Home / ಲೇಖನ / ಪುಸ್ತಕ

ಪುಸ್ತಕ

ಶಿವಾಪುರಕ್ಕೆ ಹೋಗಬೇಕು ಎನ್ನುವ ತುಡಿತ ಹಳೆಯದು. ಪ್ರತಿ ಬಾರಿ ಅಲ್ಲಿಗೆ ಹೋಗುವ ಪಯಣವು ಕೊಡುವ ಅರಿವು ಆನಂದಗಳೇ ಬೇರೆ ಅಂತ ಬಲ್ಲವರು ಹೇಳುವುದನ್ನು ಕೇಳುತ್ತಾ ಶಿವಾಪುರಕ್ಕೆ ಹೋಗುವ ಕನಸು ಕೆನೆಗಟ್ಟುತ್ತಿತ್ತು. ಅಲ್ಲಿಗೆ ಹೋಗಲೆಂದು ಇದ್ದಬದ್ದ ಮ್...

ಬಹುವಾಚಿತ ‘ಉತ್ತರಾಯಣ’ ಕವಿತೆಗಳ ನಂತರ ನಾಲ್ಕು ವರ್ಷದ ಅವಧಿಯಲ್ಲಿ ಎಚ್‌.ಎಸ್.ವೆಂಕಟೇಶಮೂರ್ತಿ ತಮ್ಮ ಹೊಸ ಕವಿತೆಗಳ ಸಂಗ್ರಹ-`ಕನ್ನಡಿಯ ಸೂರ್ಯ’ ತಂದಿದ್ದಾರೆ. ಉತ್ತರಾಯಣ ಕವಿತೆಗಳಲ್ಲೇ ಕಾಣಿಸಿದ ಕೆಲವು ಹೊರಳುಗಳು ಅವರ ಈ ಹ...

ಗಂಗವ್ವ ಗಂಗಮಾಯಿಯಾಗಿ ಹರಿದು ಹೋಗಿ ಭಾರತೀಯರ ಮನದಲ್ಲಿ ಪವಿತ್ರಳಾಗಿ ನಿಂತಿರುವಳಷ್ಟೆ. ಅಷ್ಟೆ ಪಾವನಳಾಗಿ ಗಂಗಜ್ಜಿ ಗಾಣಾದ ಮೂಲಕ ನಿಂತಿದ್ದಾಳೆ. ಅಲ್ಲವೆಂದವರಾರು? ಅವಳ ಗಾನವನ್ನು ಬಲ್ಲವರು, ತಿಳಿಯದೇ ಇರುವವರು ಎಲ್ಲರಿಗೂ ಗಂಗಜ್ಜಿ ಎಂದರೆ ಪ್ರೀತ...

ರಾಮಾಯಣದ ಓದುಗಳು ಹಲವಾರು. ‘ತಿಣುಕಿದನು ಫಣಿರಾಯ ರಾಮಾಯಣದ ತಿಂತಿಣಿಯ ಭಾರದಲಿ’ ಎಂದ ಕುಮಾರವ್ಯಾಸನ ಮಾತು ಅಕ್ಷರಶಃ ನಿಜವೆನ್ನುವಂತೆ ರಾಮಾಯಣಗಳು ಹಲವಾರು ಭಾಷೆಗಳಲ್ಲಿ ಹಲವಾರು ಭಾವಗಳೊಡನೆ ರಾಮಾಯಣಗಳು ಸೃಷ್ಟಿಯಾಗುತ್ತಲೇ ಬಂದಿದ್ದಾವೆ. ರಾಮಾನುಜನ...

ಪ್ರತಿಭಾ ನಂದಕುಮಾರ್ ಮತ್ತೊಮ್ಮೆ ಬಂದಿದ್ದಾರೆ. ‘ನಾವು ಹುಡುಗಿಯರೇ ಹೀಗೆ’ ಎಂದು ದಶಕಗಳ ಹಿಂದೆ ಹೇಳಿದ ಅವರೀಗ ‘ಮುದುಕಿಯರಿಗಿದು ಕಾಲವಲ್ಲ’ ಎನ್ನುತ್ತಿದ್ದಾರೆ. ಇದು ಕವಯತ್ರಿಯೊಬ್ಬರ ಬದುಕಿನ ಪಯಣದಂತೆಯೂ ಅವರ ಕಾವ್ಯದ ಪಯಣದಂತೆಯೂ ಕಾಣುತ್ತಿದೆ. ...

ಆನಂದ ಋಗ್ವೇದಿ ಹೊಸ ತಲೆಮಾರಿನ ತೀವ್ರ ತುಡಿತದ ಕವಿ ಸಂವೇದನೆಯ ಕಥೆಗಾರ. ಅವರ ಮಗದೊಮ್ಮೆ ಬುದ್ಧ ನಕ್ಕ ಕಥಾಸಂಕಲನದ ಒಂದು ಕಥೆ ಎದೆಯ ಬಾವ್ಯಾಗೀನ ಬೊಗಸೆ ನೀರು ಜಾತಿಯತೆಯ ಕರಾಳ ಸಿಕ್ಕುಗಳಿಗೆ ಕುಮಾರಿಯೊಬ್ಬಳ ಕನ್ಯತ್ವ ಹರಣ, ಅತ್ಯಾಚಾರಕ್ಕೆ ಬಲಿಯಾಗ...

‘ಕಾವ್ಯ ಅಂದ್ರ ಕವಿಯ ಮನಿ- -ಯ ಮೇಜವಾನೀ’ – ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಪ್ರಕಟಿಸಿರುವ ಆನಂದ ಝಂಜರವಾಡರ ‘ಶಬ್ದ ಪ್ರಸಂಗ’ ಸಂಕಲನ ಓದುಗನಿಗೆ ಮುಖಾಮುಖಿಯಾಗುವುದೇ ಮೇಲಿನ ಸಾಲುಗಳ ಮೂಲಕ. ಈ ಕವಿಯ ಮನೆಯ ಮೇಜವಾನಿ ಅಂತಿಂಥದಲ್ಲ...

ಮಹಾತ್ಮ ಗೌತಮ ಬುದ್ಧರ ಆದರ್ಶಗಳನ್ನು ಅನುಪಾಲಿಸಿಕೊಂಡು ಬದುಕುತ್ತಿರುವ ಶ್ರೀ ಎಸ್. ಎಂ. ಜನವಾಡಕರ್‌ ಹೆಸರು ಬೀದರ ಜಿಲ್ಲೆಯ ಸಾಹಿತ್ಯ ಲೋಕದಲ್ಲಿ ಈಗಾಗಲೆ ಚಿರಪರಿಚಿತ ಹೆಸರಾಗಿದೆ. ದಿನಾಂಕ: ೩-೧-೧೯೫೦ ರಂದು ಹಾಲಹಳ್ಳಿ ಗ್ರಾಮದಲ್ಲಿ ಜನಿಸಿದ ಇವರು...

‘ನನ್ನೂರು ನನ್ನವ್ವ’ ಡಾ ಭತಮುರ್ಗೆ ಚಂದ್ರಪ್ಪರವರು ಪ್ರಕಟಿಸಿದ ವಿಶಿಷ್ಟ ಗ್ರಂಥ. ಡಾ. ಭತಮುರ್ಗೆರವರು ತಮ್ಮ ಪಾಲಕರ ಕುರಿತಂತೆ ಜೀವನ ಗಾಥೆಯನ್ನು ಬಿಳಿ ಹಾಳೆಗಳ ಮೇಲೆ ಭಟ್ಟಿ ಇಳಿಸಿದ ಈ ಗ್ರಂಥ ನಿಜವಾಗಿಯೂ ಅನನ್ಯ. ಸುಮಾರು ೨೪೮ ಪು...

ಯಾವುದರ ಬಗ್ಗೆಯೇ ಆಗಲಿ ನೇರ ನೋಟ ನೀಡುವುದು ಒಂದು ಬಗೆಯಾದರೆ ವಾರೆನೋಟ ನೀಡುವುದು ಇನ್ನೊಂದು ಬಗೆ. ನೇರವಾಗಿ ನೋಡಿದಾಗ ಪ್ರಕಟವಾಗದ ಆಯಾಮಗಳು ವಾರೆನೋಟದಲ್ಲಿ ಪ್ರಕಟವಾಗುತ್ತವೆ. ಈ ಕಾರಣದಿಂದಲೋ ಏನೋ ಮನುಷ್ಯ ಸಮಾಜ ಸಾಹಿತ್ಯ ಎಂಬ ಪ್ರಕಾರವನ್ನು ಸೃ...

1234...8

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...