Home / ಕವನ / ಕವಿತೆ

ಕವಿತೆ

ನಭೋ… ಮಂಡಲದಿ.. ಮಿನುಗು-ತಾರೆಗಳನೇಕ.. ಸೂರ್ಯನ ಪ್ರಕಾಶ ಮೀರುತಲಿ ಕತ್ತಲೆಯೊಂದಿಗ್ಗೆ – ಹೋರಾಡುತ ಬೆಳಗು… ಮುನ್ನ ಕರಗುವವು ರಾಷ್ಟ್ರ… ಮಂಡಲದಿ… ಮಿಂಚಿದ ದೇಶಪ್ರೇಮಿಗಳನೇಕ ನೇತಾಜಿ, ಭಗತ್, ಚಂದ್ರಶೇಖರ ರಾಯಣ್...

ನವ ಶತಮಾನದಲಿ ಕಾಲಿಡುತಿಹೆವು ಸ್ವಾತಂತ್ರ್ಯದ ಸುವರ್ಣ ಹಬ್ಬದ.. ಸಡಗರದ… ಸಂತಸಗಳಲಿ ಗತಿಸಿ ಹೋದ ನಲವತ್ತೇಳರ ಘಟನೆಗಳ ನೆನೆಯುತ ಬಲಿದಾನದ ವೀರಸೇನಾನಿಗಳ ತ್ಯಾಗದ ರೂಪ ಕಾಣುತ ಸಾಗಿಹದು ಸ್ವಾತಂತ್ರ್ಯಯ ಸುವರ್ಣೋತ್ಸವ ಸೌಂದರ್ಯರಾಣಿ… ಮ...

ನೀ ಮಾಡುವಿಯೆಂದರೆ ಯಾರ ಬ್ಯಾಡಂತಾರ ಮಾಡಪ್ಪ ಚಿಂತಿ ||ಪ|| ನೀ ಮಾಡೋದು ಘಳಿಗಿಸಂತಿ ಮೇಲ್ ಮಾಳಿಗಿ ಕಟ್ಟಬೇಕಂತಿ ಆನೆ ಅಂಬಾರಿ ಏರಬೇಕಂತಿ ಎಂಟು ಬಣ್ಣದ ಕೌದಿ ಮರತಿ ||೧|| ಬದುಕು ಬಾಳೇವು ನಂದೇ ಅಂತಿ ಒಳ್ಳೇ ಒಳ್ಳೇದು ಮನೆಯ ತುಂಬುತಿ ಗಂಡಗೈ ಅವಧೂತ...

ಹೌದಪ್ಪ ಹೌದೋ ನೀನೇ ದೇವರಾ ನಿಂದ ನೀ ತಿಳಿದರ ನಿನಗಿಲ್ಲೋ ದೂರಾ ||ಪ|| ನೀರಿಲ್ಲದ ಜಳಕ ಮಾಡಿರಬೇಕೋ ಅರಿವೆಯಿಲ್ಲದ ಮಡಿಯ ಉಟ್ಟಿರಬೇಕೋ ಊಟಯಿಲ್ಲದ ಹೊಟ್ಟೆ ತುಂಬಿರಬೇಕೋ ||೧|| ನಿದ್ದೆಯೊಳಗೆ ಸದಾ ಎಚ್ಚರವಿರಬೇಕೋ ತಂಬಾಕಿಲ್ಲದ ಬತ್ತಿ ವಳೆ ಸೇದಿರಬೇ...

ನೋವಿನ ಬಿರುಗಾಳಿ ಬಾಳಲಿ ಬೀಸುತಲಿ ಬರೆ ನೀಡುತ… ಬಡಿದು-ನೋಯಿಸುತ ತನು-ಮನ ಕಲುಕುತಿಹದು ಪ್ರತಿಭೆ-ಪ್ರಸನ್ನತೆಗಳ ಭ್ರಮನಿರಸನದ ಆದರ್ಶ ಬವಣೆಯಲಿ ಬಳಲುತಿಹದು ಅನಾಚಾರ… ಕಂದಾಚಾರ ರಾರಾಜಿಸುತ… ರಂಜನೆಯಲಿ ಎಲ್ಲೆಡೆ ಹರಡಿಹವು ಏಕನ...

ನೀರು ನೀರೆಂದರೆ ಏನೆಂದು ತಿಳಿದಿರಿ |  ಜನರೆ || ನೆಲಮುಗಿಲ ಸಂಗಮ ತಿಳಿ ಇದರ ಮರ್ಮ ಮನುಷ್ಯ ತಯ್ಯಾರು ಮಾಡಲಾಗದು ನೀರು || ಭೂಮಿ ಮ್ಯಾಲಿನ ನೀರು ಆವಿಯಾಗಿ ಮುಗಿಲೂರು ತಲುಪಿ ಮೋಡಗಳಾಗಿ ನೆಲ ಶಾಖದಿ ಮಳೆಯಾಗಿ || ಸೂರ್ಯ ಕಾರಣಿಭೂತ ಕೇಳೊ ಜ್ಞಾನದ ಮ...

ಹಲವು ಯೋಚನೆಯಿಂದ ಬಳಲಿದರೇನಿದು ಸುಲಭದಿ ಸದ್ಗುರುಸೇವೆಯೊಳಿರದೆ ||ಪ|| ತಿಳಿದು ಪರಮ ಜೀವರೊಂದುಗೂಡಿಸಿ ತತ್ವ- ಗಳ ಅರಿತು ಮಾಯಾ ಅಳಿಯೆ ಮುರಿಯದೆ ||೧|| ನರಜನ್ಮ ಸ್ಥಿರವೆಂದು ಜರೆಮರಣದೊಳು ನೊಂದು ಮರಳಿ ಮರಳಿ ಭವಕೆ ಬರಬಹುದೆ ||೨|| ಧರೆಯೊಳುದಿದಿ...

ಬೆಳಗು ದೀಪವೆ ಬೆಳಗುತಿರು ನೀ….. ನಿನ್ನ ಬೆಳಕಲಿ ಗುರಿಯಿದೆ….. ಅನಂತ ನಿಶೆಯನು ದೂಡೋ ನಿನ್ನಯ ನಿಯತಿಯಣತಿಗೆ ಗೆಲುವಿದೆ….. ನಿತ್ಯ ಮೂಡೋ ಸತ್ಯ ನೇಸರ ತುಂಬಿದಂಬರ ಕೀರ್ತಿಗೆ….. ಧ್ಯಾನ ಮನನದ ಗಾನ ತುಂಬುರ ಚಿದಂಬರಗೂಢ...

ಸಂಸಾರದ ಗೊಡವಿ ಇನ್ನ್ಯಾಕೆ ಇನ್ನ್ಯಾರಿಗೆ ಬೇಕೆ ||ಪ|| ಭವಸಾಗರದೊಳು ಮುಳುಗಿ ಮುಳುಗುತಿರೆ ನವಿದು ನವಿದು ಯಮರಾಜನು ಕೊಲುವಾ ||ಅ. ಪ|| ಒಂಟೆಯ ಮೇಲೆ ಹತ್ತಿದೆನವ್ವಾ ಗಂಟೆಯ ನುಡಿಸಿದೆ ತಾಯವ್ವ ಕಂಟಕ ಹರಿಸಿ ಸೊಂಟರಗಾಳಿಯ ದಾಂಟಿನಡಿದು ಮತ್ತೆಂಟುಕೋ...

  ಸಂಜೆಗತ್ತಲಿನ ಸಂಗೀತವನ್ನು ಮೆಚ್ಚಿ ಬಂದು ಕುಳಿತಿದ್ದಾನೆ, ಅವನು ಬೆಚ್ಚಗೆ ಅವಳನ್ನೊದ್ದುಕೊಂಡು. ಗೂಡಿನ ಹೂವುಗಳು ಸ್ವೇಚ್ಛೆಯಾಗಿ ಮಿಡುಕಿದ ನಂತರ ಹೊರಗಿನ ಗಾಳಿ ಅಲೆ‌ಅಲೆಯಾಗಿ ಅಪ್ಪಳಿಸಿದೆ. ಕಾಡಿನ ಥಂಡಿಯ ವಾತಾವರಣದಲ್ಲಿ ಅವಳು ಕಲಿಸಿದ ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...