ಕಾರ್ತೀಕ

ಕನಸಿಗರಿಗೆ ಮಾಸವೇಕ ಕಣಸುತರುವ ಕಾರ್ತಿಈಕ! ನಿಯತಿ ತನ್ನ ಬಿಡುವಿಗೆಂದು ಮೀಸಲಿಡುವ ಕಾಲವಿಂದು. ನಿಗಿ ನಿಗಿ ನಿಗಿ ನಗುವ ಹಗಲು, ಝಗಿ ಝಗಿ ಝಗಿ ಝಗಿಸುವಿರಳು. ಬಹು ಮನೋಜ್ಞ ಲಲಿತ ಮಧುರ- ರಾಗ ರಚಿತ, ಭಗಣರುಚಿರ...

ಕೊಳದೆಡೆಯ ಇರುಳು

ಬುವಿಬಾನಳೆದುರವಣಿಸಿದ ಹರಿ ಪಾದಕೆ ತಲೆಯೊಡ್ಡುತ ಕೆಳ ಲೋಕಕೆ ತೆರಳುತ್ತಿಹ ಬಲಿದೊರೆಯಂದದೊಳು, ಮಿಗುವಿರುಳಿನ ನಿಡು ನೀಟಿದ ದೆಸೆ ಮೆಟ್ಟಿದ ಮುಗಿಲಡಿಯಡಿ ಮರೆಯಾದುದು ಪಗಲೈಸಿರಿ ಪಡುವಣ ಕಮರಿಯೊಳು ಹಿಮವದ್ಗಿರಿಗಹ್ವರದೆಡೆ ತಪವೆಸಗುವ ವರ ಯೋಗಿಯ ನಿಶ್ಚಲ ಕಿಂಚಿನ್ಮೀಲಿತ- ಫಾಲಾಂಬಕಮೆನಲು,...

ಮೀನಕನ್ಯೆ

ಚಾರು ಶಾರದ ಸಂಧ್ಯೆ, ನೀರ ನೀಲಾಕಾಶ ಪೇರಾಳದರ್ಣವವ ಹೋಲುತಿತ್ತು. ಜಲಸಸ್ಯ ನಿವಹದೊಲು ಜಲದವಂಚಿನೊಳಿತ್ತು, ಎಳೆಯ ಪೆರೆ ಪಾತಾಳ ಯಾನದಂತೆ. ಬಾನಿನಂತರದಲ್ಲಿ ಮೀನಂತೆ ತೇಲಿದುವು ವೈನತೇಯಗಳೆರಡು ಗರಿಯಲುಗದೆ. ಅಡಿಯೊಳಗೆ ನಾನಿದ್ದೆ ಕಡಲ ಕರುಮಾಡದೊಳು ಬಿಡುವಿಗೆಳಸುವ ಮೀನಕನ್ಯೆಯಂತೆ....

ಹೊನಲ ಹಾಡು

ಸ್ಥವಿರ ಗಿರಿಯ ಚಲನದಾಸೆ, ಮೂಕ ವನದ ಗೀತದಾಸೆ, ಸೃಷ್ಟಿ ಹೊರೆಯ ಹೊತ್ತ ತಿರೆಯ ನಗುವಿನಾಸೆ ನಾ. ಬಾಳ್ವೆಗೆಲ್ಲ ನಾನೆ ನಚ್ಚು, ಲೋಕಕೆಲ್ಲ ಅಚ್ಚುಮೆಚ್ಚು, ನಾನೆ ನಾನೆ ವಿಧಿಯ ಹುಚ್ಚು, ಹೊನಲ ರಾಣಿ ನಾ. ಕಿರಣ...

ನವೋದಯಂ

ದಾನವಹೃತ ಮೇದಿನಿಯಂ ದಂಷ್ಟಾಗ್ರದೊಳಿರಿಸಿ, ಭೂದಾರಂ ಪಾತಾಳವ- ನುಳಿದೆದ್ದನೋ ಎನಿಸಿ, ದೂರದಿಗಂತದೊಳೊಪ್ಪಿದೆ- ರವಿ ಮಂಡಿತ ಶೃಂಗಂ, ನೀಲಾಚಲಮುದ್ದೀಪಿತ ಪೂರ್ವೋದಧಿಸಂಗಂ. ಕನ್ನೆಯ ನಿದ್ದೆಯು ಸಡಿಲಲು ಮುತ್ತಿಟ್ಟನೋ ಧೀರಂ! ಹೊಲ್ಲಳ ಶಾಪಂ ತೊಲಗಿತೊ ಬಹುಗಾಢ ಗಭೀರಂ! ಚಿನ್ಮುಖವಾಯಿತೊ ಲೋಕಂ,...

ಹಿಮ್ಮಾಗಿಯ ಮಾಂದಳಿರು

ರಾಜ್ಯನೀಗಿ ಪಲಿತ ಮಾಗಿ ನಡೆದ ವಾನಪ್ರಸ್ಥನಾಗಿ; ಹೇಽಮಂತ ತಪಸ್ಸಾರ ಚೈತ್ರ ಗಾದಿಗಿನ್ನೂ ಬಾರ; ಅಂಥ ಸಂಽದಿಗ್ಧ ಸಮಯ. ಆಳ್ವರಿಲ್ಲದಿಳೆಯ ಪರಿಯ- ನೆಂತು ಪೇಳ್ವೆ? ಬಾನೊ ಬಯಲು, ಶಿಶಿರಶರಣವಾದ ನೆಳಲು, ದಹನನಿಪುಣ ಕಠಿನತಪನ, ನೀರಸತರು ನಿಬಿಡ...

ಚಂದ್ರಚುಂಬಿತ ಯಾಮಿನೀ

ಚಂದ್ರಚುಂಬಿತ ಯಾಮಿನೀ ನವವಿರಹಿ ಚಿತ್ತೋನ್ಮಾದಿನೀ, ಜಾರುತಿದೆ ಕಲನಾದಿನೀ, ಅದೊ! ಹಾಡುತಿರುವಳು ಕಾಮಿನೀ. ತರುಣಿ ವೀಣೆಯ ಮಿಡಿವಳು ತಚ್ಛ್ರುತಿಗೆ ವಾಣಿಯನೆಳೆವಳು- ಮಧುರಗೀತದ ನುಡಿಯೊಳು ತನ್ನೆದೆಯ ಭಾವವ ಮೊಗೆವಳು: ಒಲುಮೆ ಹೃದಯವ ಹೊಗಲು ಬಯಸಲು ಆರು ತಡೆಯಲು...

ಹೇಮಾವತಿಯ ತೀರದಲ್ಲಿ

ಹಗಲ ಕಣ್ಣನು ಮಂಕು ಕವಿಯಿತು, ಮುಗಿಲ ಬಾಣದ ಬಿರುಸು ಹೆಚ್ಚಿತು, ನೆಗೆದು ನೊರೆಯನು ಕೀಳುತೋಡಿತು ಮಲೆಯನಾಡಿನ ಹೇಮೆಯು. ಕರೆಯ ಮಂಟಪದೊಳಗೆ ಕುಳಿತು, ಬೆರಗುಮಾಡುವ ಪ್ರಕೃತಿಯಂದಿನ ಇರವ ನೋಡುತ ಮೂಕರಾದೆವು ನಾನು ರಾಮ ಇಬ್ಬರೂ. ಮುಗಿಲಿನಾರ್‍ಭಟ,...

ನಿನ್ನ ನಾನರಿಯೆನೈ

ನಿನ್ನ ನಾನರಿಯೆನೈ ಅರಿಯೆ ಅರಿಯೆ, ಎನ್ನ ಮೋಹವ ಮೀರಿ ನಿಂದಿರುವೆ ಹರಿಯೇ. ನಿನ್ನಿರವು ನನ್ನಿರವಿನೊಳಗೆಂದು ನೆಚ್ಚುವೆನು, ಇನ್ನೊಮ್ಮೆ ಶಂಕಿಸುವೆ ಕೆದಕಿ ಬೆದಕಿ. ನನ್ನಿ ರವ ಜಗದಿರವನೆಲ್ಲವನು ಮೀರಿರುವ ನಿನ್ನಿರವ ಮರ್‍ಮವನು ಎಂತರಿವೆ ಹರಿಯೇ? ನಿನ್ನ...