Home / ಕವನ / ಕವಿತೆ

ಕವಿತೆ

ಒಲವಿನ ಬೇಗೆಯ ಬೀಸುಗೋಲಿನ ಬಾಸಾಳಗಳ ತಾಳಲಾರೆ ಬಾರೆ ಮನ್ಮಥನ ಚೆಂದುಟಿ ನಿನ್ನ ಚೆನ್ನೈದಿಲೆ ಮೈಯನೆಲ್ಲ ಮುದ್ದಿಟ್ಟು ರಂಗೇರಿಸಿದೆ ಭಾವೋದ್ವೇಗದ ಸೆಳೆಮಿಂಚು ಉಕ್ಕಿಹರಿದು ಬಾಯಿ ಕಣ್ಣುಗಳ ಮುದ್ರಿಸಿದೆ ನರನರಗಳನುದ್ರೇಕಿಸಿದೆ ಮದಿರೆಯ ಮತ್ತೊಂದು ಮದನ...

ಯಾ ಇಮಾಮ ಹಸನೈನ ಎನ್ನುತಲಿ ಭೂಮಿ ಸ್ಥಲದಲಿ ಯುವಜಾತ ನೇಮಗೊಂಡು ವನವಾಸ ಹೊರಟನು ವಿರಾಟನಲ್ಲಿ ಇದ್ದನು ಜೀತಾ ||ಪ|| ಬಗಿಯನರಿಯದೆ ಶಕುನಿ ಸಾರಿದ ಆಗ ಪಾಂಡು ಪುಣ್ಯಕದಾತಾ ವಿಗಡ ಕಾಳಿಕಾ ಬಂದು ಕಾಡುತಿರೆ || ಆ. ಪ.|| ಜಗದೊಳಗೆ ದ್ರೌಪದಿ ಸೋತಾ ಮುಕ್ತ...

ಐಸುರ ಮೋರುಮ ಎರಡರ ಮಧ್ಯದಿ ನಾಶವಾಯಿತು ಲಂಕಾದ್ರಿ ಪುರಾ ಭಾಸುರ ಕಿರಣವ ನುಂಗಿದ ಹನುಮನು ಈಸಿ ಅಸುರ ಕುಲ ಸಂಹಾರ       ||ಪ|| ಒಂದು ದಿವಸ ಆನಂದಕಾಲದಲಿ ಸುಂದರಶ್ರೀ ಮುಖ್ಯಪ್ರಾಣಾ ಚಂದದಿ ರಾಮನ ಕೇಳಿ ನಡದನು ನೋಡಬೇಕೆನುತಲಿ ಮದೀನಾ ಬಂದು ಹೊಕ್ಕು ...

ಆ ಬಿಳಿಹೂಗಳ ಚಿಲುಮೆಯಲಿ ಶ್ವೇತ ಸುಂದರಿ, ನಿನ್ನ ಜೀವದ ಉಸಿರು ಹೊಗೆಯಾಡುತ್ತಿರುತ್ತದೆ. ನಿನ್ನ ಸ್ತನಗಳ ಉಬ್ಬರ ಗುಡ್ಡಗಾಡಿನ ಹಿಮದ ಗಾಳಿಯಲೆಗಳನ್ನು ಹಿಂಗಿಸಿಕೊಳ್ಳಲಾರದೇ? ಕೆಂಪುರಕ್ತ ಕಕ್ಕುವ ಗೂಳಿಗಳೆದುರು ನಿನ್ನ ನೆನಪು ಶಿಖರದಂತೆ ಬೆಳೆಯತೊಡಗ...

ಜೀವನದ ನೆನಹುಗಳ ಮನದಿ ಮೆಲುಕಾಡಿಸಲು ನೀನಿತ್ತ ವಚನಗಳ ನುಡಿಗೆಕುಲುಕಾಡಿಸಲು || ವಚನ ದೇಗುಲದಲ್ಲಿ ಕಂಗೊಳಿಸುತಿದೆ ಶಿಲ್ಪ ವಚನವೊಂದರಲಿ ಕಂಡುಬರುತಿದೆ ಕಲ್ಪ || ವಚನವೆಂದರೆ ಒಂದು ಗೊಂಚಲಿನ ಸವಿದ್ರಾಕ್ಷಿ ನುಡಿನುಡಿಗು ರಸದುಂಬಿ ಬೀಗಿನಿಂತಿದೆ ಸಾಕ...

ಜಾರತ ಕರ್ಮವು ತೀರಿದ ಬಳಿಕ ಆರಿಲ್ಲದೋಯಿತು ಐಸುರ ಕೊಳಕ          ||ಪ|| ಮಾರನೋಮಿಗೆ ಕೂಡಿ ಬಂದಿತು ಆರಿಗ್ಹೇಳಲಿ ತೀರಲರಿಯದು ಮೂರು ಪುರವನು ನಾಶಮಾಡಿತು ಘೋರತರದಲಾವಿಯ ಹಬ್ಬ              ||೧|| ಶುದ್ದಚಂದ್ರನ ಕಿರಣವು ಸೋಂಕಿ ಎದ್ದು ಭೂಮಿಗೆ ...

ಐಸುರ ಮೋರುಮ ದಸರೆಕ                  ||ಪ.|| ವಾಸುಮತಿಯು ಆಡಿದವು ಅಲಾವಿಯ ಮಹಾಶಕ್ತಿ ಪೂಜಿಸ್ಯಾಡುತ                  ||ಅ.ಪ|| ಜಾರತ ಕರ್ಮದ ವಾರಕ್ಕ ಸಾರುತಿಹುದು ಸರ್ವರಿಗೆ ವಿಲಾಸದಿ ಮೂರು ತಾರಕಿ ಕಿರಣದೊಳಗೆ                ||೧|| ಭ...

ಬಿಳಿಹಳದಿ ತೆಳುವಾದ ಮಕಮಲ್ಲಿನುಡಿಗೆ ಜುಳುಜುಳು ಕಳಕಳದೊಯ್ಯಾರ ನಡಿಗೆ ಸವಿದೆರೆ ತಿಳಿನಗೆ ತೇಲುನೋಟ ಮುಗಿಲನೆಡೆಗೆ ನೋವರಿಯದೇಕಾಂತದಾನಂದ ತೀರದಲಿ ಸಂತೋಷಸಾಗರಲೀನ ಪ್ರಶಾಂತ ಕಾನನ ಸಾವಿರದ ಸೆಲೆಯುಕ್ಕಿ ಹೊಳೆಯಾಗಿ ಹರಿದಿದೆ ಹರೆಯ ನೆಲ-ಮುಗಿಲು ಮರ ತ...

ಯಾಕೆ ಹರಿಯುತಿದೆ ಈ ನದಿ ಹೀಗೆ ದಡಗಳನ್ನೆ ದೂಡಿ ತನ್ನನು ಕಾಯುವ ಎಲ್ಲೆಗಳನ್ನೇ ಇಲ್ಲದಂತೆ ಮಾಡಿ ಹೀಗೆ ಹಾಯುವುದೇ ಮಲ್ಲಿಗೆ ಕಂಪು ಗಡಿಗಳನ್ನು ಮೀರಿ ತನ್ನಿರುವನ್ನೇ ಬಯಲುಗೊಳಿಸುವುದೆ ಬನದ ಆಚೆ ಸಾರಿ ಯಾರು ನುಡಿಸುವರು ಎಲ್ಲೋ ದೂರದಿ ಮತ್ತೆ ಮತ್ತೆ...

ಮೋಡಿಕಾರ ಮುತ್ತಯ್ಯನ ಚೀಲದಿ ಅಯ್ದೆಂದರೆ ಅಯ್ದೇ ಒಡವೆಗಳು ಹುಲ್ಲು ಕಡ್ಡಿಗಳ ಕಟ್ಟೊಂದಿಹುದು ಇನಿತರಿಂದಲೆ ಬೆರಗಿನಾಟವನು ಹೂಡಿಹನು ವಿಧ ವಿಧದ ರೀತಿಯಲಿ ಅಯ್ದೊಡವೆಗಳ ಬೆರಸಿ ಚಿನ್ನವನು ಮಾಡಿಹನು ಮಣ್ಣುಗಳ ಮಾಡಿಹನು ರತ್ನ ವಜ್ರಾದಿಗಳ ತಾಮ್ರ ತವರಿದ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...