Home / ಕವನ / ಕವಿತೆ

ಕವಿತೆ

ಕೈ ತುಂಬ ಹಣ ಕೈ ತುಂಬ ಅವಕಾಶ ಇದ್ದಾಗ ನೆನಪಾಗಲಿಲ್ಲ ಪಾಪ ಅಸಹಾಯ – ಪುರಸೊತ್ತೂ ಇರಲಿಲ್ಲ ಎನ್ನಿ ಬಹುಜನ ಹಿತಾಯ ಬಹುಜನ ಸುಖಾಯ ಮಂತ್ರ ಪಠಿಸುವುದಕ್ಕೆ ಆದರೂ ಏನಿದೆ ಧಕ್ಕೆ ? ಸಾಯುವೆ ರಸ್ತೆಯ ಮೇಲೆ ತಾನು ಸತ್ತರೇ ಉಪಕಾರ ಇನ್ನು ರಸ್ತೆಯ ಮೇ...

ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ ಪಾರಗಾಣಲಿಲ್ಲ ಪಾಪದ ಕುಂಡಾ ಘೋರನರಕದಿ ನೀವು ಜಾರಿಬಿದ್ದು ಹೊರಳುವಾಗ್ಗೆ ಸೇರದಾಯಿತು ಈ ಬ್ರಹ್ಮಾಂಡ ಪಿಂಡ ರಕ್ತ ಮಾಂಸ ಚರ್ಮ ಹೇಸಿಕೆಯ ಕಾಣಲಾಗಿ ಅದಕಂತೀರಿ ಬಾಳಿಯ ದಿಂಡಾ ತೋಳ ತೋಡಿ ನಾಭಿ ಸುಳಿ ಹಾಳುಗು...

ಕಲ್ಲುಗಡಗಿಯ ಒಳಗೆ ಒಂದು ಹಕ್ಕಿ ಐತ್ರಿ ಸಲ್ಲು ಸಲ್ಲಿಗೊಮ್ಮೆ ಅದು ಅಲ್ಲಾನ ನೆನಿತೈತ್ರಿ ಬಲ್ಲವರು ಹೇಳಿರಿ |ಪ| ಮಾರಿ ಮೇಲಕ ಮಾಡಿದರ ದೂರದಿಂದ ಕಾಣತೈತ್ರಿ |೧| ತೋರಿ ತೋರದ್ಹಾಂಗ ಗುಪ್ತರೂಪದಿಂದೈತ್ರಿ ಹೊರಗ ಒಳಗ ಕಾಣತೈತ್ರಿ |೨| ಐದು ಮಾರ್ಗದಿಂದ...

ಧರೆ ಬಿರಿದು ಉರಿಯುತಿದೆ ಮೆರೆಯುತಿವೆ ಘಾತಕ ಶಕ್ತಿಗಳು ಪರಿಹಾರ ತೋಚದ ಶ್ರೀ ಸಾಮಾನ್ಯನ ತೊಳಲು ಕೊಚ್ಚಿ ಹೋಗುತಿದೆ ನಾ ಮುಂದೆ ನೀ ಮುಂದೆನ್ನುತಾ… ರಾರಾಜಿಸುತಿಹರು ಸಮಾಜ ಪೀಡೆಗಳು ನ್ಯಾಯ… ನೀತಿ ಗಾಳಿಗೆ ತೂರಿ ಅಟ್ಟಹಾಸದಿ ನಗುತ ಮೆರ...

ಜಿಟ್ಟಿಹುಳಗಳು ಎದ್ದಾವು ಇದು ನೋಡು ಸೃಷ್ಟಿಪತಿ ಅರಸರಿಗೆಲ್ಲಾ ಕೇಡೋ ಅಷ್ಟದಶಮಧ್ಯದಲಿ ಒಪ್ಪುವ ನೆಟ್ಟನಾದಿಭೂಮಿ ದಿಲ್ಲಿಗೆ ಶ್ರೇಷ್ಠಕ್ರಿಸ್ತಾನಬಾದಶಹ ಪಟ್ಟಗಟ್ಟಲು ಕಂಡು ||ಪ|| ವಸುಮತಿಪತಿ ವರದಿಂ ಕುಮಾರ ಈಶಾನ್ಯೆಂಬುವ ಪರಮನವತಾರಾ ರೋಸಬಾದಶಾ ಇಂ...

ಪ್ರತಿ ಕತ್ತಲೆಗೆ ತಾನು ಮೆರೆವ-ಮೈತೆರೆವ ಬೆಳಕನ್ನು ತಿಂದ ಉತ್ಸಾಹ ಪ್ರತಿ ಬೆಳಕಿಗೂ ಅಬ್ಬ ಅಂಥ ಕತ್ತಲೆಯನ್ನೂ ಸೀಳಿ ಹೊರಜಿಗಿದ ಮುಗುಳುನಗೆ ಈ ಗಿಡದ ಹೂವೆಲ್ಲ ಬಾಡಿ ಬೀಳುತ್ತವಲ್ಲ ತನ್ನ ಉಡಿಗೇ ಎಂದು ಮಣ್ಣತಾತ್ಸಾರ ಈ ಮಣ್ಣಿನದೆ ಸಾರ ಹೀರಿ ಬೆಳೆಯು...

ಭಾವನದೀ ದಂಡೆಯ ಮೇಲೆ ತೂಗಿತಿದೆ ಉಯ್ಯಾಲೆ ಮಾತು ಸೋಲಿಸಿದೆ ತಾ….. ಮೌನ ಮಾಲೆ….. ಅನುದಿನ ಅನುಕ್ಷಣಕು ಕನಸುಗಳ ವಿನ್ಯಾಸ….. ಪರವಶವಾದ ಚಿತ್ತಕೆ ಇಲ್ಲಿ….. ಇಲ್ಲಿ ಚೈತ್ರದಾಯಾಸ….. ಎಷ್ಟು ಸೊಗಸಿನ ಲೋಕ ಇಣುಕುತ...

ದಿವಸಗಳು ಬೋರಾಗಿ ಮಾಡಲಾಗದೆ ಏನೂ ಜೀವಗಳು ನಿರ್ಜೀವ ನರಳುತ್ತವೆ ತಮ್ಮಲ್ಲಿ ಹುಟ್ಟಿದ ಬೆಂಕಿ ತಮ್ಮನ್ನೇ ಸುಡುತ್ತಿರುವಾಗ ಮಿಣುಕಿ ಹುಳುಗಳ ಹಾಗೆ ಉರುಳುತ್ತವೆ ಆಸೆಗಳು ಚೂರಾಗಿ ಹೆಣ ಬಿದ್ದ ಮಣ್ಣಲ್ಲಿ ಮುಗ್ದ ಹೂಗಳು ಮಾತ್ರ ಅರಳುತ್ತವೆ ಎಲ್ಲವೂ ಕ್ಷ...

ಶ್ರೀ ಗುರುವರನ ಕರುಣವ ಪಡೆಯುತ ಬೇಗದಿರಾಗರಚನೆಯಿಂದ ಕೊಂಡಾಡಿ ಭೋಗಿಭೂಷಣನನ್ನು ಭಕ್ತಿಯಿಂ ವೂಜಿಸಿ ಸಾಗಿಸು ಸಂಸಾರವಾ || ಪ || ಸಂಸಾರದಿಂ ಸುವಿಚಾರ ಮಾರ್ಗವ ತಿಳಿದು ಸಂಸಾರಶರಧಿಯ ನೀ ದಾಂಟು || ಆ, ಪ. || ನೋಡು ಕಲಿಯುಗದ್ಯೆದು ಸಾವಿರ ವಷ೯ಕ್ಕೆ ಕ...

ಬಂದಿತು ಬರಬಹುದು ಇದು ದುರ್ಮುಖಿ ಸಂವತ್ಸರಕೆ ಚಂದ್ರಧರನು ಕೋಪತಾಳಿ ಈ ಭೂಮಿಗೆ || ಪ || ಬಂದು ಕಲ್ಕಿ‌ಅವತಾರ ಸೀಮಿಗೆ ಮು೦ದುವರಿದು ಯಮರಾಜನ ಕೊಲೆಗಳ ದ್ವಂದ್ವನೇತ್ರಕೆ ಕಷ್ಟತರಿಸುವ ||ಆ.ಪ.|| ಚಾರುತರಹ ಚೌಭಾಗ ದಕ್ಷಿಣ ಸುಸೂತ್ರ ಮಳಿ-ಬೆಳಿ ಉತ್ತಮ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...