ಸುರಿವ ಧಾರಾಕಾರ ಮಳೆಯೊಳಗೆ
ತೊಯ್ಸಿಕೊಂಡು ನೆನೆದು ನಡುಗಿದ್ದು-
ಬಿಸಿನೀರಿನ ಶವರ್ ಕೆಳಗೆ ಕುಳಿತು
ಬೆಚ್ಚಗಾಗಿ ಹೊರಬಿದ್ದರೂ
ಕಾಫಿ ಸಿಪ್‌ಗೆ ದೌಡಾಯಿಸಿದ
ಸೂಜಿಗಲ್ಲು ಕೊರೆವ ಚಳಿ ಮಳೆ.
ವರುಷ ವರುಷ ವಸಂತೋನ್ಮಾದದ
ಚಿಗುರು ಹೂವುಗಳ ದಾಂಗುಡಿ
ಗುಡುಗು ಸದ್ದಡಗಿಸಿ ಕಾರ್ಮುಗಿಲು ಹಗುರಾಗಿ
ಹಳ್ಳ ಕೆರೆ ತು೦ಬಿಸುವ ತಹತಹಿಕೆ
ನಿರಮ್ಮಳ ಹೊನ್ನ ಹೊಳೆಯ ಸೂಜಿಗಲ್ಲು
ಕರೆದಾಗ ಬರದೆ ಪೀಡಿಸಿ
ನೂಕಿದಾಗ ಬರುವನೆನ್ನುವ
ಕೊಡ ತುಂಬಿ ಮೊಗೆ ಮೊಗೆದಷ್ಟು
ದಿನದಿನವೂ ಚಿಲುಮೆ ಮುಗುಳುನಗು
ಹೊನ್ನ ಹೊಳೆಯ ರಮ್ಯ ಬಳುಕಾಟ
ತುಳುಕಾಟ ಸೂಜಿಗಲ್ಲು ಕವಿತೆ.
*****