೧ ಮೌನ
ಮೌನಾ, ಮೌನಾ, ಮೌನಾ ಮೌನ-ವಿಮಾನಾರೂಢಾ
ಅಮೃತಾತ್ಮಾ, ತರ! ಉತ್ತರ! ಭೋ ಉಧ್ವ್ರೋಧ್ವ್ರೋ, ಭೋ
ಈ ಮಾಯಾಮಂಡಲ ಮುರಿಯೋ, ದಾಟೈ ಆ ತಿರ್ರನ ಚಕ್ರ
ಏರೈ, ಏಕಾ, ಏಕೈಕಾ ಮರಣೋತ್ತೀರ್ಣಾ
ಫೂಃ! ಪಿಸುಪಿಸು ಮಾತೋ ಮಾತು, ಇರುಳಿರುಳಿನ ಭುಂಭೋದ್ಗಾರಾ
ಕರೆ, ಕರೆನರೆ ಕಿರಿಕಿರಿ ಲೋಕಾ
ಬಿಡು ಶೋಕಾ, ಉಳಿದೊದ್ದಾಟಾ
ಚಿರಮೌನದಿ ಹೊಗು ಹೊಗು ಏಗೂ ಮೇಗೂ.
ವಿಶಾಲಾ, ಅಚಲಾ, ಅಕ್ಷರಾ, ಅರೂಪಾ, ಅದ್ಭುತಭೂತಾ
ಸ್ವರ್ಗೋಪರಿ ಸ್ವರ್ಗಾ, ಅಗಲಾ ಬ್ರಹ್ಮಾಂಡಕು ಮಿಗಿಲಾ,
ಶುದ್ಧಾ, ವಿಶುದ್ಧಾ, ಸತ್ತ್ವಾ ಮಹಿಮಾಮಗ್ನ
ಸ್ವಾನ್ವೀಕ್ಷಕ ಸೋಜ್ವಲ ಸ್ತಿಮಿತಾ
ಅಸೀಮಾ, ನಿರೋದ್ಗಾರಾ, ಸಾಕ್ಷಾತ್ ಸಂವಾದನಶೀಲಾ
ಮಾಡೈ ವಿಚಾರಾತೀತಜ್ಞಾನಾ, ಪಡೆ ಅಕ್ಷೋಭ್ಯಗಭೀರಾಮೋದಾ
ಅವಿಕಾರಿತ ಜ್ಯೋತಿಯೊಳಿರು ವಿಶ್ರಾಂತಾ, ಮೂಕಾ,
ನಿಶ್ಯಬ್ದಿತಸಾಕ್ಷಾತ್ಕಾರಾ
ನಿನ್ನನ್ನೇ ಮೀರೈ ಆತ್ಮಾ, ಪ್ರಕೃತ್ಯೋತ್ತರಪುರುಷಾ
ಓ ಸಾಕ್ಷೀ, ಕಳೆದುಳಿ ಉಳಿ ಕಂಡದ್ದೆಲ್ಲಾ
ಕಾಣೈ, ಕೇವಲಾ, ಬ್ರಹ್ಮಾ, ಶಾಶ್ವತಾ
ಸನಾತನ ಮಾತ್ರಾ, ಶಾಂತಾ, ಮೌನೋನ್ಮೌನ
ಓ ಲೋಕೋತ್ತಮ ನಾಮಾತೀತಾ, ಏಕಾ
ಭೌಮಾಮೃತ ಆತ್ಮಾ.
೨ ಮೌನಾತೀತ
ಉನ್ಮಜ್ಜೋನ್ಮಜ್ಜ, ಹೇ ಮೌನನಿಮಗ್ನಾ,
ಅವರ್ಣ್ಯದ್ರವ್ಯಸ್ವಭಾವಾ,
ಪ್ರಭಾವಾ, ವಿಭಾವಾ, ಸಹಿತಾ
ರೋಹಿಸು ಭೋ ಅಮೃತಾತ್ಮಾ
ಕಾಲಕೆ ಕೊಡು ಚಿರತರ ಅರ್ಥಾ
ಕಾಲಾತೀತಾಲಿಂಗಿತಾ ಭವ ಮಾಧುರ್ಯೊದರ ಪ್ರವಿಷ್ಟಾ
ಶಾಶ್ವತಿಯಲಿ ಬಾಳೈ ಜಾಗೃತಾ, ಅನಂತಪ್ರೇಮೋದ್ಭೂತಾ
ಪೂರ್ಣಾಪೂರ್ಣಾಪೂರ್ಣಾ ಸ್ವಪ್ರಾಪ್ತಾ ಆಪ್ತಾ ಪೂರ್ತಾ
ಪ್ರಿಯಹೃದಯೇ ಸಂಪ್ಲುತಸ್ವರಸಾ
ಇದು ಯಾವುದೊ ಬ್ರಹ್ಮಾತೀತಾ, ಬ್ರಹ್ಮಾಂತರ್ಜಾತಾ, ತ್ರಾತಾ
ಸ್ವರೂಪಾ, ರೂಪಾರೂಪಾರೂಪಾ, ಬಹುರೂಪಾ, ಭೂಪಾ, ಜೇತಾ
ಲೀಲಾವಿಗ್ರಹಾ, ಆಹಾ ಚಿರಸಂತತಿ ಸಂತತಜನಿತಾ
ಪ್ರಕೃತಾ ವಿಕೃತಾ ಕೃತಕಾ ಕೃತಕೃತ್ಯಾ ಧನ್ಯಾಮೂರ್ತಾ
ಸುಂದರಾ, ಸುಬಂಧಾ, ಸುಗಮಾ, ನಿಗಮಾತೀತಾ
ಹೃದಯೇ ಹೃದಯಾಂತಹೃದಯೇ ಲಗ್ನಃ ಪರಮಾತ್ಮೇಮಗ್ನಃ
ಸಾಕ್ಷಿನ್, ದೃಷ್ಟಂ ತ್ಯಜ, ದೃಷ್ಟಂ ತ್ಯಜ
ಭಜ ಸ್ವಾಂತಂ ಏಕಾಂತಂ ಏಕಂ ಬ್ರಹ್ಮಚಿರಂತನಂ
ಆಃ ಲೋಕಾತೀತಾ, ಅನಾಮಾ ಏಕೈಕಾ
ಓ ಮಹದ್ಭೂತಾ, ಅಮೃತಾ!
ಭವಮೌನೀ, ಶಾಂತೋನಂತನಂತಃ
*****