೧ ಮೌನ ಮೌನಾ, ಮೌನಾ, ಮೌನಾ ಮೌನ-ವಿಮಾನಾರೂಢಾ ಅಮೃತಾತ್ಮಾ, ತರ! ಉತ್ತರ! ಭೋ ಉಧ್ವ್ರೋಧ್ವ್ರೋ, ಭೋ ಈ ಮಾಯಾಮಂಡಲ ಮುರಿಯೋ, ದಾಟೈ ಆ ತಿರ್ರನ ಚಕ್ರ ಏರೈ, ಏಕಾ, ಏಕೈಕಾ ಮರಣೋತ್ತೀರ್ಣಾ ಫೂಃ! ಪಿಸುಪಿಸು ಮಾತೋ ಮಾತು, ಇರುಳಿರುಳಿನ ಭುಂಭೋದ್ಗಾರಾ ಕರೆ,...

ಬೆಳಕನೆರಚು, ಚಳಕನೆರಳು, ಯುಗ-ಯುಗಾಂತ ತೊಳಗಲಿ! ಇಳೆಯ ಕವಿದ ಕಳ್ತಲೆಯನು ಕಳೆದೊಗೆ ದೀಪಾವಳಿ! ೧ ಬರಿಯ ಒಂದೆ ಇರುಳು ಬಂದೆ ಮುಗಿಯಿತೇನು ಕಾರ್‍ಯ? ವರುಷದಿ ನೂರಾರು ತಮಸಿ- ನಿರುಳಿವೆ ಅನಿವಾರ್ಯ! ಅಂದಂದಿನ ಕತ್ತಲಿಂದೆ ಮಂದಿಯ ಮನವಿಡಿದು ಮುಂದೆ ಕರೆ...

ಬಾ ಎನ್ನೆದೆಯ ಗುಡಿಯಲಿ ಬೆಳಗು ಗುರುವೆ ನೀ ಜ್ಯೋತಿಯಾಗಿ | ಆರದ ಜ್ಞಾನದ ದಿವ್ಯತೇಜವಾಗಿ|| ಕರುಣಿಸು ಸುಜ್ಞಾನವ ಹೊಡೆದೋಡಿಸು ಅಜ್ಞಾನವ| ಆನಂದವ ಕರುಣಿಸು ಅಂಧಕಾರದ ಕಣ್ಣೀರ ವರೆಸು| ಹರೆಸು ಮಗುವಂತೆನ್ನ ಕೈಹಿಡಿದು ನಡೆಸು|| ನನ್ನೆಲ್ಲಾ ತಮವ ನೀನಳ...

ಎತ್ತ ನೋಡುವಿರಿ ಇತ್ತ ಬನ್ನಿರಿ ಸೋಜಿಗ ತುಂಬಿದ ನೆಲದೆಡೆಗೆ ಬೆಳದಿಂಗಳ ಬೆವರು ಬಿಸಿಲಿನ ತಂಪು ಸಾವೇ ಹುಟ್ಟು ಹುಟ್ಟೇ ಸಾವು ಸೂಜಿ-ಗಲ್ಲಿನ ತಲೆಯೊಳಗೆ. ಗಿರಗಿರ ತಿರುಗುವ ಚಕ್ರದ ಮೇಲೆ ಮೂಡದು ಮಡಕೆ ಒಣಗಿದ ಮಾತನು ಹೆಣೆದೂ ಹೆಣೆದು ತಾಳದು ತಡಿಕೆ. ...

ನನ್ನ ಪುಟ್ಟ ಕೆಂಪು ಹೃದಯದೊಳಗೆ ಅದೆಷ್ಟು ನೋವಿನ ಲಂಗರುಗಳು ಈ ಪುಟ್ಟ ಕಪ್ಪು ಕಣ್ಣುಗಳೊಳಗೆ ಅದೆಷ್ಟು ನೀರ ಸಾಗರಗಳು. ನನ್ನ ಪುಟ್ಟ ಮನೆಯ ಅಂಗಳದೊಳಗೆ ಅದೆಷ್ಟೋ ಸೂರ್ಯನ ಬೆಳಕಿನ ಕಿರಣಗಳು, ನನ್ನ ಪುಟ್ಟ ಗುಡಿಸಲ ಚಿಮಣಿ ದೀಪದೊಳಗೆ ಅದೆಷ್ಟು ಬೆಳಕಿ...

ಕಡಲುಕ್ಕದಿರು ಬೆಂಕಿಯೆ ನೀ ಸೊಕ್ಕದಿರು ಗಿರಿಯೆ ನೀ ಜರಿಯದಿರು ನಮಗಿರುವುದಿದು ಒಂದೇ ಭೂಮಿ ಭುವನದ ಮಕುಟದಂಥ ಸುಂದರ ಭೂಮಿ ಜ್ವಾಲಾಮುಖಿಯೆ ನೀ ಉಗುಳದಿರು ಉಲ್ಕೆಯೆ ನೀ ಬೀಳದಿರು ಗಾಳಿಯೆ ನೀ ಮುಗಿಯದಿರು ಮಳೆಯೇ ನೀ ಮಾಯದಿರು ನಮಗಿರುವುದಿದು ಒಂದೇ ಭ...

ಮಾಗಿಽಯ ಹೊಡಿಯಾಗ ನನ ಕೈಲೆ ಮಾಯದಿಂದ ಮಾಡಿಸಿಕೊಂಡ್ಯಾ ನಾ ಹೋಗಿ ಒಂದ ತೆನಿಧಂಟ ತಿಂದರ ಕಲ್ಲಕಲ್ಲಿಲೆ ಹೊಡದ್ಯೊ| ನಮ ಜೀವ ಹೋದಾವೊ ಕೈಲಾಸಕ ||೧|| ನಾ ಒಂದೆ ಬಿತ್ತಿಽದಽ ನಾ ಒಂದ ಬೆಳದೀದ ನಾ ಹೋಗಿ ಒಂದ ಹೊಡೆಧಂಟ ತಿಂದರ ಬಡಬಡಗಿಲೆ ಹೊಡೆದ್ಯೊ | ನಮ ...

ಹೋದ ವರ್‍ಷ ಬಂದ ಹಬ್ಬ ಮರಳಿ ಬಂದಿದೆ ಅಂದು ನುಡಿದ ಶುಭ ಕಾಮನೆ ಜೆರಾಕ್ಸ್ ಕಂಡಿದೆ ನಾ ನುಡಿದೆ ಶುಭಾಶಯ ನೀ ನುಡಿದೆ ಶುಭಾಶಯ ಎಲ್ಲೆಲ್ಲೂ ಶುಭಾಶಯ ಇಲ್ಲ ಬರ ಇದಕೆ ಇಷ್ಟೆಲ್ಲಾ ಶುಭಾಶಯ ಪ್ರತಿ ವರ್ಷ ಪ್ರತಿ ಹಬ್ಬಕೂ ಆದರೂ ಹೆಚ್ಚುತ್ತಿದೆ ಯಾಕೆ ಇದಕೆ...

ಶಾಂತ ರಸವನ್ನು ರಸವೇ ಅಲ್ಲ ಅಂದರಂತೆ ಕೆಲ ಮೀಮಾಂಸಕರು ರಸಗಳಲ್ಲಿ ಶಾಂತರಸವೇ ಶ್ರೇಷ್ಠ ಅಂದರು ಅಭಿನವಗುಪ್ತ ಆನಂದ ವರ್ಧನರು ಶಾಂತ ರಸ ಅನ್ನಿ ಶಾಂತಿಯ ಅರಸ ಅನ್ನಿ ಏನೆಂದರೂ ಅದೇ ಮಂದಸ್ಮಿತ ಹಸನ್ಮುಖ ಹುಡುಕು ನೋಟ ಚುರುಕು ನಡಿಗೆ ಹೈದರಾಬಾದಿನ ಬಾಡಿ...

ಎಲ್ಲಿದೆಯೋ ಬೇರು? ಚಿಗುರು ನೂರಾರು… ಯಾರು ಬಿತ್ತಿದರೋ… ಯಾರು ಬೆಳೆದರೋ… ಫಲವನ್ನಂತು ಉಣ್ಣುತಿರುವೆವು ಎಲ್ಲರೂ…. ಬೀಸಿ ಬಂದೊಮ್ಮೆ ಬಿರುಗಾಳಿ ಬುಡ ಕಡಿದು ಹೋದರೆ ಹೋಗಲಿ… ಕನಸಹುದೇ? ಹೂಂ…. ಏಳಿ ಎದ್ದೇ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...