
ನೆಲದಡಿಯಲಿ ಮಲಗಿದ ಪ್ರೀತಿ ಆತ್ಮಗಳು ಉಸಿರಾಡುತ್ತವೆ, ಮಂಜು ಹನಿಗಳ ಮಧುರ ತಣ್ಣನೆಯ ಸ್ಪರ್ಶದಲಿ ಎಲೆಯ ಮರೆಯ ನಿಧಾನದ ಗಾಳಿ ಸವರಿ ತೇಲಿ ಹೋಗುತ್ತವೆ, ಪರಿತ್ಯಕ್ತ ಎಲ್ಲಾ ಮನಸ್ಸುಗಳ ಮೂಲೆಯಲಿ ಲೋಕದ ಬೆಳಕು. ಎರೆಮಣ್ಣಿನಲಿ ಮುಸುಕಿನ ಗುದ್ದಾಟ ಮತ್ತೆ...
ಎದ್ದೇಳಿ ಎದ್ದೇಳಿ ಸೋದರರೇ ಕನ್ನಡದಾ ವೀರಯೋಧರರೇ ಕನ್ನಡದಾ ಮಣ್ಣಲ್ಲಿ ಮಣ್ಣಾಗಿ ಕನ್ನಡದಾ ನೆಲದ ಹಸಿರಾಗಿ || ಬಡಿದೆಬ್ಬಿಸುತಿಹಳು ತಾಯಿ ಮೊರೆ ಕೇಳಿ ಕನ್ನಡದಾದೀಪ ಹಚ್ಚಿ ಬೆಳಗಿ ನುಡಿಯೊಂದ ಕೇಳಿ ಒಲವಿಂದೇ ತೂಕಡಿಸದಿರಿ ತೂಕಡಿಸದಿರಿ ಮತ್ತೆ ತಾಯೆ ...
ಹೊಸಕಾಲದ ಕವಿಯೊಬ್ಬನೆ ನಾನು! ಹೊಸೆಯುವೆನೆಂತಹ ಕವನಗಳನ್ನು! ೧ ಪ್ರತಿಭಾದೇವಿಯ ದಯೆ ಬೇಕಿಲ್ಲ ; ಅವಳಿಗೆ ಮಣಿಯುವ ಕವಿ ನಾನಲ್ಲ ! ಎಡಗೈಯಲಿ ನಿಂತಿಹಳಾ ಹುಡುಗಿ, ನನ್ನ ನೋಡಿದರೆ ಅವಳೆದೆ ನಡುಗಿ- ಚಳಿಯುರಿಯಲಿ ಗದಗುಟ್ಟುವಳು ; ಉಳಿದವರಿಗೆ ದೊಡ್ಡವಳ...
ಆಸೆಯು ಮುಂದೆ ನಿರಾಸೆಯು ಹಿಂದೆ| ಆಮಿಷದಿಂದೆ ಬೇಸರ ಮುಂದೆ| ತಿಳಿದೂ ಅದರ ಹಿಂದೆ ಹೋದರೆ ನಾವೂ ಕುರಿ ಮಂದೆ|| ಬೆಳಕ ಜೊತೆಯಲಿ ನೆರಳಿರುವಂತೆ ದೀಪದ ಕೆಳಗಡೆ ಕತ್ತಲಿರುವಂತೆ ಆಸೆಯು ತುಂಬಾ ಚಿಕ್ಕದಿರಬೇಕು| ನಾಳೆಯ ಕಾಣಲಷ್ಟೇ ಆಸೆಯು ಬೇಕು ದುರಾಸೆಯ ...
ಪ್ರಕೃತಿಯಲಿ ಸೌಂದರ್ಯ ಕಾಣದೆಯೆ ಕುರುಡಾಗಿ ವಿಕೃತಿಯನೆ ನೋಡಿದೆನು ಅದು ಸತ್ಯವೆಂದು ಸುಕೃತಿಗಳನೊಪ್ಪದೆಯೆ ಎನ್ನದೇ ಸರಿಯೆಂದು ಆಕೃತಿಯ ದುಷ್ಕೃತಿಗೆ ಬಲಿಗೊಟ್ಟೆನಯ್ಯ. ನಾನು ದೊಡ್ಡವನೆಂದು ಹೆಮ್ಮೆಯಲಿ ಮೆರೆಯುತ್ತ ಮಾನಾಪಮಾನಮಂ ಲೆಕ್ಕಿಸದೆ ನಡೆದು ...
ಮುಳ್ಳುಗಳ ಮಧ್ಯದಲ್ಲಿಯೇ ಗುಲಾಬಿ ಹುಟ್ಟುತ್ತದೆ ನಿಜ. ಪ್ರೀತಿ ಹೂ ಅರಳುವ ಕ್ರಿಯೆ ನಿರಂತರ ನಡೆಯುತ್ತಲೇ ಇರುತ್ತದೆ ನೋಡು. ಅಮವಾಸ್ಯೆ ಕತ್ತಲಲ್ಲಿ ಏಕಾಕಿ ಕಾಡಿನಲ್ಲಿ ಪಯಣಿಸುತ್ತೇನೆ ನಿಜ, ರಾತ್ರಿ ಕಳೆದುಹೋದ ಸೂರ್ಯ ಮತ್ತೇ ಹುಟ್ಟುತ್ತಲೇ ಇರುತ್ತ...
ಸಾಲು ಮೆಟ್ಟಲುಗಳನೇರಲು ಹೊರಟರೆ ಸಾಲಭಂಜಿಕೆಗಳು ತಡೆದಾವೆ ಸಾಲಭಂಜಿಕೆಗಳು ತಡೆದಾವೆ ನಮ್ಮ ವಿಗಡವಿಕ್ರಮರಾಯನ ಕೇಳ್ಯಾವೆ ಒಂದೊಂದು ಸಾಲಿಗೆ ಒಂದೊಂದು ಪ್ರಶ್ನೆ ಇಪ್ಪತ್ತು ಬೊಂಬೆಗಳು ಕೇಳಿದರೆ ಒಂದೊಂದು ಬೊಂಬೆಗು ಒಂದೊಂದು ಉತ್ತರ ಜಾಣ ವಿಕ್ರಮರಾಯ ಹ...













