ ಖಾಲಿ ಇರಲಿ, ಅವಳು ಸದಾ ನಗುತ್ರಿರುವವಳೇ. ಅವಳದು ದೊಡ್ಡ ಸಂಸಾರ. ಎಲ್ಲ ವಯಸ್ಸಿನ ಗಂಡ...

ನಾಚಿಗಿ ಬರತೈತೆ ನನಗಂಡಾ ನಿನಕೂಡ ನಾಚಿಗಿ ಬರತೈತೆ ||ಪಲ್ಲ|| ಬಾಯಾಗ ಹಲ್ಲಿಲ್ಲ ಕಣ್ಣಾಗ ಎಣ್ಣಿಲ್ಲ ಸಗತಿಲ್ಲ ನಡಿಗೀ ಸುಗತಿಲ್ಲ ಜೋತಾಡಿ ಹೋಗ್ತೀದಿ ಮಾತಾಡಿ ಬೀಳ್ತೀದಿ ಮೈಮ್ಯಾಲ ವೈನಾ ನಿನಗಿಲ್ಲ ||೧|| ಗೆಳತೇರು ಗರತೇರು ಗ್ವಾಡಂಬಿ ಚಲುವೇರು ತೇರ...

ಅವರ ಮನೆಯಲ್ಲಿ ಹಣ್ಣು ಹಣ್ಣು ಮುದುಕ ಸ್ವರ್ಗಸ್ತನಾಗಿದ್ದ. ಮನೆಯವರು ಅಜ್ಜನ ಕೊನೆಯ ಯಾತ್ರೆಗೆ ಸಿದ್ಧ ಮಾಡುತಿದ್ದರು. ಎಲ್ಲರು ಒಂದಲ್ಲ ಒಂದು ಕೆಲಸದಲ್ಲಿ ತೊಡಗಿದ್ದರು. ಅಳುವವರು ಯಾರೂ ಕಾಣಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಹೃದಯ ವಿದ್ರಾವಕ ರೋದನ ಶ...

ಕರೆಯುತ್ತೇನೆ ಮನಸೇ ಕನಸಿನ ಕೋಣೆಯೊಳಗೆ ಬೇಲಿಗಟ್ಟಿದ ಭಾವದೊಳಗೆ ಅಲ್ಲಿ ಮಾತಾಡೋಣ ಮೌನದ ಬಗೆಗೆ ಮೌನವಾಗೋಣ ಮಾತಿನ ಬಗೆಗೆ ಬೆಳೆಯುತ್ತ ಬೆಳೆಯುತ್ತ ಹೋಗೋಣ ಸಿಕ್ಕದ ಸುಖವನ್ನು, ಹುಡುಕುತ್ತ ಹುಡುಕುತ್ತ ಹೋಗೋಣ ಕಾಣದ ಮುಖವನ್ನು ಗುಬ್ಬಚ್ಚಿ ಗೂಡಲ್ಲಿ ...

ಈ ಕನ್ನಡ ನೆಲದಿ ಜನಿಸಿ ನಾನಾದೆನು ನಿಜದಿ ಧನ್ಯ| ಈ ಕೃಷ್ಣಕಾವೇರಿ ನದಿಯಲಿ ಮಿಂದು ನನಗಾಯಿತು ಮಹಾಪುಣ್ಯ| ಕನ್ನಡ ಹಾಡಾಯಿತು ನನಗದುವೆ ದಿವ್ಯಮಂತ್ರ ಈ ಕನ್ನಡ ಬಾವುಟ ಹಿಡಿದ ನನ್ನ ಕೈಯಾಯಿತು ಚಿನ್ನ|| ಇಲ್ಲಿರುವ ಪ್ರಕೃತಿಸೌಂದರ್ಯ್ಯ ಇಲ್ಲಿ ಬೆಳೆಯ...

ನಾವು ದಿನನಿತ್ಯದಲ್ಲಿ ಸಕ್ಕರೆ ಕಾಯಿಲೆ ಉಳ್ಳವರ ಸ್ಥಿತಿಯನ್ನು ನೋಡಿ ‘ಅಯ್ಯೋಪಾಪ’ ಎನ್ನುತ್ತೇವೆ. ಹೋಳಿಗೆ ತಿನ್ನುವಂತಿಲ್ಲ. ಸಿಹಿಪದಾರ್ಥಗಳನ್ನು ತಿನ್ನುವಂತಿಲ್ಲ. ಸಕ್ಕರೆರಹಿತ ಟೀ ಕಾಫಿಯನ್ನು ಗುಟುಕರಿಸುತ್ತ ಸಿಹಿಯನ್ನೇ ಉಪಯೋಗಿಸದ ಜನರಿದ್ದಾರ...

1...1213141516...111

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...