Home / ಲೇಖನ / ವಿಜ್ಞಾನ / ಮಾನವ ಜೀವ ಸೃಷ್ಠಿಯಾದದ್ದೂ ಸಮುದ್ರ ಬಂಡೆಯ ನಡುವೆ

ಮಾನವ ಜೀವ ಸೃಷ್ಠಿಯಾದದ್ದೂ ಸಮುದ್ರ ಬಂಡೆಯ ನಡುವೆ

ಜೀವಾಣುಗಳ ಸಂಗಮಿಕೆಯಿಂದ ಈ ಜೀವ ಭೂಮಿಯ ಮೇಲೆ ಸೃಷ್ಠಿಯಾಯಿತೆಂದು ಅನೇಕರ ವಾದ. ಆದರೆ ಈ ಜೀವಸೃಷ್ಟಿ ಮಹಾಸಾಗರದ ತಳದಲ್ಲಿ ಕಾಣಿಸಿಕೊಂಡಿದ್ದ ಬಿರುಕುಗಳಿಂದ ಬರುವ, ಕರಗಿದ ಬಂಡೆಗಳಿಂದ ಕುದಿಯುವ ನೀರಿನಲ್ಲಿ ಈ ಜೀವ ಸೃಷ್ಟಿಗೊಂಡಿತೆಂದು ಇತ್ತೀಚೆಗೆ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ನೀರಿನಲ್ಲಿ ಪ್ರಾಣವಾಯು ಏನೂ ಇರಲಿಲ್ಲ. ಅದರಲ್ಲಿ ಜಲಜನಕ ಸಲ್ಪ್ರೇಡ್ ಇತ್ತು. ಇಂಧನವು ಕೊಳೆತ ಮೊಟ್ಟೆಯಂತೆ ದುರ್ವಾಸನೆಯಿಂದ ಕೂಡಿತ್ತು ಈ ನೀರಿನಿಂದ ಅಲ್ಲಿಯ ಕಲ್ಲಿನಿಂದ ಅಗ್ನಿದಿಕ್ಷೆಯಾಗಿ ಆ ಬಂಡೆಯಲ್ಲಿ ಗಂಧಕ ಇದ್ದುದರಿಂದ ತಳವು ಗಂಧಕ ಮಯವಾಗಿತ್ತು. ಈ ಸ್ಥಳದಲ್ಲಿ ಪ್ರಥಮ ಜೀವಾಣು ರೂಪುಗೊಂಡಿತು.

ಆರಂಭದ ಕಾಲದಲ್ಲಿ ಜೀವರಾಶಿಗಳು ತಮ್ಮ ಶಕ್ತಿ ಅವಶ್ಯಕತೆಗಳನ್ನು ಜಲಜನಕ ಸೆಲ್ಫೈಡ್‌ಗಳಿಂದ ಪಡೆದುಕೊಂಡವು. ಈ ಕಾಲದ ಹಸಿರು ಸಸ್ಯಗಳು ಅದೇ ರೀತಿ ತಾವು ಬದುಕುವುದಕ್ಕೆ ಬೇಕಾದ ಸಕ್ಕರೆಯನ್ನು ನಿರ್ಮಿಸಿಕೊಳ್ಳುತ್ತವೆ. ನೀರು ಹೈಡ್ರೋಜನ್ ಆಕ್ಸೈಡ್‌ನಿಂದ ಕೂಡಿತ್ತು ಜತೆಗೆ ಕಾರ್ಬನ್ ಡೈ ಆಕ್ಸೈಡ್ ಕೂಡ ಇತ್ತು. ಜೀವನಿರ್ಮಾಣಗೊಳ್ಳುವುದಕ್ಕೆ ಹೆಚ್ಚು ಅತ್ಯಾಧುನಿಕವಾದ ರಸಾಯನದ ಕ್ರಿಯೆ ಬೇಕಾಗುತ್ತದೆ. ಅದು ಯುಗಗಳಿಂದ ಯುಗಗಳವರೆಗೆ ನಡೆದುಕೊಂಡು ಬಂದಿರುತ್ತದೆ. ಜೀವರಾಶಿಯು ೩೮೦ ಕೋಟಿ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಕಾಣಿಸಿಕೊಂಡ ಕಾಲದಿಂದಲೂ ಇಲ್ಲಿಯ ಜೀವ ಪರಿಸ್ಥಿತಿಯು ನಾಟಕೀಯ ರೀತಿಯಿಂದ ಬದಲಾವಣೆಗೊಂಡಿದೆ. ಆದರೆ ಜೀವ ಇಂದಿಗೂ ಸಮುದ್ರ ಕೆಳಗೆ ಜ್ವಾಲಾಮುಖಿಗಳಿಂದ ಬದುಕಿ ಉಳಿದಿದೆ. ಜೀವವನ್ನು ಪೋಷಣೆ ಮಾಡುವ ಕ್ರಿಮಿಗಳಿಗೆ ಭಾರಿ ಹೆಚ್ಚಿನ ಉಷ್ಣತಾಮಾನ ಬೇಕಾಗುತ್ತದೆ. ಅದು ಬಂಡೆಗಳ ರಾಸಾಯನಿಕ ಶಕ್ತಿಯಲ್ಲಿದೆ ಎಂದು ವಿಜಾನಿಗಳು ಹೇಳುತಾರೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...