ಬುಗುರಿಹುಳದ ಧ್ಯಾನ

ನಡೆವುದೆಂದರೆ ಹೀಗೆ.... ಪ್ರದಕ್ಷಿಣಿಯೋ ಅಪ್ರದಕ್ಷಿಣಿಯೋ ಗಿರಗಿರನೆ ಗುಂಡಗೆ ಬುಗುರಿಹುಳದ ಇಡೀ ದೇಹವೇ ವೃತ್ತಾಕಾರ ತಿರುಗುತ್ತಾ ಗಾಳಿಯಿಲ್ಲದೆಯೂ ಗಿರಗಟ್ಟೆ. ತಿರುಗುತ್ತಲೇ ಒಂದಿಷ್ಟು ಮುಂದೆ ಯಾರಿಗೆ ಗೊತ್ತು? ಹಿಂದಕ್ಕೂ ಆಗಿರಬಹುದು ಆ ನಡಿಗೆ! ಅದರ ದಾರಿಯುದ್ದಕ್ಕೂ ಕಲ್ಲು...

ಎಲ್ಲಿದ್ದಾನೋ ಹಾಳಾದವನು

ಆ ವಿಳಾಸವಿಲ್ಲದ ಅಲೆಮಾರಿ ಎಂದಿನಂತೆ ಜನಜಂಗುಳಿಯ ಮಧ್ಯೆ ಸಿಕ್ಕ. ಅವನು ಸಿಗುವುದು ಅಲ್ಲೇ ಆ ಏಕಾಂತದಲ್ಲೇ. ಅದೇಕೋ ಇಂದು ನನ್ನ ಕಂಡವನೇ ತನ್ನ ಜೋಳಿಗೆಗೆ ಕೈ ಹಾಕಿ ತಡಕಿ ಲಾಲಿಪಪ್ಪಿನ ಕಡ್ಡಿಯೊಂದನ್ನು ತೆಗೆದು ಕೈಯಲ್ಲಿ...

ಸ್ವಾಗತವೋ ಬೀಳ್ಕೊಡುಗೆಯೋ!

ಅಡ್ಡಾಡುತ್ತಾ ದಿಕ್ತಪ್ಪಿ ಬಂದ ತುಂಡಕರು ಕಾಲಿಗೆ ತೊಡರುತ್ತಾ ಮುದ್ದುಗರೆಯುವ ನಿಲುಮೆಗೆ ಕೊಚ್ಚಿ ಹೋಗಿ..... ಸಿಕ್ಕಸಿಕ್ಕೆಡೆ ಇಷ್ಟ ಬಂದಂತೆ ಅಂಡಲೆಯುವ ಜೀವಾತ್ಮವ ನಿಯತಕ್ಕೆ ಕಟ್ಟಿ ಹಾಕುವುದೂ ಹಿಂಸೆಯೇ ಎಂದರಿವಾಗುವ ಕಾಲಕ್ಕೆ ಮೀರುತ್ತದೆ ಕಾಲ. ‘ಇದೋ ಬಾಗಿಲು...

ಬುದ್ಧ ಪಾದದ ಮೇಲೆ

ಹೆಜ್ಜೆ-೧ ಅವನ ದೃಢ ವಿಶಾಲ ಪಾದದ ಮೇಲೆ ಪುಟ್ಟಾಣಿ ಹುಳು ಅಂಗುಲಂಗುಲ ಏರಿ ಪುಟ್ಟ ಪಾದವನೂರಿ ಅತ್ತಿಂದಿತ್ತ ಜೀಕುತ್ತಾ ಜೋಕಾಲೆ. ಅವನ ಪಾದದ ಮೇಲೆ ಅದರ ಪದತಳ. ಒಂದಿಂಚೋ ಎರಡಿಂಚೋ ಮೂರೋ ತಗುಲದೇ ಬಿಟ್ಟೂ...

ಅವಳೀಗ ತಾಯಾಗಿದ್ದಾಳೆ

ಅದು ಬಳ್ಳಿಯಂತೆ ಕಾಲಿಗೆ ತೊಡರುತ್ತಾ ಭಯದಂತೆ ಎದೆಯೊತ್ತಿ ಉಸಿರುಗಟ್ಟಿಸುತ್ತಾ ಎತ್ತಲೆತ್ತಲೂ ಕೂರಲೂ ನಿಲ್ಲಲೂ ಬಿಡದೇ ಹಠ ಹಿಡಿದ ಮಗುವಿನಂತೆ ಜೀವ ಹಿಂಡುತ್ತಿತ್ತು. ಪ್ರೀತಿಯಿಂದ ಮೃದುವಾಗಿ ಕಾತರದಿಂದ ರೂಕ್ಷವಾಗಿ ತಬ್ಬುತ್ತಿತ್ತು ಇಂಚಿಂಚೂ ವ್ಯಾಪಿಸುತ್ತಾ ಅವಳು..... ಆ...

ಬೆತ್ತಲೆ ಮಗುವು

ಎಚ್ಚರಾದ ಎಷ್ಟೋ ಹೊತ್ತಿನ ಮೇಲೆ ತೊಡೆಯಲ್ಲಿ ಜೀವಾಡುವ ಗೊಂಬೆ. ಗಾಜಿನೆರಕ ಹೊಯ್ದು ತೆಗೆದದ್ದೋ? ಸ್ಪಟಿಕದ್ದೋ? ಸ್ಪರ್ಶಕ್ಕೆ ನಿಲುಕದ ಬೆರಗು ಇದೇನಿದು? ಪಕ್ಕೆಗಳೆರಡಕ್ಕೆ ಅಂಟಿಕೊಂಡಂತೆ ಕಂಡೂ ಕಾಣದಂತಾ ಎಳಸು ರೆಕ್ಕೆ? ನೆತ್ತಿಯ ಮೇಲೆ ಕೂದಲೊಂದಿಗೇ ಪುಕ್ಕದಂತಾ...

ಬೀಡಾಡಿ ಬುದ್ಧ

ಧ್ಯಾನವಿಲ್ಲ ತಪವಿಲ್ಲ ಗಾಢನಿದ್ದೆಯಲಿ ಮೈಮರೆತವ ಅಪ್ಪಿತಪ್ಪಿ ಪಕ್ಕಕ್ಕೆ ಹೊರಳಿ ನೇರ ಈ ಮರ್ತ್ಯಲೋಕಕ್ಕೆ ಬಿದ್ದು ನೆತ್ತಿಯೊಡೆದು ಬಾಯ್ಬಿಟ್ಟು ಈ ನೆಲದಂತರಾಳಕ್ಕೂ ಆ ಅನೂಹ್ಯ ಲೋಕಕ್ಕೂ ನಡುವೆ ನಿಸ್ತಂತುವಿನೆಳೆ * ಆಯಾಸ ತುಂಬಿದ ನಿದ್ದೆಗಣ್ಣಿನಲ್ಲೇ ಕರುಳಿನಾಳಕ್ಕಿಳಿದು...

ದಾಖಲಾಗದೇ ನೆನಪಿಗಿಲ್ಲದೇ

ಇಲ್ಲಿ ಈ ಮರ್ತ್ಯಲೋಕದಲ್ಲಿ ಇರುವೆಯಾಕಳಿಕೆ ಮಿಡತೆ ನರಳಿಕೆ ಎರೆ ಹುಳುವಿನ ತೆವಳಿಕೆ ಕ್ಷಣವೂ ಎವೆ ಇಕ್ಕದೇ ದಾಖಲಾಗುವ ಈ ಅನಾದಿಯಲ್ಲಿ ಇರುವೆ ಹೆಜ್ಜೆ ಮೇಲೊಂದು ಹೆಜ್ಜೆ ಮಿಡತೆ ಮೇಲಿನ್ನೊಂದು ಮಿಡತೆ ಸತ್ತ ಎರೆಹುಳುವಿನ ದಾಖಲೆ...

ಈ ಜೀವಂತ ನೆಲದ ಮೇಲೆ

೧ ಅಲ್ಲಿ ಗಾಢ ವಾಸನೆಯ ಸತ್ತ ಒಣಕಲು ಮೀನು ಕತ್ತರಿಸಿದ ಹೊಗೆಸೊಪ್ಪಿನ ಮುರುಕಲು ತುಂಡು ಸುಟ್ಟ ಸುಣ್ಣದ ಕಲ್ಲು ತುಂಡರಿಸಿ ಬಿದ್ದ ಒಣ ಅಡಿಕೆ ಚೂರು ಗರಿಗುಡುತಿರುವ ಒಣ ಮೆಣಸು ಜಜ್ಜಿ ಬೀಜ ಬೇರ್ಪಡಿಸಿದ...

ತನ್ನಷ್ಟಕ್ಕೆ

ಭೂಮಿಯಾಳದಲ್ಲಿ ಮಾತ್ರ ಈಜುವ ಪುರಾವೆಗಳಿವೆ ಈ ಮರದ ಬೇರಿಗೆ ಹೆಬ್ಬಂಡೆಯೂ ಮಿದು ಮಣ್ಣಾಗಿ ಹುಡಿ ಹುಡಿಯೂ ಮಿಸುಕುತ್ತದಂತೆ ಕಾಣಲಾರದು ನಮ್ಮಂಥ ಪಾಮರರಿಗೆ! ಈ ಮರದ ಕೊಂಬೆ ಕೊಂಬೆಗಳಲ್ಲಿ ನೇತು ಬೀಳಬಹುದು ಯಾರೂ ಉಯ್ಯಾಲೆಯಾಡಬಹುದು ಹತ್ತಿ...