ನನ್ ಪುಟ್ನಂಜೀ ರೂಪ

ಬೇವಾರ್‍ಸಿ! ನನ್ ಪುಟ್ನಂಜೀನ ರೂಪಾನ್ ಆಡ್ತಿನಿ ಬಾಪ್ಪ! ನಂಗ್ ಆಗಾಗ್ಗೆ ಆಡೀಸ್ತೈತೆ ನನ್ ಪುಟ್ನಂಜೀ ರೂಪ! ೧ ಆಲ್ನಲ್ ಕಮಲದ್ ಊ ತೇಲ್ಬುಟ್ಟಿ ಮೇಲ್ ಒಂದ್ ತೆಳ್ನೆ ಲೇಪ ಚಿನ್ನದ್ ನೀರ್‍ನಲ್ ಕೊಟ್ಟಂಗೈತೆ ನನ್...

ರಸಿಕ

ನನ್ನೆದೆಯು-ನಿನ್ನೆದೆಯು; ನಡುವೆ ಕ್ಷಾರೋದಧಿಯು! ಕಾಡಿನಲಿ ಅತ್ತಂತೆ ಎಲ್ಲ ಹಾಡು! ತಂತಮ್ಮ ಕಂಬನಿಯಲೆಲ್ಲರೂ ಮುಳುಗಿದರೆ ಕೆಳೆಯ ಬೇಡುವ ಎದೆಗೆ ಯಾರು ಜೋಡು? ಅರಿವಿನಾಳದೊಳಿರುವ ಅಣಿಮುತ್ತುಗಳನೆತ್ತಿ ಪವಣಿಸುವ ಜಾಣು ಬಗೆಗೆಂದು ಬಹದೊ? ಸೂಜಿಗೂ ಹದನು, ಎಳೆನೂಲಿಗೂ ಮಿದುವಾದ...

ಯೋಗ ಬೇಕಲ್ಲವೇ? ಇಳೆಯ ಕಳೆಯ ಕಾಣಲು

ಬಿಗುವನೆಲ್ಲವ ಹಗುರ ಮಾಡುವ ನಗುವೆ ನೆಲದ ನೆಕ್ಕರೆಯಾಗಿ ಚಿಗುರಿಹುದಿಲ್ಲಿ ನೋಡಾ ತಂಬುಳಿ ಗಾಗಿ ಹೊಟ್ಟೆಯುರಿ ಕಳೆವನು ರಾಗಿ ನಗಲೆಂದೆಲ್ಲರೊಂದಾಗಿ - ವಿಜ್ಞಾನೇಶ್ವರಾ *****

ಸನ್ನಿದ್ಧಿ

ಬದುಕು ಎಲ್ಲರದು ಬೆಳಕಾಗಲಿ ಅವರ ಅಂತಃಕರಣ ಶುದ್ಧವಾಗಲಿ ಹೃದಯ ಮಲೀನತೆ ಹೋಮ ಗೈಯಲಿ ಸದಾ ನಾಲಿಗೆ ಮೇಲೆ ರಾಮ ನಾಮವಿರಲಿ ಕ್ಷಣದ ಬಾಳಿದು ನಶ್ವರ ಜೀವನ ಈ ಜೀವನವೊಂದೇ ಸುವರ್‍ಣಾವಕಾಶ ನರ ಜನುಮದಲಿ ನಾಮ...

ತನ್ನ ತಾನು ಗೆದ್ದವನೇ

ತನ್ನ ತಾನು ಗೆದ್ದವನೇ ನಮ್ಮ ಚೆಲುವ ಗೆದ್ದುದೆಲ್ಲವನೊದ್ದವನೇ ನಮ್ಮ ಚೆಲುವ ಬೆಟ್ಟದೆತ್ತರ ಬೆಳೆದವನೇ ನಮ್ಮ ಚೆಲುವ ದಿಗಂಬರವನುಟ್ಟವನೇ ನಮ್ಮ ಚೆಲುವ ಸೂರ್‍ಯನಿಗೆ ಪ್ರತಿಸೂರ್‍ಯನೇ ನಮ್ಮ ಚೆಲುವ ಚಂದ್ರನಿಗೆ ಪ್ರತಿಚಂದ್ರನೇ ನಮ್ಮ ಚೆಲುವ ಕಲ್ಲರಳಿ ಹೂವಾದನೆ...

ಇರುಳು-ಚಂದ್ರೋದಯ

ಬುವಿಯ ಚಾಪೆಯ ತೆರದಿ ಸುತ್ತಿ ಹೊತ್ತೊಯ್ವಂತೆ ಕತ್ತಲೆಹಿರಣ್ಯಾಕ್ಷ ಮುತ್ತಿಬಹ ನಕ್ಷತ್ರ- ಮೊತ್ತಮಂ ಧಿಕ್ಕರಿಸಿ ಬರುತಿಹನು ಗೆಲವಾಗಿ ದಿವಕಶಾಂತಿಯ ತಂದು. ಹೊಸರಾಜ್ಯವಾಯ್ತಿಂದು ಇದರ ಸತ್ಯವೆ ಬೇರೆ, ಶಾಸನವೆ ಬೇರೆ. ರವಿ ತೋರಿದಾ ಜಗದ ಮಾಯೆ ತೀರಿತು....

ಗುಡಿಯಾ

ಗುಡಿಯಾ ಆಟದ ಗೊಂಬೆಯಲ್ಲ ರಕ್ತ ಮಾಂಸ ತುಂಬಿದ ಜೀವಂತ ಗೊಂಬೆ ದುಃಖಕ್ಕೊಂದೇ ಹಕ್ಕು ಪಡೆದವಳು ಗುಡಿಯಾ ನೋವಿನ ಕಡಲು ಒಡಲಲಿಟ್ಟುಕೊಂಡು ನಾಪತ್ತೆಯಾದ ಪತಿ ಮರಳಿ ಬರುವ ಹಾದಿ ಕಾಯ್ದಳು ದೀರ್‍ಘ ಕಾಲದ ತನಕ ಕನಸು...

ಸುಮ್ಮನೇಕೆನ್ನನೆಲೆ ವಿಧಿಯೆ ಕಾಡಿಸುವೆ?

ಸುಮ್ಮನೇಕೆನ್ನನೆಲೆ ವಿಧಿಯೆ ಕಾಡಿಸುವೆ?- ಬೇಡಿದುದ ಕೊಡೆ, ಬೇಡದುದನಾಯ್ದು ಕೊಡುವೆ! ಆರದುದನಾಪೆನೆಂದೇಕೆ ತಡಬಡುವೆ? ಕೇಳುವೊಡನೀವೆನೆಂದೇಕ ಬೇಡಿಸುವೆ? ೪ ಆದೊಡಂ ಕೇಳೆನಗೆ ನಿನ್ನಿಂದು ಬೇಡ- ಅವಳನೆನ್ನಿಂದೊಯಿದ ಇಂದೆನಗೆ ಬೇಕೆ? ಇನ್ನವಳ ಕಾಣಿಸದ ನಾಳೆಯಕಟೇಕೆ? ಅವಳಿದ್ದ ನಿನ್ನೆ ಸಾಕೆನಗದಂ...