Home / ಕವನ / ಕವಿತೆ

ಕವಿತೆ

ಎದೆಗುಂಡಿಗೆ ಬಣ್ಣ ಬಣ್ಣ ತುಂಬಿ ಮೌನ ಮಾತನಾಡಿಯೇ ಬಿಡುವ ನವಿಲುಗರಿಯೂ ಚಿತ್ತಾರಕೆ ಚಿಗುರಿ ಮುದುಕರೂ ಹರಯರಾಗುವ ಬೆಂಗಳೂರಿನ ಬ್ರಿಗೇಡ್ ರಸ್ತೆಗೆ ಮುಪ್ಪಿಲ್ಲ- ಹದಗೊಳ್ಳುವ ಮನಸುಗಳ ತು೦ಬೆಲ್ಲ ಕನಸಿನ ಸಾಮ್ರಾಜ್ಯದ ಲಗ್ಗೆ ದಶದಿಕ್ಕು ದಶಾವತಾರದ ಚಿತ...

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡಿದರೆ ಈ ಲೋಕ ಎಷ್ಟು ವಿಚಿತ್ರ-ಆದರೆ ನಿಜವಾಗುತ್ತದೆ! ಮೊದಲು ಏರುತಗ್ಗುಗಳು ಗೋಚರಿಸುತ್ತವೆ.  ಮತ್ತೆ ದಿಗಂತಗಳು ಬಳುಕುತ್ತವೆ, ಆಯತಗಳು ತ್ರಿಕೋಣಗಳಾಗುತ್ತವೆ, ವೃತ್ತಗಳಾಗುತ್ತವೆ.  ಯಾರೂ ಇದು ತನಕ ಕಲ್ಪಿ...

ಇವರು ನಮ್ಮವರೇ ನೋಡ್ರಿ ಬಣ್ಣಾ ಸವರಿಕೊಂತ, ಬೆಣ್ಯಾಗೆ ಕೂದ್ಲ ತಗದಂಗೆ ಮುತ್ತಿನಸರ ಪೋಣಿಸಿದಂತೆ ಪಂಪಿಸಿಗೊಂತ ನಾವೂ ನೀವೂ ಒಂದೇ ದೋಣ್ಯಾಗೆ ಪೈಣಾಮಾಡೋರು ನಾವೂ ನೀವೂ ಒಂದೇ ಗರಿಗಳ ಹಕ್ಕಿಗಳು ಅಂತ ಆಗಾಗ ತಬ್ಬಿಕೊಂಡು ತಬ್ಬಿಬ್ಬು ಮಾಡಿಕೊಂತ ಉಬ್ಸಿ ...

ಮರುಳು ಮಾಡುವ ಹೆಜ್ಜೆಗಳು ಎದೆಯಲ್ಲಿ ಹುದುಗಿಕೊಳ್ಳದೆ ತೇಲುತ್ತವೆ ಭ್ರಮೆಬೇಡ ಪ್ರಮಾಣಪತ್ರ ಬೇಕೆ ಗೊತ್ತು ಗುರಿ ಇಲ್ಲದ ಹೊತ್ತಿಗೆ ಬೆಂಕಿ ಹಚ್ಚುತ ನುಸುಳುವಾಕೆ ನಕ್ಕಳು. ಕೋಳಿಕೂಗಿನ ಶಬ್ದ ಗಂಟೆ ಎಲ್ಲ ನಿಶ್ಶಬ್ಧ ಒಳಗೊಳಗೇ ಕೊರೆವ ಚಳಿ ನಂಬಿದ್ದಕ್...

ಮೊದಲು ಒಬ್ಬನೇ ಇದ್ದ.  ತನ್ನ ಅಡುಗೆಯನ್ನೂ ನಿದ್ದೆಯನ್ನೂ ತಾನೇ ಮಾಡುತ್ತಿದ್ದ.  ತನ್ನ ಶರ್ಟುಗಳನ್ನೂ ವಿಚಾರಗಳನ್ನು ತಾನೇ ಒಗೆಯುತ್ತಿದ್ದ. ಒಂದು ದಿನ ಬೇಜಾರಲ್ಲಿ ಊಟಕ್ಕೆಂದು ಸಮೀಪದ ರೆಸ್ಟುರಾಗೆ ಹೋದ.  ಅಲ್ಲಿ ಆಕೆಯ ಭೇಟಿಯಾಯಿತು. ಅಂದಿನಿಂದ ಆ...

ಮಾತುಗಳ ಮೋಡಿಗಳ ಒಳಗಿಣುಕು ಮನೆಗಳ ಕಚೇರಿಗಳ ಖಾನೆ ಖಾನೆ ಏಕತಾನದೊಳಹೊಕ್ಕು ಫೈಲುಗಳ ಸ್ಮೈಲುಗಳ ನಡುವೆ ತಲೆಹುದುಗಿಸಿಕೊಂಡ ನಾಕು ಮಂದಿಯಂತೆ ವೇಷ ಭೂಷಗಳ ಸಿಕ್ಕಿಸಿಕೊಂಡ ದೇಶಾವರಿ ಯೋಗಕ್ಷೇಮದ ಗಿಳಿಯೋದುಗಳ ಸ್ವಲ್ಪ ಅತ್ತತ್ತ ಸರಿಸಿ, ಉರುಳಿಸುವ ಬುರ...

ಸುರಿವ ಧಾರಾಕಾರ ಮಳೆಯೊಳಗೆ ತೊಯ್ಸಿಕೊಂಡು ನೆನೆದು ನಡುಗಿದ್ದು- ಬಿಸಿನೀರಿನ ಶವರ್ ಕೆಳಗೆ ಕುಳಿತು ಬೆಚ್ಚಗಾಗಿ ಹೊರಬಿದ್ದರೂ ಕಾಫಿ ಸಿಪ್‌ಗೆ ದೌಡಾಯಿಸಿದ ಸೂಜಿಗಲ್ಲು ಕೊರೆವ ಚಳಿ ಮಳೆ. ವರುಷ ವರುಷ ವಸಂತೋನ್ಮಾದದ ಚಿಗುರು ಹೂವುಗಳ ದಾಂಗುಡಿ ಗುಡುಗು...

ಗದ್ದೆಯಲ್ಲಿರುವ ಒಂದು ಕಪ್ಪೆ ಎಲ್ಲಾ ಕಪ್ಪೆಗಳಂತೆ ಕುಪ್ಪಳಿಸುವುದು ಧೂಳಿನಲ್ಲಿ ತೆವಳುವುದು ಮೇಲೆ ಕಾಗೆಗಳಿಂದಲೂ ಕೆಳಗೆ ಹಾವುಗಳಿಂದಲೂ ತಪ್ಪಿಸಲು ಹುಲ್ಲುಗಿಡಗಳ ಮರೆಗೆ ಅಡಗುವುದು, ಕೆಸರನ್ನು ಹೊಗುವುದು ಮುಂಗಾರಿಗೆ ಸಂಗಾತಿಯನ್ನು ಹುಡುಕುವುದು ಮ...

ಯಾವ ಬೋಧೆಯಿಂದಿವನು ಬೋಧಿ ಸತ್ವನಾದಾನು? ಯಾವ ಓದಿನಿಂದಿವನು ವಾದಾತೀತನಾದಾನು? ಯಾವ ಚಿಲುಮೆಯಿಂದ ಇವನ ಕೊರಡು ಚಿಗುರೀತು? ಯಾವ ಒಲುಮೆಯಿಂದ ಇವನಿಗೆ ಬಲ ಬಂದೀತು? ಯಾವ ದಾರಿದೀಪದಿಂದ ಇವನ ಕಗ್ಗಾಡು ಬೆಳಗೀತು? ಯಾವ ಸಾಧನೆಯಿಂದ ಇವನ ಬಾಧಕ ಭಂಗವಾದೀತ...

ಸಮುದ್ರ ಕಿನಾರೆಯಲ್ಲಿ ಎಲ್ಲಿ ದೊಡ್ಡ ದೊಡ್ಡ ಅಲೆಗಳು ಗೋಧಿಬಣ್ಣದ ಮರಳುಗಳನ್ನು ತಂದುಹಾಕಿವೆಯೋ ಅಲ್ಲಿ ಅದೇ ಬಣ್ಣದ ಏಡಿಗಳು ಯಥೇಷ್ಟ ಓಡಾಡುತ್ತವೆ. ಎಷ್ಟು ಚಿಕ್ಕವಿವೆ ಇವು ಎಂದರೆ ಒಂದು ಅಂಗಿಜೇಬಿನಲ್ಲಿ ಸುಮಾರು ಒಂದು ನೂರನ್ನು ಸುಲಭವಾಗಿ ತುಂಬಬಹ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....