ಅಬ್ಬಬ್ಬಾ! ಏನು ಆ ಬಿಸಿಲು-ಏನು ಆ ಉರಿ! ಉರಿಯೆಂದರೆ ಆ ಬೇಸಿಗೆಯ ಮಧ್ಯಾಹ್ನದ ಬಿಸಿಲೇ ಮೈಗೊಂಡು ಉರಿಯಲಗಿನಂತೆ ಹೊಳೆಯುತ್ತಿತ್ತು. ಝಳಪಿಸುತ್ತ ಮುಗಿಲ ಮನೆಗೆ ತಿವಿಯುವ ಆ ಮೊನೆಯಾದ ಜ್ವಾಲೆಗಳೆಂಥವು! ಇಪ್ಪತ್ತು ಮಾರು ದೂರ ನಿಂತರೂ ಕಡಿದು ಹಾರಿಬರು...

ಪೂಜಾರಪ್ಪ ಒಡೆಯರ ಮನೆ ಬಳಿಗೆ ಬಂದಾಗ ಅವರು ಜೋಯಿಸರ ಜೊತೆ ಮಾತಾಡುತ್ತ. ಅಡಿಕೆಲೆ ಜಗಿಯುತ್ತ ಕೂತಿದ್ದರು. ಪೂಜಾರಪ್ಪ “ಅಡ್ ಬಿದ್ದೆ ದಣೇರ” ಎಂದು ಹೇಳಿ ಹಜಾರದ ತುದಿಯಲ್ಲಿ ನಿಂತುಕೊಂಡ. “ಕುಂತ್ಯಳಯ್ಯ” ಎಂದರು ಒಡೆಯರು...

“ಅಲೆ! ನೀನು ಸಮುದ್ರವಾಗುವುದು ಯಾವಾಗ?” ಎಂದಿತು ಬೆಟ್ಟ. “ನನ್ನ ತುಮುಲ ಅಡಗಿ ಶಾಂತವಾದಾಗ ನಾನು ಸಮುದ್ರವಾಗುವೆ” ಎಂದಿತು ಅಲೆ. ಮತ್ತೆ ಬೆಟ್ಟ ಸಮುದ್ರವನ್ನು ಕೇಳಿತು “ನೀನು ಅಲೆಯಾಗುವುದು ಏಕೆ?” ಎಂದ...

ಜ್ಯೂಲಿಯೋ ಅಕುರ್‍ಜಿ ಊರಿನಲ್ಲಿ ಒಳ್ಳೆಯ ಯುವಕನೇ ಆಗಿದ್ದ ಬಿಡಿ. ಮೂವತ್ತರ ಹರೆಯದ ಅನುಕೂಲಸ್ಥ; ಅಲ್ಲದೆ ನೀಟಾಗಿ ಬಟ್ಟೆಧರಿಸುವ ಬುದ್ಧಿವಂತ ಕೂಡ. ಅವನ ಗೆಳೆಯರ ಪ್ರಕಾರ ಅವನಲ್ಲಿ ಇನ್ನೂ ಒಂದು ಇತ್ತು: ಅದೆಂದರೆ ತನ್ನ ಬಾಡಿಗೆದಾರರೊಂದಿಗೆ ಆತ ಯಾವ...

ಮಾರನೇ ದಿನ ಹುಚ್ಚೀರ ಮತ್ತು ಸಣ್ಣೀರ ಸೂರ್ಯನಿಗೆ ಮುಖ ತೋರಿಸದೆ ಓಡಾಡುತ್ತಿದ್ದರು. ಇತ್ತೀಚಿಗೆ ರಾತ್ರಿ ಶಾಲೆಗೆ ಹೋಗುವುದು ಕಡಿಮೆಯಾಗಿದ್ದು, ಈ ಬಗ್ಗೆ ಸೂರ್ಯ ಇತರರೊಂದಿಗೆ ಚರ್ಚಿಸಿದ್ದು. ಈ ವಿಷಯ ಇವರ ಕಿವಿ ಮೇಲೆ ಬಿದ್ದದ್ದು, ಇದಕ್ಕೆ ಕಾರಣವಾ...

ಒಂದು ಕಣ್ಣೀರ ಹನಿ, ಒಂದು ಇಬ್ಬನಿ, ಒಂದು ಮಳೆಹನಿ ಮೂವರು ಗೆಳೆಯರಾದರು. ಕಣ್ಣೀರ ಹನಿ ಹೇಳಿತು- “ನಾನು ಕಣ್ಣು ತುಂಬಿ ಬಂದೆ” ಎಂದು. ಇಬ್ಬನಿ ಹೇಳಿತು- “ನಾನು ಹೂ ಹೃದಯ ತುಂಬಿದೆ” ಎಂದು. ಮಳೆ ಹನಿ ಹೇಳಿತು- “...

“ಬಯಲು ಬಯಲನೆ ಉಂಡು, ಬಯಲು ಬಯಲಾಗಿತ್ತು……” ಸಂಜೆ ಏಳಕ್ಕೆ ಬೀಚ್ ಹತ್ತಿರ ಬರುತ್ತೇನೆ….. ಕಾಯುತ್ತಿರು. ಯುದ್ಧನೌಕೆ ಮ್ಯೂಜಿಯಂ ಒಳಗಿಂದ ಪುಟಾಣಿ ರೈಲು ಹಳಿ ದಾಟಲು ಇರುವ ಕಾಲುದಾರಿಯ ಮೂಲಕ ಬೀಚ್ ತಲುಪುತ್ತೇನೆ...

ಹಟ್ಟಿ ಸೇರಿದ ಮೇಲೆ ಹೆಂಗಸರಿಗೆ ಅಡಿಗೆ ಕಲಸ; ಸೂರ್ಯ, ನವಾಬ್ ಇಬ್ಬರೂ ಕಟ್ಟೆಯ ಮೇಲೆ ಕೂತರು. ದೇಶ ವಿದೇಶಗಳ ಸ್ಥಿತಿಗತಿ ಕುರಿತು ಮಾತನಾಡತೊಡಗಿದರು. ಇವರ ಮಾತುಗಳು ಪೂರ್ಣ ತಾತ್ವಿಕ ಚರ್ಚೆಯ ಸ್ವರೂಪ ಪಡೆದದ್ದರಿಂದ ಅಕ್ಕಪಕ್ಕ ಕೂತಿದ್ದ ಮೂರ್‍ನಾಲ್...

ಸಮುದ್ರ ದಡದ ಮೇಲೆ ಒಂದು ಆಮೆ ಮಲಗಿತ್ತು. ಅವಶ್ಯಕತೆ ಇಲ್ಲೆಂದು ತನ್ನ ಕೈಕಾಲು, ತಲೆಯನ್ನು ಚಿಪ್ಪಿನೊಳೊಗೆ ಎಳೆದುಕೊಂಡು ಕಲ್ಲಂತೆ ಮರಳ ಮೇಲೆ ಕುಳಿತಿತ್ತು. ದಡದ ಮೇಲೆ ಓಡಾಡುತ್ತಿದ್ದ ಒಬ್ಬ ಮನುಷ್ಯ ಕಲ್ಲು ಬಂಡೆಯಂತೆ ಮಲಗಿದ್ದ ಆಮೆಯನ್ನು ನೋಡಿ ನ...

ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ… ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ…. ಯಾರಾದರೂ ಬಿದ್ದರೆ, ಕೈಕಾಲು ಮುರಿದುಕೊಂಡರ? ಅಷ್ಟೇ ಅಲ್ಲ ಅವರ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...