ಊರಿಗೆ ಬಂದ ಶವಪೆಟ್ಟಿಗೆಯೊಳಗಿನ ಅವನ ಚಿರನಿದ್ರೆ ಏನೆಲ್ಲ ಹೇಳುತಿದೆ ಇವರೆಲ್ಲ ಅಳುತ್ತಿದ್ದಾರೆ. ದೇಶಭಕ್ತ ಇವ ನಮ್ಮ ಹುಡುಗ ಜೈಕಾರ ಹಾಕುತ ಮನೆಯ ಬೆಳಕು ನುಂಗಿದ ಕಾರ್ಗಿಲ್ ಕರಿಕತ್ತಲೆಗೆ ನೆರಳುತಿರುವರು. ಕಟ್ಟುಮಸ್ತಾದ ಹುಡುಗ ಹೊಳೆವ ಕಣ್ಣು ಗುಂ...

ಊರಗುಬ್ಬಿ ಕಾಣದಾದ್ವಲ್ಲೆಽಽಽ ಯಮ್ಮಾಽಽಽ ಊರಗುಬ್ಬಿ ಮಾಯವಾದ್ವಲ್ಲೊಽಽಽ ಯಪ್ಪಾಽಽಽ ಬೆಳಕು ಹರಿದರೆ ಬೆಳಕಿನಂಗೆ ತೂರಿ ಬರುತಿದ್ವಲ್ಲೇಽಽಽ ಗಾಳಿಯಂಗೇ ಗಾಳಿ ಜೊತೆಗೆ ಹಾರಿ ಬರುತಿದ್ವಲ್ಲೋಽಽಽ ಪುರ್ರಂತ ರೆಕ್ಕೆ ಬಿಚ್ಚಿ ಸೊರ್ರಂತ ಹಾರುತಿದ್ವಲ್ಲೋಽಽಽ...

ಯಾರು ನಮ್ಮ ಕರೆದರು, ಕರೆದು ಎಲ್ಲಿ ಸರಿದರು? ನಾವು ಬರುವ ಮೊದಲೆ ನೂರು ಸೋಜಿಗಗಳ ಮೆರೆದರು? ಯಾರು ಬೆಳಕ ಸುರಿದರು ನದಿಗಳನ್ನು ತೆರೆದರು? ಆಕಾಶದ ಹಾಳೆಯಲ್ಲಿ ತಾರೆಗಳನು ಬರೆದರು? ಗಾಳಿಯಾಗಿ ಹರಿದರು ಬೆಂಕಿಯಾಗಿ ಉರಿದರು? ಕಡಲು ನೆಲವ ನುಂಗದಂತೆ ಯ...

ಅವಳಿಗೆ ಹಳೆಯ ಲೌಲಿ ದಿನಗಳಿನ್ನೂ ನೆನಪಿದೆ. ಹಳೆಯದೆಂದರೆ ಬಹಳ ಹಳೆಯವೇನಲ್ಲ ಕೇವಲ ಎರಡು ವರ್ಷಗಳ ಹಿಂದಿನ ಕಲರ್ಫುಲ್ ದಿನಗಳವು. ಅವಳು ಅವನೂ ತುಂಬಾ ಹಚ್ಚಿಕೊಂಡಿದ್ದ ಕ್ಷಣಗಳವು. ಹೊಸದಾಗಿ ಕಛೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಅವಳು ಕಟ್ಟಡವನ್ನ...

ಆಲದ ಮರ ನಾನು ಬನ್ನಿ ಹಕ್ಕಿ ಪಕ್ಕಿಗಳೇ ಹುಳ ಹುಪ್ಪಡಿಗಳೇ, ಹಾದಿಹೋಕರೆ ಇದು ನಿಮ್ಮದೆ ರಾಯಲ್ ಪ್ಯಾಲೆಸ್ ಯಾವ ಅಭ್ಯಂತರವೂ ಇಲ್ಲದೆ ವಿಶ್ರಮಿಸಿ, ಉಪಹರಿಸಿ ಎಕ್ಯೂಸ್ ಬ್ರೋಕರ್‍ಸ್. *****...

ನಮ್ಮ ಚಂದ್ರಾಮ ಬೆಳುದಿಂಗಳಲಿ ಮಿಂದಾಂವ ತಂಪಿನ ಬೆಳಕನು ಚೆಲ್ಲಾಂವ ನಾಚುವ ಮಲ್ಲಿಗೆ ಮೊಗ್ಗೆಗೆ ಊದಿ ಮೆಲ್ಲಗೆ ಬಿಡಿಸಾಂವ ನಮ್ಮ ಚಂದ್ರಾಮ ಕಾಡಿಗೆ ಇಬ್ಬನಿ ಸುರಿಸಾಂವ ನಾಡಿಗೆ ಮಂಜು ಕಳಿಸಾಂವ ಬೀಸುವ ಗಾಳಿಯ ಮೋಡವನೇರಿ ಸವಾರಿ ಹೊರಟಾಂವ ನಮ್ಮ ಚಂದ್ರ...

ಮಾರ ವೀರ ತನ್ನ ಮನದಿ ಧೈರ್ಯ ಮಾಡಿ ಹರನ ತಪವ ಸೂರೆಗೊಂಬುದಕೆ ತನ್ನ ಸೈನ್ಯವೆಲ್ಲ ಕೂಡಿಸಿ ||ಪ|| ಅಳಿಯು ಗಿಳಿಯು ಕೋಗಿಲೆಗಳ ಬಳಗವೆಲ್ಲಾ ಮುಂದೆ ಹೈಮಾಚಲಕೆ ತೆರಳ ಹೇಳಿ ಪುಷ್ಪದಲರು ಬಿಲ್ಲಿಗೇರಿಸಿ ||೧|| ಅಂಗಜನು ಪೋಗಿ ಮಾತಂಗ ಪರ್ವತವನು ಏರಿ ತುಂಗ...

ಪಣತಿಯಿದೆ ಎಣ್ಣೆಯಿದೆ ಬತ್ತಿಯಿದೆ ಕಡ್ಡಿಯಿದೆ! ದೀಪ ಹಚ್ಚುತ್ತಿಲ್ಲ ನಾ… ಸೂರ್‍ಯ, ಚನ್ದ್ರ, ನಕ್ಷತ್ರಗಳಿವೆಯೆಂದೇ?? ವಿದ್ಯುತ್ ದೀಪ, ಪೆಟ್ರೋಮ್ಯಾಕ್ಸಿ, ಜಗಮಗಿಸುವ ಚಿನಕುರುಳಿ, ದಾರಿದೀಪಗಳಿವೆಯೆಂದೇ?? ಎಲ್ಲ ಇದ್ದು, ಇಲ್ಲದವನಂತೆ, ಎದ್...

1...3536373839...73

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...