ಭ್ರಮೆ ಮತ್ತು ನೈಜತೆಗಳ ಸಾರಾಂಶ-Pirandello ನ Six Characters in Search of an Author

ಭ್ರಮೆ ಮತ್ತು ನೈಜತೆಗಳ ಸಾರಾಂಶ-Pirandello ನ Six Characters in Search of an Author

ಇಟಾಲಿಯನ್ ನಾಟಕಕಾರನೂ ಕಾದಂಬರಿಕಾರನೂ ಆದ Luigi Pirandello ೧೮೬೭ರಲ್ಲಿ ಸಿಸಿಲಿಯದ Agrigento ನಲ್ಲಿ ಜನಿಸಿದ. ವಿದ್ಯಾಭ್ಯಾಸವನ್ನು ರೋಮನಲ್ಲಿ ಮುಗಿಸಿBonn ಯುನಿವರ್ಸಿಟಿಯಿಂದ ಡಾಕ್ಟರೇಟ ಪಡೆದು ಇಟಾಲಿಯನ್ ಉಪನ್ಯಾಸಕನಾಗಿ ನೇಮಕವಾಗಿದ್ದ. ಆತನ ನಾಟಕಗಳ ಪ್ರಮುಖ ವಸ್ತುಗಳೆಂದರೆ ನೈಜತೆ ಮತ್ತು ಭ್ರಮೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಿಕೆಯಲ್ಲಿ ಮಾನವನ ಅಸಮರ್ಥತೆಯನ್ನು ಬಿಂಬಿಸುವುದೇ ಆಗಿವೆ. ಮೂರು ನಾಟಕಗಳು “Six Characters in Search of an Author”, “Each in his Own Way” and “Tonight we Improvise form Henry IV” ಗಳಲ್ಲಿ ಒಂದೇ ಸಂಗತಿಯಾದ ಭ್ರಮೆ ಮತ್ತು ವಾಸ್ತವತೆಯ ನಡುವಿನ ಘರ್ಷಣೆಯನ್ನು ಸಮೀಕರಿಸುವುದರಿಂದ ತ್ರಿಕೋನ ಸರಣಿಯಂತೆ ಕಂಡುಬರುತ್ತವೆ. ವಾಸ್ತವ ಬದುಕು ಮತ್ತು ತೆರೆಯ ಮೇಲಿನ ಬದುಕು ಇವೇ ಈ ನಾಟಕಗಳ ಮುಖ್ಯ ಆದ್ಯತೆಗಳು.

“Six Characters in Search of an Author”, ನಾಟಕ ಕಾಲ್ಪನಿಕ ಪಾತ್ರಗಳು ಮತ್ತು ನಟರ ನಡುವಣ ಘರ್ಷಣೆ ಹಾಗೂ ನೈಜ ಬದುಕಿನ ಪಾತ್ರಗಳು ಮತ್ತು ರಂಗದ ಮೇಲಿನ ಪಾತ್ರಗಳ ನಡುವಿನ ಘರ್ಷಣೆಯನ್ನು ಪ್ರತಿಫಲಿಸುತ್ತದೆ. ಅಲ್ಲದೇ ನಾಟಕ ನಟರು ಮತ್ತು ನಾಟಕ ನಿರ್ದೇಶಕರು ಅವರುಗಳ ನಡುವಿನ ಘರ್ಷಣೆಗೆ ಸಂಬಂಧಿಸಿದೆ.

ನಾಟಕದೊಳಗೊಂದು ನಾಟಕ ಹೆಣೆದಂತೆ ನಾಟಕದ ಮೊದಲ ಅದ್ಯಾಯದಲ್ಲಿ ನಾಟಕದ ರಿಹರ್ಸಲ್‌ನ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಥೇಟರ ಕಂಪನಿಯೊಂದು ಮ್ಯಾನೇಜರ, ಡೈಲಾಗು ಹೇಳಿಕೊಡುವವ ಹಾಗೂ ಮಾಲಕ ಇವರುಗಳ ಸಹಭಾಗಿತ್ವದಲ್ಲಿ ಪಿರಾಂಡೆಲೋನ ನಾಟಕವೊಂದನ್ನು ರಿಹರ್ಸಲ್ ನಡೆಸುತ್ತಿದ್ದಾರೆ. ಮುಖತಃ ಪಿರಾಂಡೆಲೋ ನಾಟಕ ರಿಹರ್ಸಲ್ ನಡೆಸುತ್ತಿದ್ದಾನೆ. ಅಲ್ಲಿಗೆ ಬರುವ ನಟರು ಎರಡನೆ ದೃಶ್ಯದ ರಿಹರ್ಸಲ್‌ಗೆ ಅಣಿಯಾದವರಂತೆ ನಟಿಸುತ್ತಿದ್ದಾರೆ. ನಾಟಕದ ಮ್ಯಾನೇಜರ ಕೆಲವು ನಿರ್ದೇಶನಗಳ ನೀಡುತ್ತಿದ್ದಾನೆ. ಅಷ್ಟರಲ್ಲೆ ಅಲ್ಲಿ ಸಣ್ಣಗೆ ಜಗಳ ಶುರುವಾಗಿದೆ. ನಾಟಕದ ಮುಖ್ಯ ವ್ಯಕ್ತಿ ತನ್ನ ವೇಷಭುಷಣಗಳ ಬಗ್ಗೆ ಸಣ್ಣಗೆ ಕೊಂಕು ತೆಗೆದಿದ್ದಾನೆ. ಅದಕ್ಕೆ ಮ್ಯಾನೇಜರ ಬಟ್ಟೆಗೂ ರಂಗದ ದೃಶ್ಯಕ್ಕೂ ಇರಬೇಕಾದ ಸಾಮ್ಯತೆ ಬಗ್ಗೆ ಹೇಳುತ್ತ ಮತ್ತೇ ತಾನೇ ಏನಾಯಿತೆಂದು ಪ್ರಶ್ನಿಸುತ್ತಾನೆ. ಅದಕ್ಕೆ ಮುಖ್ಯ ಪಾತ್ರಧಾರಿ ಕೂಡಾ ತಾನೇನು ಮಾಡುತ್ತಿರುವೆನೆಂದು ತನಗೆ ತಿಳಿಯದೆಂದು ಒಪ್ಪಿಕೊಳ್ಳುತ್ತಾನೆ. ಹೀಗೆ ಇಬ್ಬರಲ್ಲೂ ತಾವೇನು ಮಾಡುತ್ತಿರುವೆವೆಂಬ ಜ್ಞಾನವಿಲ್ಲದ ವರ್ತನೆ. ನಾಟಕ ಸುಮಾರಾಗಿದೆ, ಅರ್ಥೈಸಲು ಕಷ್ಟಕರವಾಗಿದೆ ಎಂಬುದು ಮ್ಯಾನೇಜರನ ಅಂಬೋಣ. ರಿಹರ್ಸಲ್ ಪ್ರಾರಂಭವಾಗಿದೆ. ಅದೇ ಸಮಯಕ್ಕೆ ಬಾಗಿಲು ಕಾಯುವವ ಮಧ್ಯೆ ಪ್ರವೇಶಿಸಿ ಕೆಲವು ಜನ ಮ್ಯಾನೇಜರನನ್ನು ಕಾಣಲು ಬಂದಿರುವರೆಂದು ತಿಳಿಸುತ್ತಾನೆ. ಆ ಪಾತ್ರಧಾರಿಗಳೆಲ್ಲ ತರವೇಹಾರಿ ವ್ಯಕ್ತಿತ್ವಕ್ಕೆ ಸಾಕ್ಷಿಭೂತರಂತೆ ಕಾಣಿಸುತ್ತಿದ್ದಾರೆ. ಅವರ ಆಗಮನದ ಉದ್ದೇಶವೆಂದರೆ ಅವರಿಗೆ ತಮ್ಮ ನಾಟಕಕ್ಕೆ ಒಬ್ಬ ಲೇಖಕನ ಅಗತ್ಯವಿದೆ ಎಂಬುದು.

ಅವರನ್ನು ಈಗಾಗಲೇ ತನ್ನ ನಾಟಕಕ್ಕೆ ಆಯ್ಕೆ ಮಾಡಿಕೊಂಡ ಲೇಖಕನೊಬ್ಬ ಅವರನ್ನು ಕೈಬಿಟ್ಟಿದ್ದಾನೆ. ಅದಕ್ಕಾಗಿ ಅವರ ಜೀವನದ ಒಂದೇ ಅವಕಾಶವೆಂದರೆ ಅವರುಗಳನ್ನು ತನ್ನ ನಾಟಕದಲ್ಲಿ ಬಳಸಿಕೊಳ್ಳುವ ಲೇಖಕನೊಬ್ಬ ಅಗತ್ಯತೆ. ಮುಖ್ಯ ಪಾತ್ರಧಾರಿಯಾದ ತಂದೆ ಮ್ಯಾನೇಜರನಿಗೆ ತಾನು ಮತ್ತು ಉಳಿದ ಐದುಜನರು ಬರಿಯ ಪಾತ್ರಗಳು. ನೈಜ ವ್ಯಕ್ತಿತ್ವಗಳಲ್ಲ ಎನ್ನುತ್ತಲೇ ಎಲ್ಲರೂ ಗೊಂದಲದ ನಡುವೆಯೂ ಮೋಜಾಗಿ ಕಂಡು ನಗುತ್ತಾರೆ. ಬದುಕೇ ಹಾಗೆ. ಚಿತ್ರವಿಚಿತ್ರ ಸಂದರ್ಭ ಸಂಬಂಧಗಳ ಕೂಡಿಸುತ್ತದೆ.

ಮ್ಯಾನೇಜರ ಮೊದಲಿಗೆ ಈ ಬೇಡಿಕೆಯಿಂದ ಗಲಿಬಿಲಿಗೊಳ್ಳುತ್ತಾನೆ. ಆತನ ಮಾತುಗಳ ಗಂಭೀರವಾಗಿ ತೆಗೆದುಕೊಂಡಿಲ್ಲದಂತೆ ಇರುವಾಗಲೇ ತಂದೆ ಪಾತ್ರಧಾರಿಯ ಮಾತು ಆತನ ತಟ್ಟುತ್ತದೆ. ಆತನ ಪ್ರಕಾರ ತಾನು ಮತ್ತು ಉಳಿದ ಪಾತ್ರಗಳು ಬರೀಯ ಪಾತ್ರಗಳಾಗದೇ ನೈಜ ಬದುಕಿಗೆ ಹಿಂತಿರುಗಬೇಕೆಂದರೆ ತಮಗೆ ತಮ್ಮ ಪಾತ್ರಗಳ ನಟರಂತೆ ಅಭಿನಯಿಸಿದಾಗ ಮಾತ್ರ ಸಾಧ್ಯ ಎಂಬ ಮಾತು ಮನ ಕಲಕುತ್ತದೆ. ಆತನ ನಾಟಕ ಅಪರಿಪೂರ್‍ಣವಾಗಿದ್ದು ಹಿಂದಿನ ಲೇಖಕ ಬರೀಯ ಎರಡು ದೃಶ್ಯಗಳ ಮಾತ್ರ ಬರೆದಿರುವುದಾಗಿ ಹೇಳುತ್ತಿದ್ದಂತೆ ಆತನ ಹಿರಿಯ ಮಲಮಗಳ ಪಾತ್ರಧಾರಿ ನಾಟಕದಲ್ಲಿ ಇನ್ನೊಬ್ಬ ಮಲಮಗಳು ಮೃತಪಟ್ಟ ಸಂಗತಿಯನ್ನು ತಿಳಿಸುತ್ತಾಳೆ. ತಾನೊಬ್ಬಳು ಮಾತ್ರ ಬದುಕಿರುವ ಸಂಗತಿಯನ್ನು ಅರಹುತ್ತಾಳೆ. ಹೀಗೇ ನಾಟಕದ ಪ್ರಾರಂಭ ಅದರಲ್ಲೊಂದು ನಾಟಕ ದೃಶ್ಯ ಮತ್ತೇ ಅಲ್ಲೆ ವಾಸ್ತವಿಕ ಪಾತ್ರಗಳ ನಟನೆ ಎಲ್ಲವೂ ಒಳಗೊಂಡು ಚಿತ್ರವಿಚಿತ್ರ ರೀತಿಯಲ್ಲಿ ನಾಟಕ ಮುಂದುವರೆಯುತ್ತಾ ಹೋದರೂ ಅದು ನೀಡುವ ಸಂದೇಶ ವಿಸ್ಮಯಗೊಳಿಸುತ್ತದೆ.

ಕಥೆ ಮುಂದುವರೆದಂತೆ ಪಾತ್ರಗಳ ಒಳ ಬದುಕು ಬಿಚ್ಚಿಕೊಳ್ಳುತ್ತ ಜೀವನದ ವಿವಿಧ ಮುಖಗಳು ತೆರೆದುಕೊಳ್ಳುತ್ತವೆ. ಆತನೊಂದು ಹಳ್ಳಿಯ ಹೆಣ್ಣನ್ನು ವಿವಾಹವಾಗಿದ್ದಾನೆ. ಅವರಿಗೊಬ್ಬ ವಾರಸುದಾರನೂ ಹುಟ್ಟಿ ಬೆಳೆದಂತೆ ತಂದೆಗೆ ತನ್ನ ಪತ್ನಿಯಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ತನ್ನ ಪತ್ನಿಗೆ ತನ್ನ ಸೆಕ್ರೆಟರಿಯೇ ಸರಿಯಾದ ಜೋಡಿಯೆಂಬ ನಿರ್ದಾರಕ್ಕೆ ಬಂದು ಆಕೆಯನ್ನು ಆತನೊಂದಿಗೆ ಓಡಿಹೋಗುವಂತೆ ಸ್ವತಃ ಪತಿಯೇ ಬಲವಂತಗೊಳಿಸುತ್ತಲೇ ಬೇರೆ ಉಪಾಯಗಾಣದೆ ಆಕೆ ಆತನ ಜೊತೆ ಹೊರಟುಹೋಗುತ್ತಾಳೆ. ಹಾಗೂ ಆತನಿಂದಲೂ ಆಕೆ ಮೂರುಮಕ್ಕಳ ಪಡೆಯುತ್ತಾಳೆ. ಇದರಿಂದ ಮೊದಲ ಮಗ ಸಕಾರಣವಾಗಿ ಆ ಕುಟುಂಬ ಮತ್ತು ಆ ಮಕ್ಕಳ ಬಗ್ಗೆ ಅಸೂಯಾಪರನಾಗುತ್ತಾನೆ. ಆದರೆ ತಂದೆ ಮನುಷ್ಯನ ಮಾನಸಿಕ ಅಸಂತುಲಿತಕ್ಕೆ ಉದಾಹರಣೆಯಾಗಿ ಆ ತಂದೆ ಕಂಡುಬರುತ್ತಾನೆ. ಆ ಕುಟುಂಬದ ಬಗ್ಗೆ ಅನಾವಶ್ಯಕ ಕಾಳಜಿ ವಹಿಸುತ್ತಾನೆ. ತನ್ನ ಹಳೆಯ ಹೆಂಡತಿ ಮತ್ತಾಕೆಯ ಮಕ್ಕಳ ಬಗ್ಗೆ ವಿಚಿತ್ರವಾದ ವ್ಯಾಮೋಹಕ್ಕೆ ಒಳಗಾಗುತ್ತಾನೆ. ಬಡತನವನ್ನೆ ಬದುಕುತ್ತಿದ್ದ ಆ ಕುಟುಂಬ ಕೆಲವು ವರ್ಷಗಳ ತರುವಾಯ ಆತನ ಸೆಕ್ರೆಟರಿಯ ಮರಣದೊಂದಿಗೆ ಅನಾಥವಾಗುತ್ತದೆ. ಕುಟುಂಬ ನಿರ್ವಹಣೆಗೆ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಪಟ್ಟಣಕ್ಕೆ ವಲಸೆಹೋಗುತ್ತಾಳೆ. ಆದರೆ ಅಲ್ಲಿ ಹಿರಿಯ ಮಲಮಗಳು Madame Pace ಳ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾಳೆ. ಆದರೆ ಅದೊಂದು ವೈಶ್ಯಾ ಅಡ್ಡೆ ಎನ್ನುವುದು ತಿಳಿಯುವ ವೇಳೆಗೆ ಆಕೆ ಆ ದಂಧೆಗೆ ಬಲಿಪಶುವಾಗುತ್ತಾಳೆ.

ಆದರೆ ದುರಂತವೆಂದರೆ ಕಲ್ಪಿಸಿಕೊಳ್ಳಲು ಸಾಧ್ಯವಾಗದಂತೆ ಸ್ವತಃ ಮಲತಂದೆ ತನ್ನ ದೇಹ ಬಯಕೆಯ ನಿವಾರಿಸಿಕೊಳ್ಳಲು ವೈಶ್ಯಾಗೃಹಕ್ಕೆ ಬರುವುದು, ತನ್ನ ಮಲಮಗಳೊಂದಿಗೆ ಗೊತ್ತಿಲ್ಲದೇ ದೇಹಸಂಬಂಧ ಹೊಂದಲು ಪ್ರಯತ್ನಿಸುವುದು ಅಷ್ಟರಲ್ಲಿ ಆಕೆಯ ತಾಯಿ ಬಂದು ಅನಾಹುತವನ್ನು ತಡೆಯುವುದು ಹೀಗೆ ವಿಚಿತ್ರ ಸನ್ನಿವೇಷಗಳು ನಿರ್ಮಾಣವಾಗುತ್ತದೆ. ಮುಂದೆ ಮಲಮಗಳು ವೈಶ್ಯಾವಾಟಿಕೆಗೆ ಬಲಿಯಾಗುವಲ್ಲಿ ಆಕೆಯ ಮಲ‌ಅಣ್ಣನ ಕೈವಾಡವಿರುವುದು ತಂದೆಗೆ ತಿಳಿಯುತ್ತದೆ. ತಂದೆ ಅವರ ಸಂಕಷ್ಟ ನೋಡಲಾಗದೆ ತನ್ನೊಂದಿಗೆ ಬರುವಂತೆ ಕೇಳುತ್ತಾನೆ. ಆದರೆ ಕೊನೆಯಲ್ಲಿ ನಾಲ್ಕು ವರ್ಷದ ಸಣ್ಣ ಮಲಮಗಳು ಗಾರ್ಡನ್ನಿನ ಕಾರಂಜಿ ಬಳಿಯಲ್ಲಿ ಶವವಾಗಿ ಬಿದ್ದಿರುವ ಸುದ್ದಿ ಅದನ್ನು ನೋಡಿದ ಆಕೆಯ ಅಣ್ಣ ವೇದನೆ ತಾಳದೆ ತನ್ನ ಗುಂಡಿಕ್ಕಿಕೊಂದುಕೊಳ್ಳುವುದು, ಹಿರಿಯ ಮಲಮಗಳು ಮನೆಬಿಟ್ಟು ಹೊರಟುಹೋಗುವುದರೊಂದಿಗೆ ಕಥೆ ಮುಗಿಯುತ್ತದೆಯೆಂದು ತಂದೆ ಹೇಳುತ್ತಾನೆ.

ಕಥೆ ಕೇಳಿದ ಮ್ಯಾನೇಜರ ಅದರ ಸಾರ ಕೇಳಿ ನಾಟಕ ರಚನೆಗೆ ಕೊನೆಗೂ ಒಪ್ಪಿಗೆ ನೀಡುತ್ತಾನೆ. ಈಗ ನಾಟಕ ಇನ್ನೊಂದು ರೂಪ ಪಡೆದುಕೊಳ್ಳುತ್ತದೆ. ನಾಟಕರಂಗಮಂಚದಲ್ಲಿ ಆ ಪಾತ್ರಗಳು ಪುನಃ ನಟನೆಯ ಪಾತ್ರಗಳಾಗಿ ಅಭಿನಯಿಸತೊಡಗುತ್ತವೆ. ತಂದೆ ಮಗಳ ಅಸಹನೀಯವೆನಿಸುವ ವೈಶ್ಯಾಗೃಹದ ಸನ್ನಿವೇಷ ಮ್ಯಾನೇಜರನಿಗೆ ಕಿರಿಕಿರಿ ಎನ್ನಿಸುತ್ತದೆ. ಮೂಲನಟರು ತಮ್ಮ ಕಡೆಗಣಿಸಿ ಆ ಹೊಸ ಪಾತ್ರಧಾರಿಗಳ ಬಳಸಿಕೊಂಡು ನಾಟಕ ಮಾಡಲು ಹೊರಟ ಮ್ಯಾನೇಜರ ಬಗ್ಗೆ ಅಸಮಾಧಾನಗೊಳ್ಳುತ್ತಾರೆ. ನಟರ ನೈಜ ವ್ಯಕ್ತಿತ್ವ ಆವಾಹಿಸಿಕೊಳ್ಳುವ ವ್ಯಕ್ತಿತ್ವಗಳನ್ನು ಮೂರ್ತರೂಪಕ್ಕಿಳಿಸುವಲ್ಲಿ ನಾಟಕಕಾರನ ಅಸಾಮಾನ್ಯ ಕೌಶಲ್ಯ ಬೆರಗುಗೊಳಿಸುತ್ತದೆ. ಪ್ರೇಕ್ಷಕ ಹೊಸ ಪ್ರಯೋಗವೊಂದನ್ನು ಆಸ್ವಾದಿಸುತ್ತಾನೆ.

Pirandello ವಯಕ್ತಿಕ ಜೀವನ ಅಷ್ಟು ಸಂತೋಷದಾಯಕವಾಗಿರಲಿಲ್ಲ. ತಂದೆ ತಾಯಿ ನೋಡಿದ ಹೆಣ್ಣನ್ನು ವಿವಾಹವಾದ ತನ್ನ ಮೂರನೇ ಹೆರಿಗೆಯಲ್ಲಿ ಮಾನಸಿಕ ಕ್ಷೋಭೆಗೆ ಒಳಗಾದ ಪತ್ನಿಯನ್ನು ನೋಡಿಕೊಳ್ಳುವುದರಲ್ಲೆ ಹಣ್ಣಾದ. ತಾಯಿಯ ಸ್ಥಿತಿಯಿಂದ ನೊಂದ ಮಗಳು ಕೂಡಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ರಾಜಕೀಯ ದೊಂಬರಾಟ ಮತ್ತು ಭ್ರಷ್ಟತೆಯ ಪರಿಶೋಧಿಸುವ ಆತನ ಬರಹ ಕೃತಿಗಳಿಂದ ಆತ ಶತೃಗಳ ಸಂಪಾದಿಸಿದ. ತನ್ನ ನೋವುಗಳ ನಿವಾರಣೆಗೆ ನಾಟಕ ಬರವಣಿಗೆಯನ್ನು ನಿರಂತರವಾಗಿ ಮುನ್ನೆಡಿಸಿದ ಆತ ಶ್ರೇಷ್ಟ ನಾಟಕಕಾರನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ. ೧೯೩೬ರಲ್ಲಿ ಮರಣ ಹೊಂದಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇವರಾರೆಂದು ಹೇಳಮ್ಮ
Next post ಕತ್ತಲು

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…