ಹನಿಗವನ ಉಮರನ ಒಸಗೆ – ೯ ಡಿ ವಿ ಗುಂಡಪ್ಪ March 19, 2024January 28, 2024 ದೊರೆತನವದೆಷ್ಟು ಸೊಗವೆನ್ನುತಿರುವರು ಪಲರು; ಸೊಗವು ಪರಲೋಕದೊಳಗೆನ್ನುವರು ಕೆಲರು; ಕೈಯ ರೊಕ್ಕವ ಕೊಂಡು ಕಡದ ಲೆಕ್ಕವನಳಿಸು; ಕೇಳು ದೂರದ ಮೃತ್ಯು ಭೇರಿಯಬ್ಬರವ. ***** Read More
ಇತರೆ ಆತ್ಮಸ್ಥೈರ್ಯ ದೇಶಪಾಂಡೆ ಎಂ ಜಿ March 19, 2024March 17, 2024 ಕಾಲದ ಸಾಗರದಲ್ಲಿ ನಮ್ಮ ಜೀವನದ ಡೋಣಿ ತೇಲುತ್ತಾ ಮುಂದೆ ಸಾಗುವಾಗ ಕಷ್ಟ ಪರಂಪರೆ ಮಾನವನಿಗೆ ಬೆನ್ನಟ್ಟಿ ಬರುತ್ತವೆ. ಹೆಜ್ಜೆ ಹೆಜ್ಜೆಗೂ ಕಷ್ಟ-ದುಃಖಗಳು ನಮ್ಮನ್ನು ಕಾಡುವಾಗ ಎದೆಗುಂದದೆ ಅವುಗಳನ್ನು ಎದುರಿಸುವ ಆತ್ಮವಿಶ್ವಾಸ, ಆತ್ಮಸ್ಥೆರ್ಯ ನಾವು ತುಂಬಿಕೊಳ್ಳಬೇಕಾಗುತ್ತದೆ.... Read More
ಕವಿತೆ ಚಂದ್ರಚುಂಬಿತ ಯಾಮಿನೀ ಪು ತಿ ನರಸಿಂಹಾಚಾರ್ March 19, 2024April 9, 2024 ಚಂದ್ರಚುಂಬಿತ ಯಾಮಿನೀ ನವವಿರಹಿ ಚಿತ್ತೋನ್ಮಾದಿನೀ, ಜಾರುತಿದೆ ಕಲನಾದಿನೀ, ಅದೊ! ಹಾಡುತಿರುವಳು ಕಾಮಿನೀ. ತರುಣಿ ವೀಣೆಯ ಮಿಡಿವಳು ತಚ್ಛ್ರುತಿಗೆ ವಾಣಿಯನೆಳೆವಳು- ಮಧುರಗೀತದ ನುಡಿಯೊಳು ತನ್ನೆದೆಯ ಭಾವವ ಮೊಗೆವಳು: ಒಲುಮೆ ಹೃದಯವ ಹೊಗಲು ಬಯಸಲು ಆರು ತಡೆಯಲು... Read More