ಅದೃಷ್ಟ

ಕಣ್ಣ ಕಾಣ್ಕೆಯ ಮೀರಿ, ಕಣ್ಣ ಕಟ್ಟಿದ ರೂಹೆ! ಬಣ್ಣನೆಯ ಬಣ್ಣಕೂ ಸಿಗದೆ ನೀನು; ಹುಟ್ಟುಕಟ್ಟನು ಹರಿದು, ಹಾರುತಿರುವೀ ಊಹೆ, ಬರೆಯಲಿಕೆ ನಿನ್ನನ್ನೆ ಹವಣಿಸುವದೇನು? ಲಹರಿಗೂ ತರಲ, ನೀ ನೆರಳಿಗೂ ವಿರಲ, ಸುಳಿ- ಯೆಲರಿಗೂ ಚಂಚಲನು...

ಅಲಲಾ ಸೃಜನ ಶೀಲತೆಯೆಂದೊಡೇಂ?

ಶಾಲೆಯೊಳೋದಿ ತೆಗೆವುನ್ನತದಂಕಗಳೇ? ನಲಿದುಲಿವಂತೆ ರಸಿಕರನೆಳೆವ ಕಲೆಯೇ? ಒಲ್ಲೆನೆನುವವರನೊಪ್ಪಿಸುವಕ್ಷರ ಗ್ರಂಥಂಗಳೇ? ಮೆಲ್ಲನಪ್ಪುದಕೆ ಆವೇಗವನೀವ ಯಂತ್ರಾಯುಧಂಗಳೇ? ಶೀಲ ಸೌಖ್ಯವದು ಸೃಷ್ಟಿಯೊಡಗೂಡಿ ಉಂಬಕಲೆಯು - ವಿಜ್ಞಾನೇಶ್ವರಾ *****

ಚಂದ್ರ ಮೊಕಿ ಮಲ್ಲಿಗೆ

ಚಂದ್ರ ಮೊಕಿ ಮಲ್ಲಿಗೇ ಉದ್ರೇನಮ್ಮ ಅಂಗಳಕೇ ಚದ್ರ್ಯವರು ಚಂಡಾಡೀ ಬರುವಗೇ || ಮಲ್ಲುಗೆ ಉದ್ರೆ ನನ ಸಾಲೀ ಸೆರಗೀಗೆ ***** ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ...

ರಾಧೆ ಗೋವಿಂದ

ಯಶೋಧೆ ಕಂದ ರಾಧೆ ಗೋವಿಂದ ತೋರು ನಿನ್ನ ದಿವ್ಯರೂಪ ನನ್ನ ಬಾಳಿನಲಿ ನೀನೊಮ್ಮೆ ಬಂದು ಕಳೆಯೋ ಎನ್ನ ಕರ್‍ಮಗಳ ಪಾಪ ನಲುಗಿರುವೆ ನಾ ನಿನ್ನ ಸುಂದರ ಮಾಯೆಗೆ ನನ್ನ ನಿಜ ಸ್ವರೂಪ ಕಳೆದಿರುವೆ ಇಂದಿನ...

ಉಮರನ ಒಸಗೆ – ೩೧

ಹಾ! ತುಂಬು ಬಟ್ಟಲನು. ಕಾಲವದು ತಾಂ ನುಣ್ಚಿ ಕೈಗೆ ದೊರೆಯದೆ ಪರಿವ ಪರಿಯ ವಿವರಿಸಲೇಂ? ನಿನ್ನೆ ಸತ್ತಿಹುದಿನ್ನು, ನಾಳೆ ಹುಟ್ಟದೆಯಿಹುದು; ಇಂದು ಸೊಗವಿರಲವನ್ನು ನೆನೆದಳುವುದೇಕೆ? *****

ಒಲವೆ ನನ್ನ ಮೊಲವೆ

ಒಲವೆ ನನ್ನ ಮೊಲವೆ ಮುದ್ದೆ ಬಾಲದ ಮುದ್ದು ಮೈಯ ಪಿಳಿಪಿಳಿ ಕಣ್ಣ ಬಿಳಿಬಿಳಿ ಬಣ್ಣ ಚುರುಕು ಕಿವಿಗಳ ಚೂಪು ಹಲ್ಲ ಮೊಲವೆ ನನ್ನ ಒಲವೆ ಸದ್ದಿಲ್ಲದ ತುಪ್ಪುಳ ಪಾದ ಯಾರೂ ಇಲ್ಲದಾಗ ಲಾಗ ಎಲ್ಲಿಂದೆಲ್ಲಿಗೆ...

ಲಘುವಾಗೆಲೆ ಮನ

ಲಘುವಾಗೆಲೆ ಮನ ಗೆಲವಾಗೆಲೆ ಮನ ಹಾರು ನನ್ನ ಬಿಟ್ಟು ಹಾರಿ ಹರಿಯ ಮುಟ್ಟು ||ಪ|| ನನಗಂಟಲು ನೀನಾಗುವೆ ಕಶ್ಮಲ ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ ಹರಿಯೊ ನನ್ನ ಬಿಟ್ಟು ಮುಂಬರಿದು ಹರಿಯ ಮುಟ್ಟು....

ಅನ್ವೇಷಣೆ

ಕವಿತೆ ಬರೆಯುತ್ತೇನೆ ಸಂಘರ್ಷದ ಹಾದಿಯಲಿ ನೋವಿನ ಎಳೆ ಎಳೆಗೆ ಚೀತ್ಕಾರದ ಧ್ವನಿಗಳಿಗೆ ಮಾದ್ಯಮ ಹುಡುಕುತ್ತೇನೆ ನಾನು ಇದ್ದುದ್ದಕ್ಕೆ ಸಾಕ್ಷಿ-ಪುರಾವೆಗಳ ಒಂದೊಂದೇ ದಾಖಲಿಸುತ್ತೇನೆ ಗೋರಿಯಿಂದ ಎದ್ದೆದ್ದು ಬರುವ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತೇನೆ ಭೂಮಿಯಲಿ ಬೇರುಗಳ ಬಿಳಲುಗಳ...

ಜೀವನದೀ ಮಧುಮಾಸಂ

ಜೀವನದೀ ಮಧುಮಾಸಂ ಬತ್ತುತ ಬಂತು, ಮನಸಿನ ಮಧುರವಿಕಾಸಂ ನನೆಯೊಳೆ ಸಂತು; ಮುಸುರಿದ ಮಕರಂದಪಾನ ಮೊದವದೆದೆಯ ಭ್ರಮರಗಾನ ಮೆಚ್ಚರಲೆಂತು? ೭ ಮನೆಗೆಯ್ದಕ್ಕರೆಯ ಪಿಕಂ ಪಾರಿದುದೆಲ್ಲಿ? ಗೂಡುಗೊಂಡ ಹಿಂಡು ಶುಕಂ ಕಾಣಿಸವಿಲ್ಲಿ! ಅಳಲ ಕಣಜವಿನ್ನು ಸಾಗೆ, ಹಗಲುದ್ದಕೆ...

ನವೆಂಬರ್ ಕನ್ನಡ

ಕನ್ನಡಕ್ಕೇನು ಕಮ್ಮಿ? ಕರ್ನಾಟಕದಲ್ಲಿ ನವೆಂಬರ್ ಒಂದರಲ್ಲಿ ಆದರೂ ‘ಕನ್ನಡ ಉಳಿಸಿ’ ಮಾತು ಇಡೀ ವರ್ಷದಲ್ಲಿ ಅಲ್ಲೂ ಕನ್ನಡ ಇಲ್ಲೂ ಕನ್ನಡ ಎಲ್ಲೆಲ್ಲು ಕನ್ನಡವೋ ಕನ್ನಡ ತಿಂಗಳಾಯಿತೆಂದರೇ... ನಿರಭಿಮಾನ ಬಗ್ಗಡವೋ ಬಗ್ಗಡ! ಅಲ್ಲಿ ನೋಡು ಕನ್ನಡ...