ಸುಭದ್ರೆ – ೮

ಸುಭದ್ರೆ – ೮

ವಿಶ್ವನಾಥನಿಗೂ ರಮಾಬಾಯಿಗೂ ಬಹು ಯೋಚನಿಗಿಟ್ಟಿತು. ಸುಭದ್ರೆ ಗಾದರೂ ವಯಸ್ಸು ಮೀರುತ್ತಾಬಂದಿತು. ಇದುವರೆಗೆ ವಿವಾಹವು ಸಾವಕಾಶವಾದುದೇ ಊರಿನವರಿಗೆಲ್ಲರೂ ನಾನಾ ವಿಧವಾಗಿ ಆಡಿಕೊಳ್ಳಲು ಮಾರ್ಗವನ್ನುಂಟುಮಾಡಿದ್ದಿತು. ಇನ್ನೂ ಸಾವಕಾಶಮಾಡಿದ ಪಕ ದಲ್ಲಿ ಪ್ರಮಾದಕ್ಕೇ ಬರಬಹುದು.

ಈಗಿನ ಸಮಾಜದಸ್ಥಿತಿಯಲ್ಲಿ ಹೆಣ್ಣುಮಕ್ಕಳನ್ನು ಪಡಿದವರ ಕಷ್ಟ ವನ್ನು ಬಣ್ಣಿಸುವುದುಅಸಾಧ್ಯ. ಸರಿಯಾದ ವರನು ಬೇಕಾದರೆ ಮಿತಿ ಮೀರಿ ವರದಕ್ಷಿಣೆಯನ್ನು ಕೊಡಬೇಕು. ಹೊಟ್ಟೆಯನ್ನು ಹೊರೆಯು ವುದೇ ಕಷ್ಟ್ರವಾಗಿರುವವರು ವರದಕ್ಷಿಣೆಯನ್ನೆಲ್ಲಿಂದ ತರಬೇಕು? ಅದು ದರಿಂದಲೇ ವಿಶ್ವನಾಥನ ಪ್ರಯತ್ನಗಳೆಲ್ಲವೂ ನಿಷ್ಫಲವಾದವು. ಕೊನೆಗೆ ಅವನಿಗೆ, ಜುಗುಪ್ಸೆಹುಟ್ಬಿ, ವರನನ್ನು ಕೊಂಡುಕೊಳ್ಳುವುದಕ್ಕೆ ಬದಲಾಗಿ ಮಗಳನ್ನು ಮಾರಲು ಸಿದ್ದ ಮಾಡಿಕೊಂಡಿದ್ದನು; ಅದೂ ನೆರವೇರ ಲಿಲ್ಲ. ಈಗ ಬೇರೆ ಯಾವಮಾರ್ಗವೂ ತೋರದೆ ತನ ತಂಗಿಯ ಮಗ ನಾದ ರಘುರಾಮನೆಂಬವನಿ ಗಾದರೂ ಕೊಟ್ಟು ಲಗ್ನ ಬಳೆಯಿಸಿಬೇ ಕೆಂದು ನಿಶ್ಚಯಿಸಿಕೊಂಡನು. ರಘುರಾಮನು ಪುನಹೆಯಲ್ಲಿ ಪ್ರವೇಶ ಪರೀಕ್ಷೆಯ (ಮೆಟ್ರಿಕ್ಯುಲೇಷನ್‌) ತರಗತಿಯಲ್ಲಿ ಓದುತ್ತಿದ್ದನು. ಅವ ನಿಗೆ ತಂದೆತಾಯಿ. ಯಾರೂ ಇಲ್ಲ, ಆಸ್ತಿ ಮೊದಲೇ ಇಲ್ಲ. ಕೆಲವರು ಉದಾರರಾದ ದೊಡ್ಡ ಮನುಷ್ಯರ ಮನೆಗಳಲ್ಲು ವಾಸಮಾಡಿಕೊಂಡು ವಿದ್ಯಾಕಾಲಕ್ಷೇಪ ಮಾಡುತ್ತಿದ್ದನು. ಅವನಿಗಿನ್ನೂ ೧೬ ವರುಷ ವಯಸ್ಸು. ಶುದ್ಧ ಕುರೂಪಿ. ಸುಭದ್ರೆಗೂ ಅವನಿಗೂ ವರಸಾಮ್ಯ ಸರಿಯಾಗಿರಲಿಲ್ಲ. ಈ ಕಾರಣಗಳಿಂದಲೇ ಮೊದಲಿನಿಂದಲೂ ಅವನ ವಿಷಯವನ್ನ ಯೋಚಿಸಿರಲಿಲ್ಲ. ಈಗ ಯತ್ನವಿಲ್ಲದೇ ಹೋಯಿತು.

ವಿಶ್ವನಾಥನಿಗೆ ತಂಗಿಯಮಗನು ಎಂದಿಗೂ ತನ್ನ ಮಾತನ್ನು ತೆಗೆದುಹಾಕುವುದಿಲ್ಲವೆಂಬ ಭರವಸೆಯಿದ್ದಿತು. ಮನೆಯಲ್ಲಿ ಅಣಿಮಾ ಡಿದ ಸಾಮಗ್ರಿಯೆಲ್ಲವೂ ಹಾಗೆಯೆ ಇದ್ದುದರಿಂದ ಒಂದು ವಾರ ದಲ್ಲೆ ಮದುವೆಯನ್ನು ಅಗಮಾಡಿಸುವುವಾಗಿ ನಿಶ್ಚಯಿಸಿಕೊಂಡು, ರಘುರಾಮನಿಗೆ. ಕೂಡಲೆ ಹೊರಟು ಬರುವಂತೆ ಕಾಗದವನ್ನು ಬರೆ ದನು. ಮೂರು ದಿನದಲ್ಲಿ ಪ್ರತ್ಯುತ್ತರವು ಬಂದಿತು.. ಬಿ. ಎ. ಪರೀಕ್ಷೆ ಯಾದ ಹೊರತು ತನಗೆ ಮದುವೆಮಾಡಿಕೊಳ್ಳಲು ಇಷ್ಟವಿಲ್ಲವೆಂತಲೂ,, ಹಾಗೆ ಬಲವಂತಮಾಡುವ ಪಕ್ಷಕ್ಕೆ ತನ್ನ ಮುಂದಿನ ವಿದ್ಯಾಭ್ಯಾಸಕ್ಕೆ ತಕ್ಕ ಸಹಾಯವನ್ನು ಮಾಡುವುದಾಗಿ ಕಾಗದ ಬರದುಕೊಟ್ಟು, ೧೦೦೦ ರೂಪಾಯಿಗಳು ವರದಕ್ಷಿಣೆಯನ್ನು ಕೊಡುವುದಾದರೆ ಒಪ್ಪುವುದಾಗಿಯೂ ರಘುರಾಮನು ಬರೆದನು. ಅವನ ಕಾಗದವನ್ನು ನೋಡಿ ವಿಶ್ವನಾಥನಿ ಗುಂಟಾದ ಆಶ್ಚಾರ್ಯವನ್ನು ವಿವರಿಸಲು ಸಾಧ್ಯ ವಿಲ್ಲ. ನಾನು ಸಾಕಿ ದೊಡ್ಡವನನ್ನಾಗಿ ಮಾಡಿದ ಹುಡುಗನೇ ನನಗೆ ಈ ರೀತಿಯಾಗಿ ಉತ್ತರವನ್ನು ಕೊಟ್ಟಬಳಿಕ, ನನ್ನ ಯಾವ ಪ್ರಯತ್ನ ತಾನೆ ಫಲಕಾರಿಯಾಗುವುದು ? ದೈವಚತ್ತಹೀಗಿದೆಯೊ ? ಜಾತಿಕೆಡ ಬೇಕಂದೇ ನಮ್ಮ ಹಣೆಯಲ್ಲಿ ಬರೆದಿದೆಯೋ? ವೃಥಾ ಚಿಂತಿಸಿ. ಫಲ ವಿಲ್ಲ, ಮಿತಿ ಮಿರಿದರೆ ಕಾಶೀಯಾತ್ರೆ, ಇದ್ದೇಇದೆ“ ಎಂದಂದು ಕೊಂಡು ಸುಮ್ಮ ನಾದನ್ನು ಮನಸ್ಸಿನ ಕೊರತೆಮಾತ್ರ ತಪ್ಪಲಿಲ್ಲ.

ಅತ್ತ ಪುನಹೆಯಲ್ಲಿ ಆತ್ಮಾ ರಾಮನಮೊಕದ್ದಮೆಯು- “ಸೆಷನ್‌ ಕೋರ್ಟ್“ ನಲ್ಲಿ ವಿಚಾರಣೆಗೆ ಪ್ರಾರಂಭವಾಯಿತು. ಸರಕಾರದಪಕ್ಷ ದಲ್ಲಿ ಮುಖ್ಯಸಾಕ್ಷಿ ಯಾದ ಶಂಕರರಾಯನ ವಿಚಾರಣೆಯು ಒಂದು ಮಧ್ಯಾಹ್ನವೆಲ್ಲಾ ಹಿಡಿಯಿತು. ಅದಿನ ಶಂಕರರಾಯನು ಸರಕಾರದ ಪಕ್ಸ್ಯದ ವಕೀಲನ ಸವಾಲು ಗಳಿಂದಲೂ ಎದುರು ಪಕ್ಷಯದ ವಕೀಲನ “ಪಾಟೀಸವಾಲು“ಗಳಿಂದಲೂ ತಾಡಿ ಸಲ್ಪಟ್ಟವನಾಗಿ, ಜೀವದೊಂದಿಗೆ ಕೋರ್ಟಿನಿಂದ ಹೊರಗೆ ಹೋದರೆ ಸಾಕೆಂದಂದುಕೊಂಡು ಕೊನೆಗೆ ಬಿಡುಗಡೆ ಮಾಡಲ್ಪಟ್ಟವನಾಗಿ ಮನೆಗೆಬಂದನು. ರಾಮರಾಯನಿಂದ ಆಗತಾನ ಒಂದು ಕಾಗದವು ಬಂದಿತ್ತು. ಅದನ್ನು ನೋಡಿದ ಕೂಡಲೆ ಗಂಗಾಬಾಯಿ ಇದ್ದಲ್ಲಿಗೆ ಬಂದು “ಗಂಗೂ!ನಾವುಮೊಕದ್ದಮೆಯ ಅವಾಂತರದಲ್ಲಿ ಮಾಧವನಮದುವೆಯ ವಿಚಾರವನ್ನೆ ಮರೆತು ಬಿಟ್ಟೆವು. ಇಗೊ! ರಾಮರಾಯರು ತಿರಿಗಿ ಕಾಗದ ಬರದಿದ್ದಾರೆ, ಅವರಿಗೇನು ಉತ್ತರವನ್ನು ಕೊಡೋಣ?” ಎಂದನು. ಗಂಗಾಬಾಯಿ_-ಬಾವ! ಆ ಸ್ಥಳವನ್ನು ಬಿಟ್ಟು ಬೇರೆಕಡೆ ಸಂಬಂಧ ಬೆಳೆಯಬಾರದೆ.

ಶಂಕರರಾಯ _ ಏತಕ್ಕೆ ?. ಏನುಸಮಾಜಾರ ?

ಗಂ__ಏನೂ ಇಲ್ಲ. ಹುಡುಗಿಯ ವಿಷಯ.

ಶಂ-~ಹುಡುಗಿ ಹೇಗಿದ್ದಾಳೆ ? ಗಂ–ಭಾಗ್ಯವಂತರ ಮನೆಗೆ ತಕ್ಕವಳಾಗಿದ್ದಾಳೆ. ಶಂ _ ಸರಿ, ಹಾಗಾದರ ಅಲಂಕಾರದ ಗೊಂಬೆಯೊ ?

ಗಂ—-ಹೌದು. ಉಡಿಗೆ ತೊಡಿಗೆಯಲ್ಲಿದ್ದಾಗ.

ಶಂ-ಇಲ್ಲದಿದ್ದರೆ ?

ಗಂ – ಚಂದನದಗೊಂಬೆ! ಅಷ್ಟು ಮಾತ್ರವೇಅಲ್ಲ ಅ, ವಳಂ ತಹ ಮೂರ್ಖಳನ್ನು ನೋಡಲೇ ಇಲ್ಲ.ಅವಳಗುಣಕ್ಕೂ ನಮ್ಮ ಮಾಧವನಗುಣಕ್ಳೂ ಏನೇನೂ ಸಂಬಂಧವಿಲ್ಲ.

ಶಂ–ಮಾಧವನೇ ನೋಡಿದ್ದಾನಷ್ಟೆ. ಅವನ ಅಭಿಪ್ರಾಯ ವೇನಾದರೂ ನಿನಗೆ ತಿಳಿಯುವುದೊ ?

ಗಂ–.- ನನ್ನ ಅಭಿಪ್ರಾಯವೇ ಅವನ ಅಭಿಪ್ರಾಯ. ನೀವಾ ಗಿಯೆ ಈ ವಿಷಯದಲ್ಲಿ ಅವನಿಗೆ ಸ್ವಾತಂತ್ರ್ಯವನ್ನು ಕೊಟ್ಟಿ ರುವುದರಿಂದ ಅವರಿಗೆ ಮನಸ್ಸು ಬಂದಕಡೆ ಕನ್ಯೆಯನ್ನು ನೋಡಿಳೊಳ್ಳಬಹುದಷ್ಟೆ ?

ಶಂ-ಅದರೆ ಜಾತಿ, ಕುಲ, ಗೋತ್ರ ಮುಂ ತಾದ ವಿಷಯಗಳಲ್ಲಿ ಮಾತ್ರ.

ಗಂ–ನಿಮ್ಮ ಅಭಿಪ್ರಾಯವನ್ನು ಬಿಟ್ಟು ಬೇರೆ ಉಂಟೆ? ಅದೂ ಅಲ್ಲದೆ ನಾನೊಪ್ಪುವೆನೆ ? ಶಂ__ ಸರಿ, ನೀನೂ ಮಾಧವನೂ ಒಪ್ಪಿದಮೇಲೆ ನನ್ನ ದೇನೂ ಅಡ್ಡಿ ಇಲ್ಲ. ಗಂ_ನಿಮ್ಮ ಸಮಾನಸ್ಕರಂಧರಲ್ಲದವರಲ್ಲಿ ಸಂಬಂಧ ಬಳೆಸು ವುದರಲ್ಲಿ ಅಡ್ಡಿ ಯಿಲ್ಲವೆ ? “ ಶಂ-~ ಇದೇನು ಗಂಗೂ, ನನ್ನ. ಪ್ರಕೃತಿಯನ್ನು ತಿಳಿಯದವ ಳಂತೆ ಮಾತನ್ನಾಡುವೆ ? ನಾನು ಯಾವಾಗಲಾ ರೂ ಯಾರಲ್ಲಿಯಾದರೂ ಅಂತಹ ಭೇದವನ್ನೆಣಿಸಿ ರುವುದನ್ನು ನೋಡಿರುವಿಯಾ ? ಗಂ__ ಇಲ್ಲ, ನಮ್ಮ ಮನೆಯಲ್ಲಿ ನೀವು ಹೆಣ್ಣುತಂದುಕೊಂ ಡದ್ಬೇ ಸಾಕ್ಷಿಯಲ್ಲವೆ ? ನಮ್ಮ ಮಾಧವನು ಒಬ್ಬ ಬಡ ವೈದಿಕ ಬ್ರಾಹ್ಮಣನ ಮಗಳನ್ನು ನೋಡಿ ಕೊಂಡು ಬಂದಿದ್ದಾನೆ. ಶಂ__ ನಷ್ಟವೇನು ? ಹುಡುಗಿಯು ಗುಣವಂತಳು ತಾನೆ ? ಗಂ_-ಆಹಾ ! ಗುಣದಲ್ಲಿ, ವಿದ್ಯೆಯಲ್ಲಿ, ರೂಪದಲ್ಲಿ, ಅವಳ ಸಮಾನಳಾದ ಕನ್ಗೆಯನ್ನೇ ನಾನು ನೋಡಲಿಲ್ಲ ಮಾಧವನು ಅವಳನ್ನಲ್ಲದೆ ಬೇರೆಯಾರನ್ನೂ ವರಿಸ ಲಾರನೆಂದು ನನಗೆ ತೋರುವುದು. ಶಂ~ಹುಡುಗಿಗೆ ತಂದೆ ತಾಯಿಗಳಿದ್ದಾರಷ್ಟೆ ? ಸ್ಥಳ ವಾವುದು ಗಂ-_ಸ್ಥಳ ರಾಂಫ್ರುರ, ನನ್ನ ಪಾಠಶಾಲೆಯಲ್ಲೇ ಚಿಕ್ಕ ಮಗುವಾಗಿದ್ದಾಗಿನಿಂದ ನಾನೆ ವಿದ್ಯಾಬುದ್ದಿ ಕಲಿಸಿ ದ್ದೇನೆ. ನನಗೆ ಮಗಳಿಗಿಂತೆ ಹೆಚ್ಚು, ಆದುದರಿಂದಲೇ ಸೊಸೆಯನ್ಟು ಮಾಡಿಳೊಳ್ಳಬೇಕೆಂದು ಆಛಿಲಾಷೆ.

ಶಂ-ಹಾಗಾದರೆ ಜಾಗ್ರತೆಮಾಡಬೇಕು. ರಾಮರಾಯನು ಅಸಾಧಾರಣನಾದ ಮನುಷ್ಯ,. ನಮ್ಮ ಅಭಿಪ್ರಾ ಯವು ಅವನಿ ಗೆ ತಿಳಿಯುವುದಕ್ಕೆ ಮುಂಚೆಯೆ ಕನ್ಯೆ ಯನ್ನು ಕರೆದುಕೊಂಡು ಅವರು ಇಲ್ಲಿಗೆ ಬಂದು ಬಿಡಲಿ, ಈಗಲೆ ಅವರಿಗೆ ಕಾಗದ ಬರೆದುಬಿಡೋಣ! ಹುಡುಗಿಯ ಹೆಸರೇನು ? ಗಂ-ಸುಭದೆ,.

ಶಂ __ತಂದೆಯ ಹೆಸರು ?

ಗಂ-ವಿಶ್ವನಾಥ ಪಂತರು.

ಶಂ-ವಿಶ್ವನಾಥಪಂತರೆ ? ಯಾವ ವಿಶ್ವ ನಾಥಪಂತರು ?

ಗಂ _ಪೇಷ್ವೆಯವರ ಕುಲಪುರೋಹಿತರಾಗಿದ್ದ ಕೃಷ್ಣ್ಯಪಂತರ ವಂಶೀಯರು, ಒಳ್ಳೆಯ ದೊಡ್ಡ ಮನೆತನ, ಈಗ–

ಶಂ_-ಸಾಕು ! ಸಾಕು ! ಅಲ್ಲಿಗೆ ನಿಲ್ಲಿಸು. ಆ ಸರ್ಪವಂಶವು ಇನ್ನೂ ಇದೆಯೆ ? ಈ ಮಾತನ್ನು ಇಲ್ಲಿಗೆ. ಬಿಡು. ಅವರ ಪೂರ್ವಿಕರು . ನಮ್ಮವರ ಪ್ರಧಾನತ್ವವನ್ನು ಕಿತ್ತುಕೊಳ್ಳಲು ಮಾಡಿದ ತಂತ್ರಗಳನ್ನೂ ದೈವಕೃಪೆ ಯಿಲ್ಲದಿದ್ದರೆ ನಾವು ಯಾವಗತಿಗಿಳಿಯುತ್ತಿದ್ದೆ ವೆಂ ಬುದನ್ನೂ ಯೋಜಿಸಿಕೊಂಡರೆ ಅವರ ವಂಶೀಯರ ಮುಖದರ್ಶನವನ್ನೆ ಮಾಡಕೂಡದು, ಇಂತಹುದರಲ್ಲಿ ಸಂಬಂಧ ಬಳೆಸುವುದೆ ? ಎಂದಿಗೂ. ಆಗಲಾರದು.

ಗಂ-ಬಾವ ! ನೀವು ಇಷ್ಟುತಿಳಿವಳಿಕೆಯುಳ್ಳವರಾಗಿಯೂ ಈ ರೀತಿ ಮಾತನ್ನಾ ಡುವಿರೆಂದು ನಾನೆಣಿಸಿರಲಿಲ್ಲ

ಶಂ– ಎಲ್ಲಾ ವಿಷಯದಲ್ಲಿಯೂ ನೀನು ಹೇಳಿ ದಂತೆ ಕೇಳುತ್ತೇನೆ, ಇದೊಂದರಲ್ಲಿ ಮಾತ್ರ

ಗಂ–ನಿಮಗೆ ವಿಶ್ವನಾಥನೇನೂ ದ್ರೋಹಮಾಡಲಿಲ್ಲವಷ್ಟೆ? ಶಂ–~ಆದರೇನು ? ಅವನ. ಪೂರ್ವಿಕರು ಮಾಡಿದುದು ಸಾಲದೆ? ಅವರಿಗೂ ನಮಗೂ ವಂಶಪಾರಂಪರ್ಯ ವಾಗಿ ದ್ವೇಷವಿದ್ದೇ ಯಿರುವುದು.

ಗಂ-~ಸರಿ, ಹಾಗಾದರೆ-ನೀವುಂಟು ನಿಮ್ಮ ಮಗನುಂಟು, ಮಧ್ಯೆ ನನ್ನದೇನು ?

ಶಂಕರರಾಯನು ಮಗನನ್ನು ಏಕಾಂತವಾಗಿ ಕರೆಸಿಕೊಂಡು. ಅವನೊಡನೆ ವಿಶ್ವನಾಥನ ವಂಶೀಯರಿಗೂ ತಮ್ಮ ವಂಶೀಯರಿಗೂ ಪಾರಂಪರ್ಯವಾಗಿ ದ್ವೇಷ ಬಂದಿರು ವುದನ್ನೂ ಅವರ ಮನೆಯಲ್ಲಿ ಸಂಬಂಧವನ್ನು ಬಳೆಯಿಸುವುದರಿಂದ ಸ್ಕರ್ಗಸ್ಕರಾಗಿರುವ ತಮ್ಮ ಪಿತೃಪಿತಾಮಹ ಮುಂತಾದವರಿಗೆ ದ್ರೋಹಮಾಡಿದಂತಾಗಿ ಅವರು ಶ್ರಾದ್ಧ ದಲ್ಲಿ ಪಿಂಡವನ್ನು ಸಹಮುಟ್ಟದೆ ಹೋದಾರೆಂಬ ಶಂಕೆಯನ್ನೂ ತಿಳಿಸಿ ಈರೀತಿ. ಮುಗಿಸಿದನು:— “ರಾಮರಾಯನ ಮಗಳನ್ನು ವಿವಾಹಮಾಡಿಕೊಳ್ಳಲು ಇಷ್ಟವಿಲ್ಲದಿದ್ದರೆ ಬೇಡ_ಅವನಿಗೆ ಆರೀತಿ ಉತ್ತರವನ್ನು ಬರೆದುಬಿಡೋಣ. ವಿಶ್ವನಾಥನ ಮಗಳೊಬ್ಬಳುವಿನಾ ನೀನು ಬೇರೆ ಯಾರನ್ನು ಬೇಕೆಂದರೂ ವಿವಾಹಮಾಡಿಕೊಡುತ್ತೇನೆ. ನೀನು ಅವಳೇಆಗಬೇಕೆಂದು ಮುಷ್ಕರ ಹಿಡಿದರೆ ನನ್ನ ಅಡ್ಡಿಯೇನೂ ಇಲ್ಲ.. ಆದರೆ ಮದುವೆಯಾದ ಉತ್ತರಕ್ಷಣದಲ್ಲಿಯೆ ನೀನೂ ನನ್ನ ಶತ್ರು ಪಕಷಕ್ಕೆ ಸೇರಿದವನಾಗುವೆಯಾದುದರಿಂದ ನನ್ನ ಮನೆಯಲ್ಲಿ ನಿನಗೆ ನೆಳಲುದೊರಿಯಲಾರದು. ಯೋಚನೆಮಾಡಿ ಹೇಳು. “

ಮಾಧವನು ತಂದೆಯ ಎದುರಿಗೆ ವಿಶೇಷವಾಗಿ ನಿಂತು ಮಾತ ನ್ನಾಡಿದವನೆ ಅಲ್ಲ. ಅವನ ಉಪನ್ಯಾಸವು ಪೂರೈಸುವವರೆಗೂ ಸುಮ್ಮನೆ ತಲೆ ಬಗ್ಗಿಸಿಕೊಂಡು ನಿಂತಿದ್ದು ಹೊರಟುಹೋದನು. ಇವನ ಮುಖವು ಬಾಡಿಹೋಗಿರುವುದು ಶಂಕರರಾಯನಿಗೆ ಗೋಚರವಾಗಲಿಲ್ಲ. ತನ್ನ ಮಗನಂತಹ ವಿಧೇಯನಾದ ಮಗನನ್ನು ಯಾರೂ ಪಡೆಯಲಿಲ್ಲವೆಂದೂ ಆ ವಿಷಯದಲ್ಲಿ ತಾನು ತುಂಬಾ ಅದೃಷ್ಟ್ರಶಾಲಿ ಯೆಂದೂ ತನ್ನನ್ನು ತಾನೆ ಹೊಗಳಿಕೊಂಡನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರೋಹ
Next post ದಾಟು

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…