ತಾಯೆ ನಿನ್ನ ಮಡಿಲಲಿ ಕಣ್ಣ ತೆರೆವ ಕ್ಷಣದಲಿ ಸೂತ್ರವೊಂದು ಬಿಗಿಯಿತಮ್ಮ ಸಂಬಂಧದ ನೆಪದಲಿ ಆಕಸ್ಮಿಕವೇನೋ ತಿಳಿಯೆ ನಿನ್ನ ಕಂದನಾದುದು, ಆಕಸ್ಮಿಕ ಹೇಗೆ ನಿನ್ನ ಪ್ರೀತಿ ನನ್ನ ಗೆದ್ದುದು? ಗುಣಿಕೆ ಮಣಿದು ನಾನು ನಿನ್ನ ಚರಣತಳಕೆ ಬಿದ್ದುದು? ಇಲ್ಲಿ ಹರ...

ಕತ್ತಲಾಗುವುದನೇ ಕಾದ ಹೊಲದೊಡೆಯ ಸಿಹಿ ಹಾಲು ತುಂಬಿದ ಬೆಳೆಸೆ ತೆನೆಯ ಕುಳ್ಳು ಬೆಂಕಿಯಲಿಟ್ಟು ಹದವಾಗಿ ಸುಟ್ಟು ಚೂರು ಚೂರೇ ಕಂಕಿಯನು ಕಿತ್ತು ಕರಿಯ ಕಂಬಳಿಯ ಒಡಲ ತುಂಬಿ ಬಲಿತ ದಂಟಿಲೆ ಒಡನೆ ಓಡೆಯ ಏರಿಸಾರಿಸಿ ತೂರಿಸಿ ಮೂಲೆಸೇರಿಸಿ ತಳ ಸರಿಸಿ ಹೊಡ...

ಸಾಗರ ಹುದುಗಿದೆ ಹನಿಹನಿಯಲ್ಲೂ ಸೂರ್ಯನಿರುವ ಪ್ರತಿ ಕಿರಣದಲೂ, ಒಂದೇ ಸಮ ಇದೆ ಮಾಧುರ್ಯದ ಹದ ಮರವೊಂದರ ಪ್ರತಿ ಹಣ್ಣಿನಲೂ. ಸಾವಿರ ಸಿಪ್ಪೆ, ಸಾವಿರ ಚಿಪ್ಪು ಸಾವಿರ ಬಗೆ ನಡೆನುಡಿ ಅನ್ನ, ಕಾಯದ ಕರಣದ ಸಾವಿರ ಚೇಷ್ಟೆ ಹೊರಗಿನ ತೋರಿಕೆ ಬಹು ಭಿನ್ನ. ಜ...

ಓದುತ್ತಿದ್ದಂತೆ ಮನೋಹರನ ಉಸಿರು ಬಿಗಿಯಾಯಿತು. ನಾಡಿಯಲ್ಲೆಲ್ಲ ನೆತ್ತರು ಧುಮ್ಮಿಕ್ಕೆ ಹರಿಯುತ್ತಿರುವ ಅನುಭವ. ಎಲ್ಲವನ್ನೂ ಮತ್ತೊಮ್ಮೆ ಜೀವಿಸಿದಷ್ಟು ಆಯಾಸ. ಡೆಸ್ಕಿ ನಿಂದ ಸಿಗರೇಟು ಎತ್ತಿಕೊಂಡ. ಸೇದಬಾರದು ಎಂದಿದ್ದರು ಡಾಕ್ಟರರು. ಉದ್ವೇಗಗೊಳ್ಳ...

ಹಬ್ಬ ಬಂತು, ಓ ಹಬ್ಬ! ಕೆಳೆಯರೇ, ತೋರಣ ಕಟ್ಟೋಣ! ಹಬ್ಬ ಹಬ್ಬಕೂ ಮನೆಯ ಬಾಗಿಲಿಗೆ ತೋರಣ ಕಟ್ಟೋಣ! ಮಾವಿನ ತೋಪಿಗೆ ಬನ್ನಿರಿ, ಕೆಳೆಯರೆ, ತೋರಣ ಕಟ್ಟೋಣ; ಬೆಳಗಿನ ಜಾವ ಮುಗಿಯುವ ಮುನ್ನ ತೋರಣ ಕಟ್ಟೋಣ! ಚುಕ್ಕಿಯಾಗಸದೆ ಮಾಸುವ ಮುನ್ನ ತೋರಣ ಕಟ್ಟೋಣ; ...

ಕಿಟಿಕಿಯ ಬಳಿ ನಾವು ಬಂದಿವಿ ಚಂದಮಾಮ ಕಿಟಕಿಯ ಬಳಿ ನೀನು ಬಾರೋ ಚಂದಮಾಮ ಸರಳಿಗೆ ಮುಖವಿಟ್ಬು ಮಾತಾಡೋಣ ಚಂದಮಾಮ ನಮ್ ನಮ್ ಸುದ್ದಿಗಳ ಹೇಳ್ಕೊಳ್ಳೋಣ ಚಂದಮಾಮ ಹೊಟ್ಟೆ ತುಂಬ ನಗೋಣ ತಟ್ಟೆ ತುಂಬ ತಿನೋಣ ಇರುಳ ಮಲ್ಲಿಗೆ ಅರಳಿದೆ ನೋಡು ನಿನಗಿಷ್ಟವಾದ ಹಾ...

ಗುಬ್ಬೀ ಗುಬ್ಬೀ ತರವಲ್ಲ ಮನೆ ಇದು ನನ್ನದು ನಿನದಲ್ಲ ಕಿಚಿಕಿಚಿ ಎಂಬೆಯ ಬಂದಿಲ್ಲಿ ಬಯಲಿದೆ ಹೊರಗಡೆ ಸಾಯಲ್ಲಿ ಜಂತೆಯ ಸಂದೇ ಮನೆಯಾಯ್ತು ಕಾಪುರವೇನೊ ಘನವಾಯ್ತು ನಿನ್ನೀ ವಲ್ಲಡಿ ಜೋರಾಯ್ತು ಮೂಡಿದ ಭಾವವು ಹಾಳಾಯ್ತು ಹುಶ್, ಎಲೆ ಗುಬ್ಬೀ! ಎಚ್ಚರಿಕೆ...

ಅದೆಶ್ಟು ಬಿರುಸು ಅಶ್ಟೆ ಹುಲುಸು ಘಮ ಘಮ ಹಲಸಿನಂತೆ! ಪುಟ್ಟ ಚಂದ್ರ ಚಕೋರ, ಧರೆಗಿಳಿದು ಬೆರಗು ಮೂಡಿಸಿದನಲ್ಲ? ನವ ಮಾಸ ಕಳೆದ, ನವ ನೀತ ಚೋರ! ಪುಟ್ಟ ಪೋರಾ! ತಂದೆಯ ರೂಪ, ತಾಯಿಯ ಕೋಪ, ಜಗದಾ ಪರಿತಾಪ ಎಲ್ಲವೂ… * ಹಾಲುಗೆನ್ನೆಯ ಹಸುಗೂಸು ಮು...

ಮನೆ ಇಲ್ಲ ಮಠ ಇಲ್ಲ ಮಕ್ಕಳಿಲ್ಲ ಮರಿ ಇಲ್ಲ ನೀನು ಶೋಕಿಯಾಗಿ ಆಕಾಶದಲ್ಲೆಲ್ಲ ಅಲೆದಾಡಿಕೊಂಡು ಇರಬಹುದು ಕೇಳಪ್ಪ ಶಶಿ, ಆದರೆ ಅವಳಿಗೆ ಮಕ್ಕಳು ಮರಿ ಸಂಸಾರದ ಭಾರ ಅದನ್ನು ಸಾಕಿ ಸಲಹೋಕೆ ದುಡಿತಲೇ ಇರ್‍ತಾಳೆ ಪಾಪ ಅಹರ್ನಿಶಿ. *****...

1...456

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...