ಇವರಾರೆಂದು ಹೇಳಮ್ಮ

ಮಗು : ಚಾಳೀಸು ಧರಿಸಿ ಕೈಯಲಿ ಕೋಲನ್ನು
ಹಿಡಿದಿಹ ಯೋಗಿ ಯಾರಮ್ಮ?
ತಾಯಿ : ಅವರು ನಮ್ಮಯ ಗಾಂಧಿ ತಾತ
ನಮ್ಮ ದೇಶದ ಪಿತಾಮಹ
ಮಗು : ಗಾಂಧಿ ಟೋಪಿ ಖಾದಿ ಜುಬ್ಬ
ವಾಜ್‌ಕೋಟಿನಲಿ ಇದೆ ಗುಲಾಬಿ?
ತಾಯಿ : ಅಯ್ಯೋ ಮರಿ ನಿನಗೆ ಗೊತ್ತಿಲ್ವೆ?
ಚಾಚಾ ನೆಹರು ಪ್ರಧಾನಿಯಲ್ವೆ?
ಮಗು : ಬೋಳು ತಲೆ ಅಜಾನುಬಾಹು
ಘನ ಗಂಭೀರ ಅಂತೆ ಸುಬಾಹು?
ತಾಯಿ : ವಲ್ಲಭಭಾಯಿ ಪಟೇಲರವರು
ಉಕ್ಕಿನ ಮನುಷ್ಯ ಎಂದು ಕರೆವರು
ಮಗು : ಕನ್ನಡಕಧಾರಿ ಸಮವಸ್ತ್ರ ಧರಿಸಿಹ
ಸೆಲ್ಯೂಟ್ ಮಾಡುವ ಶಿಸ್ತಿನ ಶಿಪಾಯಿ?
ತಾಯಿ : ನೇತಾಜಿ ಸುಭಾಸ ಚಂದ್ರರು ಅವರು
ದೇಶಕೆ ಜೀವ ಮುಡಿಪಾಗಿಟ್ಟರು
ಮಗು : ಪುಟ್ಟ ದೇಹದ ಖಾದಿ ಬಟ್ಟೆಯನ್ನು
ಧರಿಸಿಹ ಯೋಗಿ ಗೊತ್ತೇನಮ್ಮ?
ತಾಯಿ : ಜೈ ಜವಾನ್ ಜೈ ಕಿಸಾನ್‌ದ ಮಹನೀಯರು
ನಮ್ಮ ಬಡ ಪ್ರಧಾನಿ ಲಾಲ್ ಬಹಾದ್ದೂರರು
ಮಗು : ಇಂಗ್ಲೀಷ್ ಹ್ಯಾಟು ಧರಿಸಿದ ಯುವಕ
ಕುಡಿ ಮೀಸೆ ಹುರಿ ಮಾಡುತಿರುವರಾರಮ್ಮ?
ತಾಯಿ : ಬ್ರಿಟಿಷರ ಪಾರ್ಲಿಮೆಂಟಿನಲಿ ಬಾಂಬೆಸೆದ
ನೇಣಿಗೆ ಬಲಿಯಾದ ಭಗತ್‌ಸಿಂಗ್‌ರು
ಮಗು : ಕಟ್ಟುಮಸ್ತಾದ ಬರಿ ಮೈಯಲ್ಲಿರುವ
ಹುರಿ ಮೀಸೆ ಸರದಾರ ಯಾರಮ್ಮ?
ತಾಯಿ : ಕ್ರಾಂತಿಕಾರಿಗಳ ಸಹಚರನಾಗಿದ್ದ
ಬ್ರಿಟಿಷರಿಗೆ ಸಿಂಹಸ್ವಪ್ನನಾಗಿದ್ದ ರಾಜಗುರು

ದೇಶದ ಸ್ವಾತಂತ್ರ್ಯಕೆ ಅವರೆಲ್ಲರೂ
ದೇಹ ಬಲಿದಾನಗೈದಿಹ ವೀರರು
ಅವರ ಆದರ್ಶ ಬೆಳೆಸಿಕೋ ಮಗು
ಭಾವಿ ಭಾರತವನು ನೀ ಬೆಳಗು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರು ಗತಿಯೆನಗೆ
Next post ಭ್ರಮೆ ಮತ್ತು ನೈಜತೆಗಳ ಸಾರಾಂಶ-Pirandello ನ Six Characters in Search of an Author

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…