ತಂಪಾದವೊ ಎಲ್ಲ ತಂಪಾದವೋ ಮುದುರಿದ್ದ ಮೈ ಮನಸು ಕೆದರಿದ್ದ ಕೆಟ್ಟ ಕನಸು ಒಂದೂನೂ ಬಿಡದಾಂಗ ತಂಪಾದವೋ ಲಂಕೇಶರನ್ನು ಅನುಕರಿಸಿದ್ದು ಸಾಕು, ಮುಂದೆ ಅರಿವಿರಲಿಲ್ಲ ಕಾವು ಇನ್ನೂ ಇದೆ ಎಂದು ಬಯಕೆ ಅರಿಯೇ ಇಲ್ಲ ಎಂದು ತಿಳಿದೇ ಇರಲಿಲ್ಲ ನೀನಿಷ್ಟು ಚೆನ್ನ...

ಮಿರಿ ಮಿರಿ ಮಿಂಚುತಿದೆ ನಾಕು ಹೆಡೆಯ ನಾಗರದಂತಿದೆ ಕೆಂಪು ಹಸಿರು ಹಳದಿ ಹೆಡೆ ಮಣಿಗಳು ಮಿನುಗುತ್ತಿವೆ ಬಾಗಿದೆ ಬಳುಕಿದೆ ವಿಷದ ಹೊಳೆ ಹರಿದಂತಿದೆ ಎಲ್ಲವ ನುಂಗಲು ಕಾದಂತಿದೆ ಗರಿ ಗರಿ ನೋಟಿನದೇ ಮಾಟ ಭಾರೀ ಮಷೀನುಗಳದೇ ಆಟ ಮಿತಿಯಿಲ್ಲದೆ ಮತಿಯಿಲ್ಲದ...

ಯಾತ್ರಿಕರು ಓಯಸಿಸ್ಸೆಂದು ಭ್ರಮಿಸುವರು ಮರು ಭೂಮಿಯಲಿ ಬಾಯಾರಿಕೆಯ ತೃಷೆ ನೀಗಿಸಲು ಹೋಗುವರು ನೀರೆಂದು ಭಾವಿಸಿ ಸಮೀಪಿಸಿದಂತೆ ಕಂಡ ನೀರು ಮಾಯ ಈ ಸೋಜಿಗಕೆ ಬೀಳುವರು ಬೇಸ್ತು ಮಾಯವಾದ ನೀರು ಕಾಣುವುದು ಮುಂದೆಲ್ಲೋ ದೂರದಲಿ ಪುನಃ ಸಾಗಿದರೆ ಗಾಳಿ ಪದರ...

ಯಾರಿಗುಂಟು ಯಾರಿಗಿಲ್ಲ ಮನದ ತುಂಬ ಬೇವು ಬೆಲ್ಲ? ಚಿತ್ತ ಶಾಂತಿ ಮನದ ಭ್ರಾಂತಿ ಕುರುಡು ಪ್ರೀತಿ ಮರೆತ ನೀತಿ. ಅಲ್ಲಿ ಇಲ್ಲಿ ಎದ್ದ ಗುಲ್ಲು ಮನಕೆ ನೋವು ತಂದ ಸೊಲ್ಲು. ಹೇಳಲಾರೆ ಬರೆಯಲಾರೆ ಮರೆಯಲಾರೆ ಹೃದಯಕ್ಕಿಟ್ಟ ಬರೆ. ಎಲ್ಲರಿಗುಂಟು ನೋವು ನಲಿವ...

ನನ್ನೊಲವು ರಾಜಕಾರಣಕೆ ಹುಟ್ಟಿದ್ದಿತೊ ಕಾಲಕಾಲದ ಪ್ರೀತಿದ್ವೇಷಕ್ಕೆ ಪಕ್ಕಾಗಿ, ಕಸದಲ್ಲಿ ಕಸವೊ, ಹೂರಾಶಿಯಲಿ ಬಿಡಿಹೂವೊ ಆಗಿ ಅಳುತಿತ್ತು ತಬ್ಬಲಿ ಭ್ರಷ್ಟಹುಟ್ಟಾಗಿ. ಅದರ ಅಡಿಗಿಲ್ಲ ಆಕಸ್ಮಿಕದ ತಳಪಾಯ, ಆಡಂಬರದ ಮಂದಹಾಸಕದು ಬಲಿಯಲ್ಲ; ಕಾಲಕಾಲಕ್ಕೆ...

ಮಳೆಯಜೋಳಿಗೆ ಹರಿದುಬಿತ್ತಿಲ್ಲಿ ಹಿಡಿತಕೆ ಸಿಗದೆ ಸವೆದ ಬಟ್ಟೆಯೊಳಗಿಂದ ದೇವನ ಮಳೆಯ ಜೋಳಿಗೆ ಹರಿದುಬಿತ್ತಿಲ್ಲಿ. ಕಪ್ಪು ಕಡುರಾತ್ರಿಗೆ ಊಹಿಸದ ಹಳ್ಳಹೊಳೆಗಳ ನೆರೆತೊರೆ ಒಡ್ಡುಗಳು ಒಡೆದೋಡುವ ಹುಚ್ಚು ರಭಸ ಹಾದಿಬೀದಿಗಳಿಗೂ ನಡುಕ ಕ್ಷಣಕ್ಷಣಕೂ ದ್ವೀ...

ಹೆಣ್ಣ ಹೆತ್ತವರು ನಾವು ಲೇಖಕರು. ನಮ್ಮ ಮಕ್ಕಳು ಕಾವ್ಯ, ಕವಿತಾ ನವ್ಯಾ, ರೂಪಕಾ ಏಕಾಂಕಿ, ಕಾದಂಬರಿ. ಬೇಕಾಗಿವೆ ಇವರಿಗೆಲ್ಲ ಕೈ ಹಿಡಿದು ಸಾಕಬಲ್ಲ ಬಾಳ ಬೆಳಗಬಲ್ಲ ಸಂಪಾದಕ, ಪ್ರಕಾಶಕ ಗಂಡುಗಳು. *****...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...