Home / ಕಥೆ / ಕಿರು ಕಥೆ

ಕಿರು ಕಥೆ

ಶಿಷ್ಯನೊಬ್ಬ ಗುರುವನ್ನು ಹುಡುಕಿಹೊರಟಿದ್ದ. ವನದಲ್ಲಿ ಬಂದಾಗ ದೊಡ್ಡ ವೃಕ್ಷಗಳನ್ನು ನೋಡಿದ. ಶಾಖೆ ಶಾಖೆಯಲ್ಲಿ ಗೊಂಚಲು ಗೊಂಚಲು ಎಲೆ, ಹೂ, ಕಾಯಿ, ಫಲಗಳು. ಕಾಂಡದಲ್ಲಿ ಅತೀವ ಧೃಡತೆ, ಬೇರಿನಲ್ಲಿ ಅಸಾಧ್ಯಬಿಗಿ, ಹಿಡಿತ, ಜೀವಸಂಚಾರ ಎಲ್ಲವನ್ನೂ ಗ್ರ...

“ದಾರಿ ಎಲ್ಲಿದೆ? ಎಂದು ಕಳಕಳಿಯಿಂದ ಶಿಷ್ಯ, ಗುರುವಿನಲ್ಲಿ ಕೇಳಿದ. “ಬಹಿರಂಗದಲ್ಲಿ ನಿಂತು ಸಾಗಿದ್ದರೆ ಶಿಷ್ಯಾ! ನೇರ ಅಂತರಂಗದ ಹಾದಿಗೆ ಹೋಗು. ಅಂತರಂಗದಲ್ಲಿ ದಾರಿ ಕವಲೊಡೆದರೆ, ನಿಲ್ಲು ಧ್ಯಾನದಲ್ಲಿ, ಕೊನೆಗೆ ಸೇರುವೆ ಸಮಷ್ಟಿಯ ದಾರಿಯಲ್...

“ಶೂನ್ಯವನ್ನು ತಲುಪುದು ಹೇಗೆ?” ಎಂದು ಒಬ್ಬ ಶಿಷ್ಯ ಗುರುಗಳಲ್ಲಿ ಕೇಳಿದ. ಗುರು ಹೇಳಿದರು- “ಅದು ತಲುಪುವುದಲ್ಲ, ಪಡೆಯುವುದು” “ಹಾಗೆಂದರೆ ಏನು?” ಶಿಷ್ಯ ಕೇಳಿದ. ನಮ್ಮ ಹಾವಭಾವ, ಬಾಳು ಬದುಕು, ಸೀಮ ಅಸ್ಸೀಮ, ನೇಹಗೇಹ, ಗೆರೆಗೋಡೆ, ...

ವ್ಯಾಳ ವ್ಯಾಳದ ಹೆಜ್ಜೆಯಲ್ಲಿ ತಾಳ ಮೇಳವನ್ನು ಕಂಡುಕೊಂಡ ಶಿಷ್ಯ, ಗುರುವಿನಲ್ಲಿ ಬಂದು, “ನನಗೆ ನಡೆವ ಹಾದಿ ಎಷ್ಟು ಉದ್ದವಿದೆ?” ಎಂದು ಕೇಳಿದ. ಗುರು ಹೇಳಿದರು “ನೀನು ಈ ತಾಳದಲ್ಲಿ ಮೇಳದಲ್ಲಿ ಆರಂಭಿಸಿರುವೆ. ಹೋಗ ಬೇಕಾದದ್ದು ಬಹಳಷ್ಟಿದೆ. ...

ವೃಕ್ಷವನ್ನು ನೋಡುತ್ತಾ ಅದರ ಭೂಗತ ನೆಲೆಯನ್ನು ಕಂಡುಕೊಂಡಿರುವೆ. ಆಗಸದಲೆಲ್ಲಾ ರೆಕ್ಕೆ ಬಡಿದು ಅಳೆಯುವ ಪಕ್ಷಿಯು ನೆಲೆ ಗೂಡೆಂದು ಕಂಡು ಕೊಂಡಿರವೆ. “ಶಿಷ್ಯನೆ! ಈಗ ನಿನ್ನ ಸರದಿ, ನೀನು ನಿನ್ನ ನೆಲೆ ಇರುವುದು ಎಲ್ಲಿ ಎಂದು ಹೇಳಬಲ್ಲೆಯಾ?” ಎಂದರು ...

ಒಮ್ಮೆ ಒಂದು ಪಕ್ಷಿ, ಗೂಡಿನಲ್ಲಿಟ್ಟ, ಮೊಟ್ಟೆಯನ್ನು ದಿಟ್ಟಿಸಿ ನೋಡುತಿತ್ತು. ಈ ಮೊಟ್ಟೆಯಿಂದ ಹೊರ ಬರುವ ನನ್ನ ಮರಿ ಹಕ್ಕಿ, ಎಷ್ಟು ಕಠಿಣ ಜಗತ್ತನ್ನು ಎದುರಿಸಬೇಕೆಂದು ಯೋಚಿಸುತಿತ್ತು. ಗಾಳಿ-ಮಳೆ, ಗುಡುಗು-ಮಿಂಚು, ಶತ್ರುಮಿತ್ರರ ಹಾವಳಿಯಿಂದ ಹೇ...

ಕಲ್ಲು ಮುಳ್ಳಿನ ನಡುವೆ ಒಮ್ಮೆ ಹೀಗೆ ಮಾತುಕತೆ ನಡೆದಿತ್ತು. ಕಲ್ಲು ಬಂಡೆಗೆ ಆತು ಬೆಳದಿದ್ದ ಮುಳ್ಳಿನ ಪೊದೆ ಹೇಳಿತು- “ಏಕೆ ನನ್ನ ಬಗಲಲ್ಲಿ ಇರುವೆ? ನಾನು ನಿನ್ನ ಸನಿಹಕ್ಕೆ ಕರೆಯಲಿಲ್ಲ.” “ನಿನ್ನ ಚೂಪು ಮುಳ್ಳಿನ ಮೂಗು ಯಾರಿಗೂ ಬೇಡ. ನನ್ನ ಹತ್ತ...

ಅದೊಂದು ಬೆಟ್ಟಗುಡ್ಡಕಾಡು, ಅಲ್ಲಿ ಗುಡ್ಡ ಕಲ್ಲುಗಳ ರಾಜ್ಯಭಾರ. ನಡೆದು ಬರುತ್ತಾ ಒಮ್ಮೆ ನಾನೂ ಈ ಬೆಟ್ಟಗುಡ್ಡಗಳ ರಾಜ್ಯದಲ್ಲಿ ಹೆಜ್ಜೆ ಇಟ್ಟೆ. ಮೊದಲಿಗೆ ನನಗೆ ಹೆದರಿಕೆಯಾಯಿತು. “ಅಬ್ಬಾ! ಇದೆಷ್ಟು ದೊಡ್ಡ ಬೆಟ್ಟ ಗುಡ್ಡಗಳು” ಎನಿಸಿತು. ಇ...

ಒಮ್ಮೆ ಒಂದು ಕಲ್ಲು ಬಂಡೆಯ ಪಕ್ಕದಲ್ಲಿ ಬೆಳೆದ ಹುಲ್ಲುಗರಿಗೆ, ಕಲ್ಲು ಬಂಡೆಯ ಮೇಲೆ ಪ್ರೇಮ ಅಂಕುರಿಸಿತು. ಹುಲ್ಲಿನ ಗರಿ ಗಾಳಿ ಬಂದ ನೆಪದಲ್ಲಿ ಕಲ್ಲು ಬಂಡೆಯ ಎದೆಯನ್ನು ಬಾಗಿತಾಗಿ, ತನ್ನ ಪ್ರೀತಿ ತೋರುತ್ತಿತ್ತು. ಹಸಿರು ಹುಲ್ಲಿನಲ್ಲಿ ಪ್ರೀತಿ ಉ...

ಶಿಷ್ಯರನೇಕರು, ತಮಗೆ ತೋರಿದ ಕಾಣಿಕೆಯಾಗಿ ಬುಟ್ಟಿ, ಹಣ್ಣು, ಹೂವು, ಚಿನ್ನ, ಬೆಳ್ಳಿ, ಹಣ ಮೊದಲಾದವುಗಳನ್ನು ಗುರುಗಳಿಗೆ ತಂದು ಕೊಡುತ್ತಿದ್ದರು. ಶಿಷ್ಯ ರಾಮನಿಗೆ ಎನೂ ತೋಚಲಿಲ್ಲ. ಸೀದಾ ಗುರುಗಳಲ್ಲಿಗೆ ಬಂದು “ನನಗೆ ಏನು ಕಾಣಿಕೆ ಕೊಡಲು ತ...

1...34567...18

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...