Home / Vishwanatha Adiga

Browsing Tag: Vishwanatha Adiga

ಎಂದಿನಂತೆ ಹೂವಯ್ಯ ಸಮಯಕ್ಕ ಸರಿಯಾಗಿ ತಮ್ಮ ಮನೀಂದ ಹೊರಗ ಬಿದ್ದರು. ಬರತಾ ದಾರಾಗ ದಣೀ ಮನಿ ಹೊಸ್ತಿಲಾ ಮುಟ್ಟಿ ಸಣ್ ಮಾಡೀನಽ ದಿನಾ ಕಚೇರಿಗೆ ಎಡತಾಕೋದು. ಹಂಗಂತ ಸ್ವಾತಂತ್ರ್ಯ ಸಿಕ್ಕು ಏಸ್ ವರ್‍ಷಾಗಿರಬಹುದು ಅನ್ನಾ ಲೆಕ್ಕಾ ಹಾಕಾಂಗಿಲ್ಲ. ಮುಂಜಾನ...

ಎಂದಿನಂತೆ ನ್ಯಾಯಾಲಯದ ಆವರಣ ಜನರಿಂದ ಕಿಕ್ಕಿರಿದಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವಂತಿದ್ದ ಕಿರಿಯ ವಕೀಲರುಗಳು ಕರಿಯ ಕೋಟಿನ ಒಳಗೆ ಬೆವೆಯುತ್ತಿದ್ದದ್ದು ಲೆಕ್ಕಕ್ಕಿರಲಿಲ್ಲ. ದಫ್ತರ ಹಿಡಿದ ಹಿರಿಯ ಲಾಯರುಗಳು ಮಾತನ್ನೇ ಬಂಡವಾಳ ಮಾಡಿಕೊಂಡ...

ಇಲ್ಲಿ ಎಲ್ಲರೂ ಕ್ಷೇಮ ಎಂದು ಪತ್ರ ಪ್ರಾರಂಭಿಸಿದೆ. ನಾನು ಕ್ಷೇಮ ಎಂದು ಮೊದಲಾಗಬೇಕಿತ್ತು. ಆ ಮೇಲೆ ನಿಮ್ಮ ಕ್ಷೇಮಕ್ಕೆ ಎಂದು ಮುಂದುವರಿಸಿದ್ದರೆ ನನ್ನತನವನ್ನು ಢಾಳಾಗಿ ಕಾಣಿಸಬಹುದಿತ್ತೇನೋ! ನನ್ನತನ ಏನು ಬಂತು. ಮನುಷ್ಯತನವನ್ನೇ ಶಬ್ದಗಳಲ್ಲಿ ಬಿ...

ಸುಮೋಗಾಡಿ ಮನೆ ಬಿಡುವಾಗ ಬೆಳಗಿನ ಯಾಮದ ಚುಮುಚುಮು ಚಳಿ ಇನ್ನೂ ಬಿಟ್ಟಿರಲಿಲ್ಲ. ವಿಹಾರ ಹೊರಟಿದ್ದ ನಮಗೆ ಚಳಿಯ ಅನುಭವದ ಸಂಭವವೇ ಇರಲಿಲ್ಲ. ಅಷ್ಟೊಂದು ಉಮೇದಿನಲ್ಲಿದ್ದೆವು. ರಸ್ತೆಯ ಎರಡೂ ಕಡೆಗಳಲ್ಲಿ ಹಸಿರಿನಿಂದ ತೊನೆಯುವ ಹೆಮ್ಮರಗಳನ್ನು ಹಿಂದೆ ...

ಮೇಟಗಳ್ಳಿ ಬಸ್ ನಿಲುಗಡೆಯಲ್ಲಿ ನಿಂತ ನಗರ ಸಾರಿಗೆ ವಾಹನವನ್ನು ಏರಿದೆ. ಜನದಟ್ಟಣೆ ಇರದೆ ಪೀಠಗಳು ಬಿಕೋ ಎನ್ನುತ್ತಿದ್ದವು. ಊರಿಗೆ ಪ್ರಯಾಣಿಸಲು ಜಾಗ ಕಾಯ್ದಿರಿಸಲೋಸುಗ ಕೇಂದ್ರ ನಿಲ್ದಾಣಕ್ಕೆ ಹೋಗಬೇಕಾಗಿತ್ತು. ಚೀಟಿ ಪಡೆದು ಮೂರು ಪೀಠಗಳ ಆಸನದಲ್ಲ...

ಈ ಊರಿಗೆ ನೀವು ಅಪ್ಪಿತಪ್ಪಿ ಬಂದೀರಿ. ಯಾವುದೋ ಗುಂಗನಾಗ ಬರಬರಾನ ದಾರಿಗಡ್ಡ ಚಾಚಿದ ಜಾಲಿ ಕಂಟಿ ನಿಮ್ಮ ಅಂಗಿ ಪರಚಿ ಬರಮಾಡಿಕೊಂಡಿತು. ಗಕ್ಕನ ನಿಂತು ಜಗ್ಗಿದ್ದನ್ನ ಬಿಡಿಸೋ ಪಜೀತಿ ನೋಡಿದ ಮಂದಿ ಹುಳ್ಳುಳ್ಳಗ ನಗಾಕ ಹತ್ತಿದ್ದರು. ಅದೂ ಅಲ್ದಾ ನೀವು...

‘ಅಗದೀ ಹರಕತ್ತ ಐತಿ, ನಿಮ್ಮಣ್ಣಗ ಕೇಳಿ ಒಂದೈದು ಸಾವಿರ ಇಸ್ಕೊಂಬಾ’ – ಎಂದು ನನ್ನ ಗಂಡ ತವರಿಗೆ ಕಳಿಸಾಕ ಮೊದಲ ವರಾತ ಹಚ್ಚಿದ್ದರು. ಮತ್ತ ಮತ್ತ ಒತ್ತಾಯಿಸೋ ಗಂಡನ ಹಿಂಥಾ ಮಾತು ಬಿಸೇ ತುಪ್ಪ ಆಗಿತ್ತು. ಅವರ ಹರಕತ್ತು ಏನೂಂತ ನಂಗ ಗೊತ್ತಿಲ್...

ಆರು ಗಂಟೇಕ್ಕ ಚಾದಂಗಡಿ ಬಳಗ ಕಾಲಿಡ್ತಾನಽ ಕ್ಯಾಷಿಯರ್ ಬಾಬು ಬಂದು ಸಣ್ಣಗ ನಡಗೋ ದನಿಯಾಗ ಹೇಳಿದ ಮಾತು ಕೇಳ್ತಾನ ಎದಿ ಬಡಬಡಿಸಾಕ ಹತ್ತಿತ್ತು. ಭಯಕ್ಕ ಅಂವ ಬೆಂವತಿದ್ದ. ಮಾತು ತಡವರಿಸಿ ಬರತಿದ್ದವು. ಮೊದಲಿಗೆ ನೋಡ್ತಾನಽ ಏನೋ ಅವಘಡ ಆಗೇದ ಅನಿಸಿತ್ತ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....