Home / ಕಥೆ / ಕಿರು ಕಥೆ / ಕಲ್ಲಿನಲ್ಲಿ ಸಾಲಿಗ್ರಾಮ

ಕಲ್ಲಿನಲ್ಲಿ ಸಾಲಿಗ್ರಾಮ

ಒಬ್ಬ ವಯೋವೃದ್ಧ ತನ್ನ ಜೀವಮಾನದಲೆಲ್ಲಾ ಒಂದು ಕರಿಯ ಬೆಣಚು ಕಲ್ಲನ್ನು ತುಂಬಾ ಪ್ರೀತಿಸುತ್ತಿದ್ದ. ಅವನು ಅದನ್ನು ಸದಾ ಕಾಲವೂ ಕೈಯಲ್ಲಿಟ್ಟು ಕೊಂಡಿರುತ್ತಿದ್ದ. ಕೈಯಲ್ಲಿ ಕೆಲಸವಿದ್ದಾಗ ಅದನ್ನು ಬಾಯಿಯಲ್ಲಿ ಹಾಕಿಕೊಂಡು ದವಡೆಯಿಂದ ದವಡೆಗೆ ಬದಲಾಯಿಸುತ್ತಾ ತನ್ನ ನಿತ್ಯ ಕೆಲಸಗಳನ್ನು ಮುಗಿಸುತ್ತಿದ್ದ.

“ಲೋ? ಮುದುಕ ಏನು ತಂಬಾಕು ಮಲ್ಲುತ್ತಿರುವೆಯಾ?” ಎಂದು ಹಳ್ಳಿ ಜನರು ಕೇಳುತ್ತಿದ್ದರು.

ಮುದುಕ ಮಾತನಾಡದೆ ಸುಮ್ಮನಿರುತ್ತಿದ್ದ.

“ಯಾಕಪ್ಪ ಮಾತಾಡೋಲ್ಲ? ಏನು ಅಂತ ಸವಿ ತಿಂಡಿ ಬಾಯಲ್ಲಿ” ಎಂದು ಕೇಳುತ್ತಿದ್ದರು.

ಒಮೊಮ್ಮೆ ಮುದುಕ ಗಂಟೆಗಟ್ಟಲೆ ವೃಕ್ಷದ ಕೆಳಗೆ ತಪಸ್ವಿಯಂತೆ ಕುಳಿತು ಬಾಯಲ್ಲಿ ಬೆಣಚು ಕಲ್ಲಿಟ್ಟುಕೊಂಡು ಧ್ಯಾನ ಮಾಡುತ್ತಿದ್ದ.

ಒಬ್ಬ ಹಳ್ಳಿಯ ಯುವಕನಿಗೆ ಅತ್ಯಂತ ಕುತೂಹಲವಾಯಿತು. ಅವನು ಸ್ನೇಹದಿಂದ ಮೆಲ್ಲಗೆ ಮುದುಕನ ಹತ್ತಿರಬಂದು ಕುಶಲೋಪರಿ ಮಾತನಾಡಿ ಅವನ ಮನ ಒಲಿಸಿಕೊಂಡು ನಂತರ ಮುದುಕ ಸ್ವಲ್ಪ ಸಲಿಗೆಯಿಂದ ಮಾತನಾಡತೊಡಗಿದ.

ಮುದುಕನು ಮನ ಬಿಚ್ಚಿ ಮಾತನಾಡಲು “ನೀನು ಬೆಣಚು ಕಲ್ಲನ್ನು ಬಾಯಲ್ಲಿ ಇಟ್ಟುಕೊಂಡಿರುವ ಗುಟ್ಟೇನು?” ಎಂದು ಕೇಳಿದ ಹಳ್ಳಿಗ.

“ಗುಟ್ಟೇನು ಬಂತು?-ಅದು ನನ್ನ ಸಹಜ ಪೂಜೆ” ಎಂದ.

“ಇದೇನು ಬಾಯಲ್ಲಿ ಮಂತ್ರ ಹೇಳುತ್ತಾರೆ. ಕೇಳಿದ್ದೇನೆ. ಆದರೆ ಬಾಯಲ್ಲಿ ಬೆಣಚು ಕಲ್ಲಿಟ್ಟುಕೊಂಡು ಪೂಜಿಸುವವರನ್ನು ನೋಡಿಲ್ಲ” ಎಂದ.

ಪೂಜೆ ವ್ಯಕ್ತಿಗತ, ಒಬ್ಬರೊಬ್ಬರದು ಒಂದೊಂದು ವಿಧಾನ. ನೀನು ಕೈಯಲ್ಲಿ ಪೂಜೆ ಮಾಡಿದರೆ, ನಾನು ಬಾಯಲ್ಲಿ ಪೂಜೆ ಮಾಡುತ್ತೇನೆ, ಕೆಲವರು ಹೊಟ್ಟೆಯಿಂದ-ಹೀಗೆ ಹಲವು ಹತ್ತಾರು ವಿಧಾನ ಇರುತ್ತೆ.” ಎಂದ ಮುದುಕ.

“ಅದು ಸರಿ ಇದು ಯಾವ ರೀತಿಯ ಪೂಜೆ? ಯಾವ ದೇವರಿಗಾಗಿ?”

“ಇದು ನನ್ನ ಸ್ವಂತ ದೈವ. ನನ್ನ ಕೈಯಲ್ಲಿ ಕೆತ್ತಲಾಗದ ದೈವಮೂರ್ತಿಯನ್ನು ನನ್ನ ಹಲ್ಲು ದವಡೆ ಕೆತ್ತುತ್ತಿದೆ”

“ಇದೇನು ಎಂಜಲು, ಉಗುಳು, ಬಾಯಿಯ ದುರ್ನಾತ, ಹಲ್ಲಿನ ಕಡೆತ ಇದೆಲಲ್ಲಾ ಪೂಜೆಯಾಗುತ್ತದೆಯೇ? ದೈವ ಒಪ್ಪುತ್ತಾನೆಯೇ?”

“ಉಳಿಯಿಂದ ಹೊಡಿಸಿಕೊಂಡು ಮೂರ್ತಿಮತ್ತಾಗುವ ದೈವಕ್ಕೆ ನಾನು ಬಾಯಲ್ಲಿಟ್ಟು ಚಪ್ಪರಿಸಿದಾಗಲೆಲ್ಲಾ ಮುತ್ತನಿತ್ತಂತೆ, ಅದು ನನ್ನ ಪ್ರೇಮ ಅಭಿವ್ಯಕ್ತಿ” ಎಂದ ಮುದುಕ.

“ನೀನು ಈ ರೀತಿಯ ಪೂಜೆಯಿಂದ ಏನನ್ನು ಸಾಧಿಸ ಹೊರಟಿರುವೆ?”

“ನನ್ನ ಬೆಣಚು ಕಲ್ಲು, ಹಲ್ಲುಗಳ ಮಧ್ಯೆ ಸಾಲಿಗ್ರಾಮದ ಸುಂದರ ಪರಿವರ್ತನೆಯಲ್ಲಿ ತೊಡಗಿದೆ. ಅಲ್ಲಿ ದೈವದ ಪ್ರತಿಬಿಂಬ ಮೂಡುತ್ತಿದೆ. ಇನ್ನೇನು ಸಾಧಿಸಲು ಇದೆ?” ಎಂದ ಮುದುಕ.

“ಏನೂ ಹಲ್ಲಿನ ಕೆಳಗೆ-ಬೆಣಚುಕಲ್ಲು ಸಾಲಿಗ್ರಾಮವಾಗುತ್ತಿದೆಯೆ?”

“ಹೌದು, ನದಿಯಲ್ಲಿ ನೀರು ಹರಿದು ಬೆಣಚುಕಲ್ಲಿನಲ್ಲಿ, ಚಿಪ್ಪಿನಲ್ಲಿ ಆಕಾರ ಮೂಡಿ ಸಾಲಿಗ್ರಾಮವಾಗುವುದಿಲ್ಲವೇ? ಹಾಗೆ ನನ್ನ ಬಾಯಲ್ಲಿ ಊರುವ ನನ್ನ ಲಾಲಾರಸೋಸ್ವಾದನೆಯಲ್ಲಿ ಸಾಲಿಗ್ರಾಮ ರೂಪುಗೊಳ್ಳುತ್ತಿದೆ. ಇದು ನನ್ನ ಪೂಜೆ. ಮಂತ್ರವಿಲ್ಲದೆ, ಮಾತಿಲ್ಲದೆ ದಿವ್ಯ ಮೌನ ಪೂಜೆ”- ಎಂದ ಮುದುಕ.

ಹಳ್ಳಿಯ ಯುವಕ ಬೆಚ್ಚಿದಂಗಾದ. ಝೆನ್ ಧ್ಯಾನದಲ್ಲಿರುವ ಮುದುಕನ ಅತಿವಿಚಿತ್ರದ ಪೂಜೆ ಅವನ ಒಳಕಣ್ಣನ್ನು ತೆರೆಯಿತು. ಝೆನ್‌ನನ್ನು ನಮ್ಮದಾಗಿಸಿ ಕೊಂಡಾಗ ಅದು ಕೊಡುವ ಸ್ವಾತಂತ್ರ್ಯ, ಯಾವ ರೀತಿಯ, ನೀತಿಯ, ಪಂಥ, ಪ್ರಕಾರಕ್ಕೆ ಶರಣಾಗದೆ ಬಾಯಿಯಷ್ಟು ಅಗಲ ಆಳದಲ್ಲೂ ದೈವ ಸೃಷ್ಟಿಯ ಯತ್ನ ಯುವಕನಿಗೆ ವಿಸ್ಮಯವ ತಂದಿತು. ವಿಸ್ಮಯೇ ಯೋಗ ಭೂಮಿಕಾ! ಎಂದು ತಿಳಿದ, ಝೆನ್‌ನಲ್ಲಿ ಅದೆಂತಹ ಮುಕ್ತತೆಯಿದೆ. ಜ್ಞಾನದ ಬಾಗಿಲಿಗೆ ಝೆನ್ ಅದೆಂತಹ ಅರಿವಿನ ಕೀಲಿಕೈ. ಯಾವುದೇ ಕಟ್ಟುಪಾಡು, ಕಂದಾಚಾರ, ಸಿದ್ದಾಂತ ಇಲ್ಲದೆ ಅನಂತಕ್ಕೆ ಕೊಂಡೊಯ್ಯುವ ಇದೆಂತಹ ಸಾಧನ” ಎಂದು ಯುವಕ ಮನದಟ್ಟು ಮಾಡಿಕೊಂಡ.
*****

Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...