ಆತ್ಮಸ್ಥೈರ್ಯ

ಆತ್ಮಸ್ಥೈರ್ಯ

ಕಾಲದ ಸಾಗರದಲ್ಲಿ ನಮ್ಮ ಜೀವನದ ಡೋಣಿ ತೇಲುತ್ತಾ ಮುಂದೆ ಸಾಗುವಾಗ ಕಷ್ಟ ಪರಂಪರೆ ಮಾನವನಿಗೆ ಬೆನ್ನಟ್ಟಿ ಬರುತ್ತವೆ. ಹೆಜ್ಜೆ ಹೆಜ್ಜೆಗೂ ಕಷ್ಟ-ದುಃಖಗಳು ನಮ್ಮನ್ನು ಕಾಡುವಾಗ ಎದೆಗುಂದದೆ ಅವುಗಳನ್ನು ಎದುರಿಸುವ ಆತ್ಮವಿಶ್ವಾಸ, ಆತ್ಮಸ್ಥೆರ್ಯ ನಾವು ತುಂಬಿಕೊಳ್ಳಬೇಕಾಗುತ್ತದೆ.

ಡಿ. ವಿ. ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಬಹಳ ಸುಂದರವಾಗಿ ಅರಹುತ್ತಾರೆ.

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ-ದುರ್ಬಲರಿಗೆ
ಎಲ್ಲರೊಳಗೊಂದಾಗು-ಮಂಕುತಿಮ್ಮ

ಬೆಟ್ಟದಡಿಯಲ್ಲಿರುವ ಹುಲ್ಲಿನಂತಿದ್ದರೆ ಯಾರಾದರೂ ಮೇಲಿಂದ ಬಿದ್ದರೆ ನೀನು ಅವರನ್ನು ಸುಖವಾಗಿಡಲು ಸಾಧ್ಯ. ಜೊತೆಗೆ ಆ ಹುಲ್ಲನ್ನು ಹಸು-ಕರುಗಳೂ ಕೂಡ ತಿಂದು ತೃಪ್ತಿ ಪಡೆಯುವಂತಾಗಲಿ. ನಿನ್ನ ಮನೆಗೆ ನೀನು ಸುಗಂಧವನ್ನು ಬೀರುವ ಮಲ್ಲಿಗೆಯ ಹೂವಾಗು. ಎಲ್ಲರೂ ನಿನ್ನನ್ನು ನೋಡುವಂತಿರಲಿ. ಕಷ್ಟಗಳ ಮಳೆಯನ್ನು ವಿಧಿ ನಿನ್ನಮೇಲೆ ಸುರಿಸಿದಾಗ ದೃಢಚಿತ್ತನಾಗಿ ನಿಲ್ಲು, ಆ ಕಷ್ಟಗಳು ನಿನ್ನನ್ನು ಏನೂ ಮಾಡಲಾರವು. ಜಗತ್ತಿನಲ್ಲಿರುವ ದೇವರು ಮತ್ತು ದುರ್ಬಲರ ಪಾಲಿಗೆ ಸಿಹಿಯನ್ನು ಕೊಡುವ ಬೆಲ್ಲ ಮತ್ತು ಸಕ್ಕರೆಯಾಗು. ಒಟ್ಟಿನಲ್ಲಿ ಸಮರಸದಿಂದ ಬಾಳು ಎಂಬ ಕವಿಯ ಅನುಭವದ ನುಡಿ ನಮ್ಮಲ್ಲಿ ಧೈರ್ಯವನ್ನು ತುಂಬುತ್ತದೆ. ಇಂಥ ಕಷ್ಟಗಳು ಬುರುವುದಕ್ಕೆ ಮುಖ್ಯಾವಾಗಿ ನಾವೂ ಕಾರಣವಾಗುತ್ತೇವೆ. ನಿತ್ಯ ಬಾಳಿನಲ್ಲಿ ನಮಗೆ ಲಭಿಸಿದಕ್ಕಿಂತಲೂ ಜಾಸ್ತಿಯನ್ನು ಅಪೇಕ್ಷಿಸುವುದೇ ಇದಕ್ಕೆಲ್ಲ ಕಾರಣ. ತೃಪ್ತಿ, ಸಮಾಧಾನ, ನಮ್ಮ ಅಂತಃರಂಗದಲ್ಲಿ ಗೂಡು ಕಟ್ಟಬೇಕು.

‘ಕಷ್ಟ ಬಂದಾಗ ಕಲ್ಲಿನಂತಾಗು, ಸುಖ ಬಂದಾಗ ಬಂದಾಗ ಹೂವಿನಂತೆ ಮೃದುವಾಗು. ಶರಣರ ಮಾತೊಂದು ಬರುತ್ತದೆ. ಬಾಳಿನಲ್ಲಿ ಬರುವ ಕಷ್ಟಗಳನ್ನೆಲ್ಲ ಅನುಭವವನ್ನಾಗಿ ಅಳವಡಿಸಿಕೊಂಡು ಬಾಳಿಗೆ ಒಂದು ನಿರ್ದಿಷ್ಟ ದಾರಿ ರೂಪಿಸಿಕೊಂಡು ಅದನ್ನು ತಲುಪುವಂತೆ ಸಾಗಬೇಕು. ಎಂದು ಮ್ಯಾಕ್ಸ್‌ಮಲ್ಲರ್‌ರು ಹೇಳುತ್ತಾರೆ.

‘ಆತ್ಮಸ್ಥೈರ್ಯ’ ಇಲ್ಲದಿದ್ದರೆ ಸಾರ್ಥಕ ಬದುಕಿಲ್ಲ. ಅಕ್ಕಸಾಲಿಗನು ಬಂಗಾರಕ್ಕೆ ಬೆಂಕಿಯಲ್ಲಿ ಹಾಕಿ ಪರೀಕ್ಷಿಸುವ ಹಾಗೆ ಕಬ್ಬಿಣಕ್ಕೆ ಒರೆಗೆ ಹಚ್ಚಿ ನೋಡುವನೆ! ಹಾಗೇ ಉತ್ತಮರಾಗಿ, ಸಚ್ಚಾರಿತ್ರ್ಯವುಳ್ಳವರಾಗಿ ಬಾಳುವಾಗ ನಮ್ಮನ್ನು ಪರೀಕ್ಷೆಗೆ ಒಡ್ಡುವಂತೆ ದೇವರು ನಮಗೆ ಕಷ್ಟಗಳ ನೀಡಿ ಪರೀಕ್ಷಿಸುತ್ತಾನೆ. ಅಂತಹ ಸಮಯದಲ್ಲಿ ಅವುಗಳನ್ನು ಎದುರಿಸುವ ದಿಟ್ಟತನವಿಲ್ಲದಿದ್ದರೆ ನಾವು ಹೇಡಿಗಳಾಗಿಯೇ ಜೀವಿಸಬೇಕಾಗುತ್ತದೆ. ಯುದ್ಧಕ್ಕೆ ಹೋದಾಗ ವೈರಿಯ ತೀವ್ರ ಆಕ್ರಮಣಕ್ಕೆ ಭಯದಿಂದ ಬೆನ್ನು ಕೊಟ್ಟು ಹಿಂದಕ್ಕೋಡಿದರೆ ನಮ್ಮ ಯೋಧರೇ ನಮ್ಮ ಮೇಲೆ ಪ್ರಹಾರ ಮಾಡುವಂತೆ ಕಷ್ಟಗಳಿಗೆ ಹೆದರಿದರೆ ನಮ್ಮೊಳಗಿನ ಆತ್ಮವಿಶ್ವಾಸ ಇಲ್ಲವಾಗಿ ಸಾವಿನ ಅಂಚಿಗೆ ನಾವು ತಲುಪಬೇಕಾಗುತ್ತದೆ.

ನಮ್ಮ ಸಂತರು ಕಷ್ಟ-ಸುಖಗಳಿಗೆ ಸ್ಪಂದಿಸದೇ ಸಮನಾಗಿ ಸ್ವೀಕರಿಸಬೇಕು. ನಾವು ಟೀವಿಯಂತೆ ಬಾಳಬೇಕೆನ್ನುತ್ತಾರೆ. ಟೀವಿಯು ಪರದೆಯ ಮೇಲೆ ನಡೆಯುವ ಎಲ್ಲ ಘಟನೆಗಳಿಗೂ ಟೀವಿ ಮುಗ್ಧವಾಗಿ ಸ್ವೀಕರಿಸುವಂತೆ ಬಾಳನ್ನ ಹಾಗೇ ನಾವು ಸಹಜವಾಗಿ ಸ್ವೀಕರಿಸಿದಾಗ ಅದೊಂದು ಸಾರ್ಥಕ ಬದುಕಾಗುತ್ತದೆ. ಅಂದಹಾಗೆ ‘ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎಂದು ಗಾದೆಯೊಂದು ದಕ್ಕಿದೆ ಪ್ರಸಾದವೆಂದು ಖುಷಿಯಿಂದ ಇರಬೇಕೆಂದು ಹೇಳಿದರೆ ಗೌತಮ ಬುದ್ಧರು ‘ಆಸೆಯೇ ದುಃಖಕ್ಕೆ ಕಾರಣ’ ಎಂದು ಹೇಳಿದರು. ಆಸೆ-ಬಯಕೆ ಸ್ವಾರ್ಥಗಳು ದೂರವಿಟ್ಟು ಬಾಳಿದಾಗ ಮಾತ್ರ ನಿಜವಾದ ಜೀವನದ ಗುರಿ ಸಾಧಿಸಲು ಸಾಧ್ಯ.

ರಂಗನಾಥ ದಿವಾಕರರು ಒಂದು ಕಡೆ ಸಮಸ್ಯೆಗಳಿಂದಲೇ ಜೀವನ, ಸಮಸ್ಯೆಗಳಿಂದಲೇ ಸಂಸಾರ, ಸಮಸ್ಯೆಗಳೇ ಎಲ್ಲ ಚಟುವಟಿಕೆಗಳಿಗೆ ಕಾರಣ ಎನ್ನುತ್ತಾರೆ. ಮಹಾಭಾರತದಲ್ಲಿ ಕುಂತಿ ತನ್ನ ಸೋದರಳಿಯ ಶ್ರೀ ಕೃಷ್ಣನಿಗೆ ವರದ ರೂಪದಲ್ಲಿ ಕಷ್ಟ ಬೇಡುತ್ತಾಳೆ. ಅಂದಹಾಗೇ ಕಷ್ಟಗಳೇ ನಮ್ಮ ಯಶಸ್ಸಿನ ಬದುಕಿನ ಮೆಟ್ಟಲುಗಳು, ಅದಕ್ಕೆ ದ.ರಾ. ಬೇಂದ್ರೆಯವರು ಒಂದು ಕಡೆ `ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ’ ಎಂದರು. ಕಷ್ಟ-ಸುಖಗಳ ಸಮ್ಮಿಶ್ರಣದಿಂದ ಬದುಕು ಸಿಹಿ ಜೇನಾಗಲು ಸಾಧ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದ್ರಚುಂಬಿತ ಯಾಮಿನೀ
Next post ಉಮರನ ಒಸಗೆ – ೯

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…