ಮೊದಲು ಒಬ್ಬನೇ ಇದ್ದ. ತನ್ನ ಅಡುಗೆಯನ್ನೂ
ನಿದ್ದೆಯನ್ನೂ ತಾನೇ ಮಾಡುತ್ತಿದ್ದ. ತನ್ನ ಶರ್ಟುಗಳನ್ನೂ
ವಿಚಾರಗಳನ್ನು ತಾನೇ ಒಗೆಯುತ್ತಿದ್ದ.
ಒಂದು ದಿನ ಬೇಜಾರಲ್ಲಿ ಊಟಕ್ಕೆಂದು
ಸಮೀಪದ ರೆಸ್ಟುರಾಗೆ ಹೋದ. ಅಲ್ಲಿ
ಆಕೆಯ ಭೇಟಿಯಾಯಿತು.
ಅಂದಿನಿಂದ ಆಕೆ ಇವನ ಅಡುಗೆಯನ್ನೂ
ಈತ ಅವಳ ನಿದ್ದೆಯನ್ನೂ ಮಾಡುವುದಕ್ಕೆ
ಮತ್ತು ಆಕೆ ಇವನ ಶರ್ಟುಗಳನ್ನೂ
ಈತ ಅವಳ ವಿಚಾರಗಳನ್ನೂ ಒಗೆಯುವುದಕ್ಕೆ
ಸುರುವಾಯಿತು.
*****